ಅನ್ನದಾತರೇ ಇತ್ತ ಗಮನಿಸಿ, ಓರಿಜಿನಲ್ ಡೀಕಂಪೋಸ್‍ರ್ ಬಳಸಿ ನಿಮ್ಮ ಜಮೀನಿನಲ್ಲಿ ಎರೆಹುಳು ವೃದ್ಧಿಸಿಕೊಳ್ಳಿ

Suddivijaya
Suddivijaya September 18, 2023
Updated 2023/09/18 at 4:07 PM

ಸುದ್ದಿವಿಜಯ,ಜಗಳೂರು: ಬಯಲು ಸೀಮೆ ಅದರಲ್ಲೂ ಮಧ್ಯ ಕರ್ನಾಟಕದ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕು ಸೇರಿದಂತೆ ಅನೇಕ ತಾಲೂಕುಗಳಲ್ಲಿ ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಭೂಮಿ ವಿಷವಾಗುತ್ತಿದ್ದು, ಅತಿಯಾದ ನೀರಿನ ಬಳಕೆಯಿಂದ ಜಮೀನಿನ ಮೇಲ್ಮೈನಲ್ಲಿ ಉಪ್ಪಿನ ಅಂಶ ಸರ್ವೆ ಸಮಾನ್ಯವಾಗಿ ಕಾಣಬಹುದು.

ಅದರ ನಿರ್ಮೂಲನೆ ಮಾಡಿಕೊಳ್ಳದಿದ್ದರೆ ಮಣ್ಣಿನ ಆರೋಗ್ಯ ಹದಗೆಟ್ಟು ಭವಿಷ್ಯದಲ್ಲಿ ರೈತರು ಸಂಕಷ್ಟ ಎದುರಿಸುವ ಕಾಲ ದೂರವಿಲ್ಲ. ಹೀಗಾಗಿ ಮಣ್ಣಿನ ಸಂಕ್ಷಣೆಗಾಗಿ ರೈತರಿಗೆ ರಾಮಬಾಣದ ಎಂದರೆ ಓರಿಜಿನಲ್ ಡೀಕಂಪೋಸರ್.ಹೌದು, ಅಡಕೆ, ದಾಳಿಂಬೆ, ಈರುಳ್ಳಿ, ಮೆಕ್ಕೆಜೋಳ ಹೀಗೆ ಎಲ್ಲ ಬೆಳೆಗಳನ್ನು ಬೆಳೆಯಲು ರಾಸಾನಿಕ ಬಳಸುವುದರಿಂದ ಭೂಮಿಯ ಮೇಲ್ಮೈ ರಾಸಾಯನಿಕ ಬಳಕೆಯಿಂದ ಪೇಲವಾಗುತ್ತಿದ್ದು, ಅದನ್ನು ನಿಯಂತ್ರಿಸಲು ಓರಿಜಿನಲ್ ಡೀಕಂಪೋಸರ್ ದ್ರಾವಣದ ಬಳಕೆ ಮಾಡಿ, ಇದರಿಂದ ಯಾವುದೇ ಸೈಡ್ ಎಫೆಕ್ಟರ್ ಇರುವುದಿಲ್ಲ ಎಂದು ರೈತರಿಗೆ ತೋಟಗಾರಿಕಾ ತಜ್ಞ ಡಾ.ಮಹಾಂತೇಶ್ ಜೋಗಿ ಸಲಹೆ ನೀಡಿದ್ದಾರೆ.

ವೇಸ್ಟ್ (OWDC)ಡೀಕಂಪೋಸರ್ ತಯಾರಿಕೆ ಹೇಗೆ?

