ಸುದ್ದಿವಿಜಯ,ಜಗಳೂರು: ತಾಲ್ಲೂಕಿನ ಗುತ್ತಿದುರ್ಗ ಗ್ರಾಪಂ ಅಧ್ಯಕ್ಷರಾಗಿ ಗುತ್ತಿದುರ್ಗ ಗ್ರಾಪಂ ಸದಸ್ಯೆ ಎಂ.ಬಿ.ಮಾನಸಾ ನಿಂಗಪ್ಪ, ಉಪಾಧ್ಯಕ್ಷರಾಗಿ ಮೆದಗಿನಕೆರೆ ಗ್ರಾಮದ ಎಂ.ವಿ.ಅರ್ಜುನ್ ಗುರುವಾರ ಅವಿರೋಧವಾಗಿ ಆಯ್ಕೆಯಾದರು.
16 ಜನ ಸದಸ್ಯರಲ್ಲಿ 14 ಜನ ಸದಸ್ಯರು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ಎರಡನೇ ಬಾರಿಗೆ ಅಧ್ಯಕ್ಷರ, ಉಪಾಧ್ಯಕ್ಷರ ಆಯ್ಕೆಯಲ್ಲಿ ಅಧ್ಯಕ್ಷ ಸ್ಥಾನ ಎಸ್‍ಟಿ ಮಹಿಳೆಗೆ ಮೀಸಲಾಗಿತ್ತು. ಮಾನಸಾ ಮಾತ್ರ ನಾಮಪತ್ರ ಸಲ್ಲಿಸಿದ್ದರು.
ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಪುರುಷ ಸದಸ್ಯರಿಗೆ ಮೀಸಲಾಗಿತ್ತು. ಅರ್ಜುನ್ ಮಾತ್ರ ನಾಮಪತ್ರ ಸಲ್ಲಿಸಿದ ಕಾರಣ ಇಬ್ಬರನ್ನು ಅಧ್ಯಕ್ಷ, ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿಯೂ ಆಗಿದ್ದ ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಲಿಂಗರಾಜು ತಿಳಿಸಿದರು.ಈ ಸಂದರ್ಭದಲ್ಲಿ ಗುತ್ತಿದುರ್ಗ ಗ್ರಾಮದ ಕಲ್ಲೇಶ್, ಮಾಜಿ ಅಧ್ಯಕ್ಷ ನಾಗಲಿಂಗಪ್ಪ, ದೇವರಾಜ್, ಈಶ್ವರಯ್ಯ, ಮಹಾಂತೇಶ್, ಜ್ಯೋತಿ ನಾಯ್ಕ್, ಮಾಜಿ ಅಧ್ಯಕ್ಷ ಜಿ.ಈ.ಬಸವನಗೌಡ, ದೇವೇಂದ್ರಪ್ಪ, ಹನುಂತಪ್ಪ, ರಾಮಪ್ಪ,
ಸದಸ್ಯರಾದ ಗ್ರಾಯಿತಿ ಬಾಯಿ, ಟಿ.ಕುಮಾರ್, ಜಾನಮ್ಮ, ಎನ್. ಕವಿತಾ ಕುಮಾರಿ, ಅನುಸೂಯಮ್ಮ, ಕೊಟ್ರೇಶ್, ಗಿರಿಜಮ್ಮ, ಹನುಮಕ್ಕ, ಎಚ್.ಹನುಮಂತಪ್ಪ, ನಟರಾಜ್, ಎಚ್.ಜಿ.ನಿಜಲಿಂಗಪ್ಪ, ಎಚ್.ರೇಣುಕಮ್ಮ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.