ಸುದ್ದಿವಿಜಯ,ಜಗಳೂರು: ದಾವಣಗೆರೆ ಜಿಲ್ಲೆಯಲ್ಲಿ ಅತ್ಯಂತ ವೈವಿಧ್ಯಮಯ ಪರಿಸರ ಇರುವ ಜಗಳೂರು ತಾಲೂಕಿನಲ್ಲಿ ದ್ವಿದಳ ಧಾನ್ಯಗಳಾದ ಶೇಂಗಾ ಬೆಳೆಗೆ ಪೂರಕವಾದ ವಾತಾವರಣ ಇದ್ದು, ರೈತರು ಬೆಳೆಯುವ ವಿಧಾನಗಳ ಬಗ್ಗೆ ತಿಳಿದುಕೊಂಡರೆ ಉತ್ಪಾದನೆ ವೃದ್ಧಿಸಿ ಕೊಳ್ಳಬಹುದು ಎಂದು ಕೆವಿಕೆ ಬೇಸಾಯ ತಜ್ಞ ಬಿ.ಓ.ಮಲ್ಲಿಕಾರ್ಜುನ ರೈತರಿಗೆ ಸಲಹೆ ನೀಡಿದರು.
ತಾಲ್ಲೂಕಿನ ಸಿದ್ದಮ್ಮನಹಳ್ಳಿ ಗ್ರಾಮದಲ್ಲಿ ರಾಷ್ಟ್ರೀಯ ಎಣ್ಣೆ ಕಾಳು ಯೋಜನೆ ಅಡಿಯ ಗುಚ್ಚ ಗ್ರಾಮಗಳ ಮುಂಚೂಣಿ ಪ್ರಾತ್ಯಕ್ಷಿಕೆ ಶೇಂಗಾ ಬೆಳೆಯ ಕ್ಷೇತ್ರೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮ ಉದ್ಧಾಟಿಸಿ ಈ ವೇಳೆ ಮಾತನಾಡಿದ ಅವರು,ಶೇಂಗಾ ಪ್ರಮುಖವಾದ ಎಣ್ಣೆ ಕಾಳು ಬೆಳೆ, ನವೀನ ತಳಿಗಳಾದ G2-52 ಈ ಭಾಗದಲ್ಲಿ ಹೆಚ್ಚು ಬೆಳೆಯಲಾಗುತ್ತಿದ್ದು, ರೈತರು ಬೇಸಿಗೆ ಅಂಗಾಮಿನಲ್ಲಿ ಬೀಜೋದ್ಪಾದನೆ ಮಾಡಿ ಹೆಚ್ಚು ಆದಾಯವನ್ನು ಗಳಿಸಬಹುದು ಹಾಗೂ ಹೈನುಗಾರಿಕೆ ಮಾಡುವ ರೈತರಿಗೆ ಶೇಂಗಾದ ಹಸಿರು ಮೇವು ಹಾಗೂ ಒಣಗಿದ ಹೊಟ್ಟು ಕೂಡ ಸಿಗುತ್ತದೆ ಎಂದರು.
ಸಸ್ಯ ಸಂರಕ್ಷಣೆ ತಜ್ಞರಾದ ಡಾ. ಅವಿನಾಶ್ ಟಿ ಜಿ ಮಾತನಾಡಿ, ಸರಿಯಾದ ಸಮಯಕ್ಕೆ ನೀರು , ಗೊಬ್ಬರ ಹಾಗೂ ಕೀಟಗಳ ನಿರ್ವಹಣೆ ಮಾಡಿದರೆ ಅಧಿಕ ಇಳುವರಿ ಪಡೆಯಬಹುದು ಎಂದರು.
ಪ್ರಗತಿಪರ ರೈತರಾದ ಬಸವರಾಜ್ ಮಾತನಾಡುತ್ತಾ, ಶೇಂಗಾ ಬೆಳೆಯು, ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳ ಮಾರ್ಗದರ್ಶನದಲ್ಲಿ ಉತ್ತಮವಾಗಿ ಬಂದಿದ್ದು, ವಾತಾವರಣದ ವೈಫಲ್ಯದಿಂದ ಇಳುವರಿಯು ಕಡಿಮೆಯಾಗಿದೆ. ಆದರೆ ಸಮಯಕ್ಕೆ ಸರಿಯಾಗಿ ನೀರು, ಪೋಷಜಾಂಶ ಯುತ ಗೊಬ್ಬರ ಕೊಟ್ಟರೆ ಕಾಳುಗಲ್ಲಿ ಎಣ್ಣೆ ಅಂಶ ವೃದ್ದಿಯಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಸಿದ್ದಮ್ಮನಹಳ್ಳಿಯ ಮುಂಚೂಣಿಯ ಪ್ರಾತ್ಯಕ್ಷಿಕೆ ರೈತರು ಭಾಗವಹಿಸಿದ್ದರು.