ಪಕ್ಷೇತರ ಅಭ್ಯರ್ಥಿ ಎಚ್.ಪಿ.ರಾಜೇಶ್‍ಗೆ ಅಭೂತಪೂರ್ವ ಜನಸ್ಪಂದನೆ!

Suddivijaya
Suddivijaya May 7, 2023
Updated 2023/05/07 at 1:38 PM

ಸುದ್ದಿವಿಜಯ, ಜಗಳೂರು: ವಿಧಾನಸಭಾ ಚುನಾವಣೆಗೆ ಇನ್ನು ಮೂರೇ ದಿನ ಬಾಕಿ ಉಳಿದಿದ್ದು ಜಗಳೂರು ಕ್ಷೇತ್ರದ ಕಣದಲ್ಲಿರುವಪಕ್ಷೇತರ ಅಭ್ಯರ್ಥಿ ಎಚ್.ಪಿ.ರಾಜೇಶ್‍  ಮತದಾರ ಮನವೊಲಿಸುವ ಕಾರ್ಯದಲ್ಲಿ ಫುಲ್ ಬ್ಯೂಸಿಯಾಗಿದ್ದಾರೆ.

ರಾಜೇಶ್‍ಗೆ ಅದ್ಧೂರಿ ಸ್ವಾಗತ:

ಈ ಬಾರಿ ಚುನಾವಣೆಯಲ್ಲಿ ಗೆಲ್ಲಲೇ ಬೇಕು ಎಂದು ಕಾಲಿಗೆ ಚಕ್ರಕಟ್ಟಿಕೊಂಡವರಂತೆ ಇಡೀ ಕ್ಷೇತ್ರದಲ್ಲಿ ಮಿಂಚಿನ ಸಂಚಾರ ಮಾಡುತ್ತಿರುವ ಪಕ್ಷೇತರ ಅಭ್ಯರ್ಥಿ ಎಚ್.ಪಿ.ರಾಜೇಶ್ ಅವರು ನಿಬಗೂರು, ಕಟ್ಟಿಗೆಹಳ್ಳಿ, ಅರಿಶಿಣಗುಂಡಿ, ನಿಂಗಣ್ಣನಹಳ್ಳಿ, ತೋರಣಗಟ್ಟೆ, ಗೌರಮ್ಮನಹಳ್ಳಿ, ಜಮ್ಮಾಪುರ,ಬೊಮ್ಮಕ್ಕನಹಳ್ಳಿ, ಮಾಳಮ್ಮನಹಳ್ಳಿ, ರಸ್ತೆಮಾಚಿಕೆರೆ, ಬಗ್ಗೆನಹಳ್ಳಿ, ವ್ಯಾಸಗೊಂಡನಹಳ್ಳಿ,ಮಹಾರಾಜನಹಟ್ಟಿ, ಮೆದಗಿನಕೆರೆ, ಹಳವದಂಡಿ,

ಚಿಕ್ಕಅರಕೆರೆ ಹೊಸೂರು, ಹಿರೇ ಅರಕೆರೆ, ನಾಗಲಕಟ್ಟೆ, ಗುತ್ತಿದುರ್ಗ, ಕೊರಟಿಕೆರೆ, ತಾಂಡ, ಸೋಮನಹಳ್ಳಿ, ಗೋಕುಲಹಟ್ಟಿ, ಸಂತೆ ಮುದ್ದಾಪುರ, ದಿಬ್ಬದಹಟ್ಟಿ ಗ್ರಾಮಗಳಲ್ಲಿ ಅದ್ದೂರಿಯಾಗಿ ಪ್ರಚಾರ ಮಾಡಿದರು. ರಾಜೇಶ್ ಆಗಮಿಸುತ್ತಿದ್ದಂತೆ ಹೂವಿನ ಹಾರ ಹಾಕಿ ಸ್ವಾಗತಿಸಿ, ಪಟಾಕಿಸಿಡಿಸಿ ಸ್ವಾಗತಿಸಿದ ಅಭಿಮಾನಿಗಳು ಗ್ರಾಮದಲ್ಲಿ ಮನೆ ಮನೆ  ತೆರಳಿ ಪ್ರಚಾರದಲ್ಲಿ ಬ್ಯೂಸಿಯಾಗಿದ್ದರು.

ಬಸವಣ್ಣನ ಆಶೀರ್ವಾದ:

ಇತಿಹಾಸ ಪ್ರಸಿದ್ಧ ತಾಲೂಕಿನ ಕಟ್ಟಿಗೆಹಳ್ಳಿ ಗ್ರಾಮದಲ್ಲಿ ಪಕ್ಷೇತರ ಅಭ್ಯರ್ಥಿ ಎಚ್.ಪಿ.ರಾಜೇಶ್ ಅವರು ಬಸವಣ್ಣನ ದೇವಸ್ಥಾನಕ್ಕೆ ತೆರಳಿ ದೇವರಿಗೆ ನಮಸ್ಕರಿಸಿ ಪ್ರಚಾರ ಆರಂಭಿಸಿದರು. ನಂತರ ಮನೆ ಮನೆಗೆ ತೆರಳಿ ಪ್ರಚಾರ ಮಾಡಿದರು. ಈವೇಳೆ ನೂರಾರು ಕಾರ್ಯತರ್ಕರು ರಾಜೇಶ್ ಅವರಿಗೆ ಜೈಕಾರ ಹಾಕಿದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!