ಓರಜಿನಲ್ ವೇಸ್ಟ್ ಡೀಕಂಪೋಸರ್ ಎನ್ನುವ ದ್ರಾವಣವು ಹಲವು ಪ್ರಕಾರದ ಸೂಕ್ಷ್ಮಾಣು ಜೀವಿಗಳ ಒಂದು ಸಮೂಹ. ಇದನ್ನು ನಾಟಿ ಹಸುವಿನ ಸಗಣಿಯ ಲೋಳೆಯಲ್ಲಿರುವ ಸೂಕ್ಷ್ಮಾಣುಗಳನ್ನು ಬೇರ್ಪಡಿಸಿ ಪ್ರಯೋಗಾಲಯದಲ್ಲಿ ಅಭಿವೃದ್ಧಿ ಪಡಿಸಲಾಗಿದೆ.

ಉಪಯೋಗಗಳೇನು?

  • ಮಣ್ಣಿನ ಭೌತಿಕ, ರಾಸಾಯನಿಕ ಮತ್ತು ಜೈವಿಕ ಗುಣಲಕ್ಷಣಗಳನ್ನು ಅಭಿವೃದ್ಧಿಗೊಳಿಸುತ್ತದೆ
  • ಮಣ್ಣಿನ ಫಲವತ್ತತೆಯನ್ನು ಉತ್ತಮ ಪಡಿಸುತ್ತದೆ, ತೇವಾಂಶ ಹಿಡಿದಿಟ್ಟುಕೊಳ್ಳುತ್ತದೆ.
  • ಭೂಮಿಯಲ್ಲಿರುವ ಪೋಷಕಾಂಶಗಳನ್ನು ಹೀರಿಕೊಳ್ಳುವ ಸಾಮರ್ಥ್ಯ ಹೆಚ್ಚಿಸುತ್ತದೆ.
  • ಬೆಳೆಯ ಇಳುವರಿ ಪ್ರಮಾಣವನ್ನು ಹೆಚ್ಚಿಸುತ್ತದೆ ಹಾಗೂ ಗಿಡಗಳ ರೋಗ ನಿರೋಧಕ ಶಕ್ತಿಯ್ನು ಹೆಚ್ಚಿಸುತ್ತದೆ
  • ಬೀಜೋಪಚಾರಕ್ಕೆ ಬಳಸುವುದರಿಂದ ಬೀಜಗಳ ಮೊಳಕೆ ಪ್ರಮಾಣವನ್ನು ಹೆಚ್ಚಿಸುತ್ತದೆ ಮತ್ತು ಮಣ್ಣಿನಿಂದ ಬರುವ ಎಲ್ಲ ರೋಗಗಳನ್ನು ನಿಯಂತ್ರಿಸುತ್ತದೆ.
  • ನಿರಂತರ ಬಳಕೆಯಿಂದ ಎರೆಹುಳುಗಳ ಅಭಿವೃದ್ಧಿಯಾಗುತ್ತವೆ.
  • ಸೂಕ್ಷ್ಮಾಣು ಜೀವಿಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ. ಭೂಮಿಯು ನಿಧಾನವಾಗಿ ಹದವಾಗುತ್ತದೆ.
  • ತೋಟದ ತ್ಯಾಜ್ಯಗಳು, ಬೆಳೆ ಉಳಿಕೆಗಳು ಮತ್ತು ರಾಸುಗಳ ತ್ಯಾಜ್ಯವನ್ನು ವೇಗವಾಗಿ ಗೊಬ್ಬರವಾಗಿ ಪರಿವರ್ತಸಿ ಕೊಡುತ್ತದೆ.
  • ದ್ರಾವಣವನ್ನು ಎಲ್ಲ ಬೆಳೆಗಳಿಗೆ ಉಪಯೋಗಿಸಬಹುದು.

ದ್ರಾವಣ ಮಾಡುವ ವಿಧಾನ ಹೇಗೆ?

