ಸುದ್ದಿವಿಜಯ, ಜಗಳೂರು: ಪಟ್ಟಣದ ಹೋ.ಚಿ.ಬೋರಯ್ಯ ಸ್ಮಾರಕ ಕಾಲೇಜು, ಜಿಲ್ಲಾಡಳಿತ, ತಾಪಂ, ದಾವಣಗೆರೆಯ ನೆಹರು ಯುವ ಕೇಂದ್ರ, ದಾವಣಗೆರೆ ವಿವಿಯ ರಾಷ್ಟ್ರೀಯ ಸೇವಾ ಯೋಜನೆ ಸಂಯುಕ್ತಾಶ್ರಯದಲ್ಲಿ ‘ನನ್ನ ಮಣ್ಣು ನನ್ನ ದೇಶ’ ಕಾರ್ಯಕ್ರಮದ ಅಂಗವಾಗಿ ಅಮೃತ ಕಳಸ ಯಾತ್ರೆಯನ್ನು ಬುಧವಾರ ಹಮ್ಮಿಕೊಳ್ಳಲಾಗಿತ್ತು.
ಹೋ.ಚಿ.ಬೋರಯ್ಯ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಮಣ್ಣಿನ ಕಳಸ ಹೊತ್ತು ಪಟ್ಟಣದ ಪ್ರಮುಖ ಬೀದಿಯಲ್ಲಿ ಸಾಗಿ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಮಾನವ ಸರಪಳಿ ನಿರ್ಮಿಸಿ ಮಣ್ಣಿನ ಮಹತ್ವದ ಬಗ್ಗೆ ಅರಿವು ಮೂಡಿಸಿದರು.
ನಂತರ ನೇರವಾಗಿ ತಾಲೂಕು ಪಂಚಾಯಿತಿಗೆ ಆಗಮಿಸಿದ ವಿದ್ಯಾರ್ಥಿಗಳು ದೇಶದ ಐಕ್ಯತೆ ಘೋಷಣೆ ಕೂಗುತ್ತಾ, ಪರಿಸರ ಸಂರಕ್ಷಣೆ ಮತ್ತು ಸ್ವಚ್ಛತೆ ಬಗ್ಗೆ ಜನರಲ್ಲಿ ಅರಿವು ಮೂಡಿಸಿದರು.
ಈ ವೇಳೆ ಮಾತನಾಡಿದ ಉಪನ್ಯಾಸಕ ನಾಗರಾಜ್, ಅಜಾದಿಕ ಅಮೃತ ಮಹೋತ್ಸವದ ಪ್ರಯುಕ್ತ ನಮ್ಮ ಮಣ್ಣು ನಮ್ಮ ದೇಶ ಎಂಬ ಧ್ಯೇಯ ವಾಕ್ಯದಂತೆ ನಮ್ಮ ಜಿಲ್ಲಾಡಳಿತ ಸ್ಥಳೀಯ ಮಣ್ಣು ಸಂಗ್ರಹಿಸಿ ನಮ್ಮ ದೇಶದ ಪ್ರೀತಿ ಮತ್ತು ದೇಶ ಪ್ರೇಮದ ಗುರುತಾಗಿ ರಾಜ್ಯ ಸಂಸ್ಥೆಗೆ ಕಳುಹಿಸಿ ಅದ್ನು ದೇಶ ಮುಖ್ಯ ಕಚೇರಿಗೆ ಕಳುಹಿಸಲಾಗುವುದು.
ಜೀವನಾಂಶಕ್ಕೆ ಫಲವತ್ತಾದ ಮಣ್ಣೆ ನಮಗೆ ಆಶಯ. ಇದು ನಮ್ಮೆಲ್ಲರ ದೇಶ ಪ್ರೇಮದ ಗುರುತು ಮತ್ತು ಜವಾಬ್ದಾರಿಯಾಗಿದೆ. ಮಣ್ಣು, ಪ್ರಕೃತಿಯ ಸಂಕ್ಷಣೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ ಎಂದು ಹೇಳಿದರು.
ತಾಪಂ ಇಓ ಕೆ.ಟಿ.ಕರಿಬಸಪ್ಪ ಮಣ್ಣಿನ ಕಳಸ ಸ್ವೀಕರಿ ಮಾತನಾಡಿ, ದೇಶದ ಏಕತೆ ಮತ್ತು ಭದ್ರತೆ, ರೈತರ ಏಳಿಗೆ ನಮ್ಮೆಲ್ಲರ ಗುರಿ. ‘ನಮ್ಮ ಮಣ್ಣು ನಮ್ಮ ದೇಶ’ ಕಾರ್ಯಕ್ರಮದ ಮೂಲಕ ಮಣ್ಣು ಸಂಗ್ರಹಿಸಿ ವಿದ್ಯಾರ್ಥಿಗಳು ವಿಶಿಷ್ಠವಾಗಿ ಜಾಥಾ ಮೂಲಕ ತಲುಪಿಸಿದ್ದು ನಮಗೆ ತಲುಪಸಿದ್ದಾರೆ. ಅದನ್ನು ಜಿಲ್ಲಾಡಳಿತಕ್ಕೆ ತಲುಪಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಹೋ.ಚಿ.ಬೋರಯ್ಯ ಕಾಲೇಜು ಅಧ್ಯಕ್ಷ ಕೆ.ಪಿ.ಬಡಯ್ಯ, ಕಾರ್ಯದರ್ಶಿ ತಿಪ್ಪೇಸ್ವಾಮಿ, ಪಪಂ ಆರೋಗ್ಯಾಧಿಕಾರಿ ಕಿಫಾಯತ್ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಇದ್ದರು.