ಸುದ್ದಿವಿಜಯ,ಜಗಳೂರು: (ವಿಶೇಷ)ಹಾಸ್ಟೆಲ್‍ಗಳಲ್ಲಿ ಊಟ ಸರಿಯಿಲ್ಲ. ವ್ಯವಸ್ಥೆ ಸರಿಯಿಲ್ಲ. ನೀರಿಲ್ಲ ಹೀಗೆ ಹತ್ತು ಹಲವು ಸಮಸ್ಯೆಗಳು ನಿತ್ಯ ಕಾಣ್ತವೆ. ಆದ್ರೆ ಅತ್ಯಂತ ಹಿಂದುಳಿದ ಜಗಳೂರು ಪಟ್ಟಣದಲ್ಲಿ ಹೈಟೆಕ್ ವ್ಯವಸ್ಥೆಯುಳ್ಳ ಹಾಸ್ಟೆಲ್‍ನಲ್ಲಿ ವಿದ್ಯಾರ್ಥಿಗಳು ಹಾಯಾಗಿ ನೆಮ್ಮದಿಯಿಂದ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಹೌದು, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ ಅವರ ಅಂಡರ್ ನಲ್ಲಿ ಬರುವ ಈ ಯಾವುದೇ ಪೇಯಿಂಗ್ ಗೆಸ್ಟ್ ಗಳನ್ನು ಮೀರಿಸುವಂತಿದೆ. ನೂರಾರು ವಿದ್ಯಾರ್ಥಿನಿಯರಿಗೆ ಸರಕಾರಿ ಪರಿಶಿಷ್ಟ ಜಾತಿ ಪಂಗಡದ ಮೆಟ್ರಿಕ್ ನಂತರದ ವಸತಿನಿಲಯದಲ್ಲಿ ವಿದ್ಯಾರ್ಥಿಗಳು ಸೌಲಭ್ಯ ಪೂರ್ಣ ಶಿಕ್ಷಣ ಪಡೆಯುತ್ತಿದ್ದಾರೆ.
ಪಟ್ಟಣದಲ್ಲಿ ಪರಿಶಿಷ್ಠ ಜಾತಿ ಪರಿಶಿಷ್ಟ ಪಂಗಡದ ವಿದ್ಯಾರ್ಥಿನಿಲಯಗಳು ಗುಣಮಟ್ಟದ ಆಹಾರ,ಸ್ವಚ್ಛತೆ, ತಾಜಾ ತರಕಾರಿಗಳು, ಶುಚಿ ರುಚಿಯಾದ ಅಡುಗೆ ಶುದ್ದ ಕುಡಿಯುವ ನೀರು, ಸ್ನಾನಕ್ಕೆ ಬಿಸಿನೀರು, ಹಾಸಿಗೆ ಹೊದಿಕೆ ಸೇರಿದಂತೆ ಅಗತ್ಯ ಕಿಟ್‍ಗಳ ಸೌಲಭ್ಯಕ್ಕೆ ಯಾವುದೇ ಕೊರತೆಯಿಲ್ಲ.
ಪಟ್ಟಣದ 5 ಪದವಿಪೂರ್ವ, ಎರಡು ಪದವಿ, ಒಂದು ಬಿಎಡ್, ಎರಡು ಪ್ಯಾರಾಮೆಡಿಕಲ್, ಒಂದು ಐಟಿಐ ಕಾಲೇಜುಗಳ ನೂರಾರು ವಿದ್ಯಾರ್ಥಿನಿಯರು ವಸತಿ ಸೌಲಭ್ಯ ಪಡೆಯುತ್ತಿರುವುದು ಬಡ ದಲಿತ ಸಮುದಾಯದ ವಿದ್ಯಾರ್ಥಿನಿಯರಿಗೆ ಆಸರೆಯಾಗಿದೆ ಈ ಹಾಸ್ಟೆಲ್.
ಪಟ್ಟಣದ ವಾಲ್ಮೀಕಿ ಭವನದ ಪಕ್ಕದಲ್ಲಿರುವ ಪ.ಪಂಗಡ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯದಲ್ಲಿ 140,ವೈಭವ ಹೋಟೆಲ್ ಎದುರು 120, ವಿದ್ಯಾರ್ಥಿನಿಯರು ವಸತಿ ಹೊಂದಿದ್ದಾರೆ.