OWDC ಒಂದು ಬಾಟಲ್
2ಕೆಜಿ ಸಾವಯವ ಬೆಲ್ಲ
200 ಲೀ ಪ್ಲಾಸ್ಟಿಕ್ ಡ್ರಮ್
ಮುಚ್ಚಲಿಕ್ಕೆ ಬಟ್ಟೆ ಅಥವಾ ಗೋಣಿಚೀಲ ಬಳಸಿ
ಮೊದಲಿಗೆ ಡ್ರಮ್‍ಗೆ ಅರ್ಧದಷ್ಟು ನೀರು ತುಂಬಿಸಿ
2ಕೆಜಿ ಬೆಲ್ಲವನ್ನು ಪುಡಿಮಾಡಿ ಡ್ರಮ್ ಹಾಕಿ ಕೋಲಿನಿಂದ ತಿರುಗಿಸಿ
OWDC ಬಾಟಲ್‍ನಲ್ಲಿರುವ ಸಂಪೂರ್ಣ ದ್ರಾವಣ ಡ್ರಮ್‍ಗೆ ಹಾಕಿ ನೀರು ಸಂಪೂರ್ಣಹಾಕಿ ಕೋಲಿನಿಂದ ತಿರುಗಿಸಿ
ನಂತರ ಬಟ್ಟೆಯಿಂದ/ಗೋಣಿಚೀಲದಿಂದ ದ್ರಾವಣ ಮುಚ್ಚಿ ದಾರದಿಂದ ಡ್ರಮ್ ಬಾಯಿ ಕಟ್ಟಿ
ಹೀಗೆ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಕೋಲಿನಿಂದ ತಿರುಗಿಸಬೇಕು 5 ದಿನದ ಒಳಗೆ ಒಡ್ಲ್ಯೂಡಿಸಿ ದ್ರಾವಣ ಬಳಕೆಗೆ ಸಿದ್ಧವಾಗುತ್ತದೆ.

ಬಳಸುವ ವಿಧಾನ ಹೇಗೆ?

ಬೆಳೆಗಳಿಗೆ ನೀರು ಕೊಡುವಾಗ ಕನಿಷ್ಠ 500 ಲೀ. ನಿಂದ 1000 ಲೀ, ದ್ರಾವಣವನ್ನು ತಯಾರಿಸಿ ಗಿಡಗಳ ಹತ್ತಿರ ಕೊಡುವದರಿಂದ ಉತ್ತಮವಾದ ಪರಿಣಾಮವನ್ನು ಪಡೆಯಬಹುದು.

ನೇರವಾಗಿ ನೀರಾವರಿ ಮೂಲಕವೂ ಕೊಡಬಹುದು/ ಹನಿ ನೀರಾವರಿಯಿಂದ ಕೊಡುವುದರಿಂದ ಉತ್ತಮವಾದ ಪರಿಣಾಮವನ್ನು ಪಡೆಯಬಹುದು.

ದ್ರಾವಣವನ್ನು ಬಕೆಟ್‍ನಲ್ಲಿ ತೆಗೆದುಕೊಂಡು ಗಿಡಗಳ ಬುಡಕ್ಕೆ ಚೆಲ್ಲಬಹುದು, ದ್ರಾವಣ ಕೊಡುವ ಮೊದಲು ಭೂಮಿಯು ತೇವಾಂಶದಿಂದ ಕೂಡಿರಬೇಕು.

ಬೀಜೋಪಚಾರಕ್ಕೂ ತಯಾರಾದ ಬೀಜಗಳನ್ನು 10 ರಿಂದ 30 ನಿಮಿಷಗಳವರೆಗೆ OWDC ದ್ರಾವಣದಲ್ಲಿ ಇಟ್ಟು ನೆರಳಿನಲ್ಲಿ ಒಣಗಿಸಿ ಆಮೇಲೆ ಬೀಜ ಬಿತ್ತನೆ ಮಾಡಬಹುದು.

