ಸುದ್ದಿವಿಜಯ, ಜಗಳೂರು: ಹನುಮ ಮಾಲಾಧಾರಿಗಳ ಸಂಕೀರ್ತನಾ ಯಾತ್ರೆ ಮೆರವಣಿಗೆ ಬುಧವಾರ ಪಟ್ಟಣದ ಅಂಬೇಡ್ಕರ್ ವೃತ್ತ, ಮಹಾತ್ಮ ಗಾಂಧಿ ವೃತ್ತ ಭುವನೇಶ್ವರಿ ವೃತ್ತದ ಮೂಲಕ ಈಶ್ವರ ದೇವಸ್ಥಾನ ತಲುಪಿತು.
ತಾಲೂಕಿನ ವಿವಿಧ ಗ್ರಾಮಗಳಲ್ಲಿ ಯುವಕರು ಜಾತ್ಯಾತೀತವಾಗಿ ಹನುಮ ಮಾಲಾಧಾರಿಗಳಾಗಿ ಪ್ರತಿನಿತ್ಯ ರಾಮ ಹನುಮನ ಜಪ, ವ್ರತಾಚರಣೆ, ಧಾರ್ಮಿಕ ಪೂಜೆ ಕೈಂಕರ್ಯಗಳಲ್ಲಿ ಭಾಗವಹಿಸಿ ಮೆರವಣಿಗೆಯಲ್ಲಿ ಕೇಸರಿ ಬಣ್ಣದ ಧರ್ಮ ಧ್ವಜ ಕೈಯಲ್ಲಿ ಹಿಡಿದು ಜೈಂಕಾರಗಳಿಂದ ಸಂಭ್ರಮಿಸಿದರು.
ಸರ್ವಧರ್ಮ ಸಮಿತಿಯ ಪ್ರಾಂತ್ಯ ಪ್ರಮುಖ ಮುನಿಯಪ್ಪ ಮಾತನಾಡಿ, ಇಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಮಾಲಾಧಾರಿಗಳು ಬೆಳಗ್ಗೆ 6 ಗಂಟೆಗೆ ಮಜ್ಜನದೊಂದಿಗೆ ಹೋಮ ಹವನದಲ್ಲಿ ಕುಳಿತುಕೊಳ್ಳಬೇಕು.
ಪೂರ್ಣ ಅವಧಿ ಇರುತ್ತದೆ. ನಂತರ ಸ್ವಾಮೀಜಿಗಳಿಂದ ಧಾರ್ಮಿಕ ಸಭೆಯನಂತರ ಸ್ವಾಮೀಜಿಗಳು ನಿಮಗೆ ಅಕ್ಷತೆ ಪುಷ್ಪ ಆಶೀರ್ವಾದ ನೀಡುತ್ತಾರೆ.ತದನಂತರ ಮಾಲೆಯನ್ನು ತೆಗೆಯಬೇಕು.ಮಾಲಾಧಾರಿಗಳು ಕುಟುಂಬಸಮೇತರಾಗಿ ಆಗಮಿಸಬೇಕು ಎಂದು ಕರೆ ನೀಡಿದರು.
ಕರಿಬಸಯ್ಯ ಮಾತನಾಡಿ,ಪ್ರತಿ ಹಳ್ಳಿಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಾಲಾಧಾರಿಗಳು ಆಗಮಿಸಿದ್ದು.ಇಂದು ಮುಂಜಾನೆ 9:00 ಗಂಟೆಗೆ ಸತ್ಸಂಗ. ಹನುಮಾನ್ ಚಾಲೀಸ್ ಶುರು ಮಾಡಲಾಗುವುದು ಎಲ್ಲಾ ಮಾಲಾಧಾರಿಗಳು ಹಾಜರಿರಬೇಕು ಎಂದು ಹೇಳಿದರು.
ಇದೇ ವೇಳೆ ಶಾಸಕ ಎಸ್.ವಿ.ರಾಮಚಂದ್ರ ಭಾಗವಹಿಸಿ ಶುಭ ಕೋರಿದರು. ಸಂದರ್ಭದಲ್ಲಿ ನಿವೃತ್ತ ಡಿ ವೈ ಎಸ್ ಪಿ ಕಲ್ಲೇಶಪ್ಪ, ಎ.ಎಂ.ಮರುಳಾರಾಧ್ಯ, ಬಿದರಿಕೆರೆ ಪ್ರಕಾಶ್, ಡಾ. ರವಿಕುಮಾರ್, ಜೆ.ವಿ. ನಾಗರಾಜ್, ಶಿವಕುಮಾರ ಸ್ವಾಮಿ ಸಾವಿರಾರು ಭಕ್ತಾದಿಗಳು ಹಾಗೂ ಮಾಲಾಧಾರಿಗಳು ಪಾಲ್ಗೊಂಡಿದ್ದರು.