ಸುದ್ದಿವಿಜಯ, ಜಗಳೂರು: ತಾಲ್ಲೂಕಿನ ಗುರುಸಿದ್ದಾಪುರ ಗ್ರಾಪಂ ಅಧ್ಯಕ್ಷರಾಗಿ ಕೆ.ರಮೇಶ್, ಉಪಾಧ್ಯಕ್ಷರಾಗಿ ಕರಿಬಸಮ್ಮ ಮಂಗಳವಾರ ಆಯ್ಕೆಯಾದರು.
15 ಸದಸ್ಯ ಬಲದ ಗುರುಸಿದ್ದಾಪುರ ಗ್ರಾಪಂಗೆ ಸಾಮಾನ್ಯ ಮೀಸಲು ಕ್ಷೇತ್ರಕ್ಕೆ ನಿಗದಿಯಾಗಿದ್ದ ಅಧ್ಯಕ್ಷ ಮತ್ತು ಪರಿಶಿಷ್ಟ ಪಂಗಡ ಸಾಮಾನ್ಯ ಮಿಸಲಾಗಿದ್ದ ಉಪಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಗುರುಸಿದ್ದಾಪುರ ರಮೇಶ್ ಮತ್ತು ಉಪಾಧ್ಯಕ್ಷರಾಗಿ ಕರಿಬಸಮ್ಮ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿಗಳಾದ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗದ ವಿ.ಎಲ್. ಶಿವಮೂರ್ತಿ ರವರು ತಿಳಿಸಿದರು.
ಅಧ್ಯಕ್ಷ ಸ್ಥಾನಕ್ಕೆ ಮಡ್ರಳ್ಳಿ ಗ್ರಾಪಂ ಸದಸ್ಯ ಕೆ. ರಮೇಶ್ ಮತ್ತು ಮಾಗಡಿ ಗ್ರಾಮದ ಸದಸ್ಯ ಗುರುಸ್ವಾಮಿ, ಉಪಾಧ್ಯಕ್ಷ ಸ್ಥಾನಕ್ಕೆ ಕರಿಬಸಮ್ಮ ಮತ್ತು ಮಾರಕ್ಕ ನಾಮಪತ್ರಗಳನ್ನು ಸಲ್ಲಿಸಿದ್ದರು. ಕ್ರಮವಾಗಿ ಕೆ. ರಮೇಶ್ ರವರು 8 ಮತಗಳನ್ನು ಪಡೆದರು ಗುರುಸ್ವಾಮಿ 7 ಮತಗಳನ್ನು ಪಡೆದರು.
ಕರಿಬಸಮ್ಮ ರವರು ಒಂಬತ್ತು ಮತಗಳನ್ನು ಪಡೆದು ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾದರು. ಈ ಸಂದರ್ಭದಲ್ಲಿಪಿಡಿಒ ವಾಸುದೇವ್, ಜಿಪಂ ಮೆನೇಜರ್ ದಾದಾಪೀರ್, ಗ್ರಾಮ ಪಂಚಾಯತಿ ಸಿಬ್ಬಂಗಳಾದ ಕರಿಯಪ್ಪ, ಸಂತೋಷ್ ಹಾಗೂ ಗ್ರಾಮ ಪಂಚಾಯತಿ ಸದಸ್ಯರುಗಳು ಉಪಸ್ಥಿತರಿದ್ದರು.