ಸಿಂಪಡಣೆ ಮಾಡುವ ಮಾಡಿದರೂ ಪರಿಣಾಮಕಾರಿ

ವಾರಕ್ಕೆ ಒಂದು ಸಾರಿ ಸಿಂಪರಣೆ ಮಾಡುವುದಾದರೆ ಶೇ.50 ರಷ್ಟು ದ್ರಾವಣ ಮತ್ತು ಶೇ.50 ರಷ್ಟು ನೀರನ್ನು ಒಂದು ಕ್ಯಾನ್‍ಗೆ ಬಳಸಬಹುದು.

ಪ್ರತಿ ಮೂರು ದಿನಕ್ಕೆ ಸಿಂಪಡಣೆ ಮಾಡುವುದಾದರೆ ಶೇ.40 ರಷ್ಟು ದ್ರಾವಣ ಮತ್ತು ಶೇ.60 ರಷ್ಟು ನೀರನ್ನು ಒಂದು ಕ್ಯಾನ್‍ಗೆ ಬಳಸಬಹುದು.

ಹಣ್ಣಿನ ಗಿಡಗಳಿಗೆ ಸಿಂಪಡಣೆ ಮಾಡುವುದಾದರೆ ಶೇ.60 ರಷ್ಟು ದ್ರಾವಣ ಮತ್ತು ಶೇ.40 ರಷ್ಟು ನೀರನ್ನು ಬಳಸಿ

ಬೆಳೆ ಕಟಾವು ಆದ ಮೇಲೆ ಉಳಿದಿರುವ ಕಾಂಡಗಳ ಮತ್ತು ಬೆಳೆ ಉಳಿಕೆಗಳ ಮೇಲೆ 500 ರಿಂದ 1000 ಲೀ ದ್ರಾವಣವನ್ನು ಸಿಂಪಡಣೆ ಮಾಡಿ ಅಥವಾ ಅದರ ಮೇಲೆ ಚೆಲ್ಲಿರಿ ಇದರಿಂದ ಬೆಳೆ ಉಳಿಕೆಗಳು ಕೊಳೆತು ಬೇಗ ಮಣ್ಣಿನಲ್ಲಿ ಸೇರಿಕೊಳ್ಳುತ್ತವೆ.

ಬಳಸಿದ ರೈತರ ಪ್ರತಿಕ್ರಿಯೆ:

ಕಳೆದ ಎರಡು ವರ್ಷಗಳಿಂದ ಜಗಳೂರು ತಾಲೂಕಿನ ತೋರಣಗಟ್ಟೆ ಗ್ರಾಮದ ರೈತ ಹನುಮಂತಪ್ಪ ಅವರ ಅಡಕೆ ತೋಟದಲ್ಲಿ ಎರೆ ಹುಳುಗಳು ಸೃಜನೆಯಾಗಿವೆ. ಕಾರಣ ವೇಸ್ಟ್ ಡೀಕಂಪೋಸರ್ ಬಾಟಲ್ ತರಿಸಿ ಅದನ್ನು ವೈಜ್ಞಾನಿಕವಾಗಿ ಮಾಡುತ್ತಿದ್ದು ಅವರ ಹೊಲದಲ್ಲಿ ಅಡಕೆ ಗಿಡಗಳ ಬುಡದಲ್ಲಿ ಎರೆಹುಳು ಬರುತ್ತಿವೆ. ಅಷ್ಟೇ ಅಲ್ಲ ಮಣ್ಣಿನಲ್ಲಿ ಉಪ್ಪಿನ ಅಂಶ ಮುಕ್ತವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಆಸಕ್ತ ರೈತರು ವೇಸ್ಟ್ ಡೀಕಂಪೋಸರ್ ಬೇಕಾಗಿದಲ್ಲಿ ಕಲಬುರಗಿ ಜಿಲ್ಲೆಯ ತೋಟಗಾರಿಕಾ ತಜ್ಞ ಡಾ.ಮಹಾಂತೇಶ್ ಜೋಗಿ ಅವರನ್ನು ಸಂಪರ್ಕಿಸಿ
8105453873

Share this Article
Leave a comment

Leave a Reply

Your email address will not be published. Required fields are marked *

error: Content is protected !!