ಪೆÇೀಷಕರ ಮೆಚ್ಚುಗೆ: ಸರಕಾರದ ಅನುದಾನದಲ್ಲಿ ಅಗತ್ಯ ಮೂಲಸೌಕರ್ಯದೊಂದಿಗೆ ಸ್ವಂತ ಕಟ್ಟಡದಲ್ಲಿ ಸುರಕ್ಷಿತವಾಗಿ ನಡೆಯುತ್ತಿರುವ.ಪ.ಜಾತಿ ಪ.ಪಂಗಡದ ಹಾಸ್ಟೆಲ್ ಗಳಿಂದ ಗ್ರಾಮೀಣ ಭಾಗದಲ್ಲಿ ಸಮಯಕ್ಕೆ ಸರಿಯಾಗಿ ಬಸ್ ಸಂಚಾರವಿಲ್ಲದೆ ಪರದಾಡುವ ಬದಲು, ಮನೆಗಳಲ್ಲಿಯೂ ಕಲ್ಪಿಸಲಾಗದಂತಹ ಸರಕಾರದ ಸೌಲಭ್ಯಕ್ಕೆ ಮೆಚ್ಚುಗೆಯಿದೆ ಎನ್ನುತ್ತಾರೆ ಪೋಷಕರು.
ವಿದ್ಯಾರ್ಥಿನಿಯರಿಗೆ ಅಗತ್ಯ ಸೌಲಭ್ಯ:
“ವಿದ್ಯಾರ್ಥಿನಿಯರಿಗೆ ಅಗತ್ಯ ಸೌಲಭ್ಯ ಕಲ್ಪಿಸಿ,ಜಾಗರೂಕತೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ನಿಲಯ ಮೇಲ್ವಿಚಾರಕರಿಗೆ ಸೂಚಿಸಲಾಗಿದೆ. ರಾತ್ರಿ ವೇಳೆ ಮಹಿಳಾ ಕಾವಲುಗಾರರನ್ನು ಸರಕಾರವೇ ನೇಮಿಸಿದೆ. ನಾನು ವಾರಕ್ಕೆ ಎರಡು ಬಾರಿ ಭೇಟಿ ನೀಡಿ ವಿದ್ಯಾರ್ಥಿನಿಯರ ಯೋಗಕ್ಷೇಮ ವಿಚಾರಿಸುವೆ. ಮಕ್ಕಳು ಸಮಸ್ಯೆಗಳನ್ನು ಮುಕ್ತವಾಗಿ ಹಂಚಿಕೊಳ್ಳುತ್ತಾರೆ.
ಮೆನುಚಾರ್ಟ್:
ಪ್ರಕಾರ ವಾರಕ್ಕೊಮ್ಮೆ ಚಿಕನ್, ಮೊಟ್ಟೆ, ಬಾಳೆಹಣ್ಣು, ಸೋಪು ಪೇಸ್ಟ್ ಕಿಟ್, ಶುದ್ದನೀರು ಪೂರೈಕೆಮಾಡಲಾಗುತ್ತಿದೆ. ಸ್ವಂತ ಬೋರ್ ವೆಲ್ ಸಮಸ್ಯೆ, ತಾಂತ್ರಿಕ ದೋಷ ಶುದ್ದನೀರಿನ ಘಟಕ ನಿರ್ವಹಣೆಯಲ್ಲಿ ಅಲ್ಪ ಏರುಪೇರಾದರೆ ಖಾಸಗಿ ಟ್ಯಾಂಕರ್ ನಿಂದ ಶುದ್ದನೀರು ಪೂರೈಕೆಮಾಡಲಾಗುತ್ತಿದೆ.
-ಮಂಗಳ ಮಹಾಬಲೇಶ್, ಮೇಲ್ವಿಚಾರಕಿ
ಮೂಲಸೌಕರ್ಯ ,ರಕ್ಷಣೆಗೆ,ಕೊರತೆಯಿಲ್ಲ!
ಕೆಲ ತಾಲೂಕುಗಳಲ್ಲಿ ಸೂಕ್ತ ಹಾಸ್ಟೆಲ್ ಸೌಲಭ್ಯವಿಲ್ಲದೆ ಮಾಸಿಕವಾಗಿ 4000 ಭರಿಸಿ ಪೇಯಿಂಗ್ ಗೆಸ್ಟ್ ಅವಲಂಬಿಸಬೇಕಾಗಿ.ಆದರೆ ಬರದನಾನಾಡಾಗಿದ್ದರೂ ಹಾಸ್ಟೆಲ್ ನಮಗೆ ಯಾವುದೇ ಮೂಲಸೌಕರ್ಯ ,ರಕ್ಷಣೆಗೆ,ಕೊರತೆಯಿಲ್ಲ,ಸಮಯಕ್ಕೆ ಸರಿಯಾಗಿ ಊಟ ತಿಂಡಿ ಆರೋಗ್ಯದ ಬಗ್ಗೆ ಕಾಳಜಿವಹಿಸಿ ಸ್ವಂತ ಮನೆಯಲ್ಲಿಯೂ ದೊರೆಯದ ಸೌಕರ್ಯದ ಭಾಸವಾಗುತ್ತಿದೆ.
ಯಶಸ್ವಿನಿ,ನಯನ, ಬಿ.ಎಡ್ ವಿದ್ಯಾರ್ಥಿನಿಯರು, ತುಪ್ಪದಹಳ್ಳಿ