ಸುದ್ದಿವಿಜಯ, ಜಗಳೂರು: ಚುನಾವಣೆಯ ಅಂತಿಮ ಘಟಕ್ಕೆ ಬಂದಿದ್ದೇವೆ. ಬಹಿರಂಗ ಪ್ರಚಾರಕ್ಕೆ ಇನ್ನೆರಡೇ ದಿನ ಬಾಕಿ ಉಳಿದಿದ್ದು ಮೈ ಮರೆಯದೇ ಕೆಲಸ ಮಾಡಿ. ಜನರ ಪ್ರೀತಿ ವಿಶ್ವಾಸವೇ ನನ್ನ ಗೆಲುವಿನ ಶ್ರೀರಕ್ಷೆ ಎಂದು ಮಾಜಿ ಶಾಸಕ, ಪಕ್ಷೇತರ ಅಭ್ಯರ್ಥಿ ಎಚ್.ಪಿ.ರಾಜೇಶ್ ಹೇಳಿದರು.
ತಾಲೂಕಿನ ಬಿದರಕೆರೆ ಗ್ರಾಮದ ತೋಟದ ನಿವಾಸದಲ್ಲಿ ಅಭಿಮಾನಿಗಳ ಸಭೆಯನ್ನು ಕರೆದು ಮಾತನಾಡಿದ ಅವರು. ಕ್ಷೇತ್ರದಲ್ಲಿ ತೆಂಗಿನತೋಟದ ಗುರುತಿಗೆ ಉತ್ತಮ ಸ್ಪಂದನೆಯಿದೆ. 15 ವರ್ಷ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ. ಗಂಗಾ ಕಲ್ಯಾಣ, ನೇರಸಾಲ, ಭೂಮಿ ಹಕ್ಕುಪತ್ರ ವಿತರಣೆ, ವಸತಿ ಯೋಜನೆಗಳನ್ನು ತಂದಸಿರುವುದನ್ನು ಜನ ಇನ್ನು ಮರೆತಿಲ್ಲ. ಈ ಬಾರಿ ಮತ ಕೇಳಲು ಹೋದಾಗ ಜನ ನಾನು ಮಾಡಿರುವ ಕಾರ್ಯವನ್ನು ಸ್ಮರಿಸಿಕೊಳ್ಳುತ್ತಾರೆ ಎಂದರು.
ಅಭಿಮಾನ ಪ್ರೀತಿ ತೋರಿಸುವ ನಮ್ಮ ಮತದಾರರು ನಿರೀಕ್ಷೆ ಮೀರಿ ಗೆಲ್ಲುವ ಆತ್ಮವಿಶ್ವಾಸ ಇದೆ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ನನ್ನನ್ನು ಸೋಲಿಸುವ ತಂತ್ರ ಎಣೆಯುತ್ತವೆ. ನಾನೊಬ್ಬ ಪಕ್ಷೇತರ ಅಭ್ಯರ್ಥಿ ನನ್ನನ್ನು ಟಾರ್ಗೆಟ್ ಮಾಡಿರುವುದು ನೀವು ಕೊಟ್ಟ ಶ್ರೀರಕ್ಷೆಯಿಂದ. ಎರಡೂ ಪಕ್ಷಗಳಿಂದ ಮಾಜಿ ಸಿಎಂಗಳು ಪ್ರಚಾರ ಮಾಡಿದ್ದಾರೆ. ನನಗೆ ನೀವೇ ಸೂಪರ್ ಸ್ಟಾರ್ ಎಂದರು.
ಒಕ್ಕಣೆಯಲ್ಲಿ ಗಟ್ಟಿ ಕಾಳು ಮಾತ್ರ ಕಣದಲ್ಲಿ ಉಳಿಯುತ್ತವೆ. ಜೊಳ್ಳು ಗಾಳಿಗೆ ಹೋಗುತ್ತವೆ. ನಾನು ಉತ್ಸವ ಮೂರ್ತಿ ಮಾತ್ರ. ನೀವೆಲ್ಲ ಸೇರಿ ರಥ ಎಳೆಯುತ್ತಿದ್ದೀರಿ. ಮೇ.10ರಂದು ಪಾದಗಟ್ಟೆಯವರೆಗೆ ಎಳೆಯಲು ನಿರ್ಧಾರ ಮಾಡಿದ್ದೀರಿ. ನಿಮ್ಮ ಪ್ರೀತಿ ವಿಶ್ವಾಸ ಹೀಗೇ ಇರಲಿ. 57 ಕೆರೆ ತುಂಬಿಸುವ ಯೋಜನೆ ಮತ್ತು ಅಪ್ಪರ್ ಭದ್ರಾ ಯೋಜನೆಯನ್ನು ಪೂರ್ಣಗೊಳಿಸಬೇಕಾಗಿದೆ.
ಎಲ್ಲ ವರ್ಗದ ಜನ ಅಭಿಮಾನ ನನ್ನ ಮೇಲಿದೆ. ಸ್ವಾಭಿಮಾನಕ್ಕೆ ದುಡ್ಡು ಕೊಡಬೇಕೆ. ಯಾರೂ ನನ್ನನ್ನು ಹಣ ಕೇಳಿಲ್ಲ. ಮತದಾರರೇ ಹಣಕೊಟ್ಟು ಕೊಟ್ಟು ಪೆÇ್ರೀತ್ಸಾಹಿಸಿದ್ದಾರೆ. ಒಂದು ಪಕ್ಷ ನನಗೆ ಮೋಸ ಮಾಡಿತು. ಇದು ದೊಡ್ಡ ಗೆಲುವಾಗಬೇಕು. ದುಡ್ಡೇ ಗೆಲುವಾಗಬಾರದು ಯೋಚಿಸಿ ಮತಹಾಕಿ ಎಂದರು.
ರಾಜೇಶ್ ಕಣ್ಣಲ್ಲಿ ಆನಂದ ಭಾಷ್ಪ
ಜನರ ಅಭಿಮಾನ, ಪ್ರೀತಿ ವಿಶ್ವಾಸ ನೋಡಿ ಪಕ್ಷೇತರ ಅಭ್ಯರ್ಥಿ ಮಾತನಾಡುತ್ತಲೇ ಕಣ್ಣೀರು ಹಾಕಿದರು. ಇದು ಕಣ್ಣೀರಲ್ಲ. ತಪ್ಪು ತಿಳಿಯಬೇಡಿ. ನೀವು ತೋರಿಸುತ್ತಿರುವ ಬೆಂಬಲಕ್ಕೆ ನನಗೆ ಗೊತ್ತಿಲ್ಲದೇ ಕಣ್ಣುಗಳು ತೇವಗೊಂಡಿವೆ. ಇದು ಆನಂದದ ಕಣ್ಣೀರು. ಯಾವುದೇ ಗೊಂದಲಗಳಿಗೆ ಕಿವಿ ಗೊಡಬೇಡಿ. ಎಲ್ಲ ಬೂತ್ ಮಟ್ಟದಲ್ಲಿ ಮತ ಹಾಕಿಸಿ. ಸೋಮವಾರ ಎರಡು ಗಂಟೆಗೆ ಜಗಳೂರು ಪಟ್ಟಣದ ಈಶ್ವರ ದೇವಸ್ಥಾನದಿಂದ ಅಂಬೇಡ್ಕರ್ ವೃತ್ತವರೆಗೆ ರೋಡ್ ಶೋ ಏರ್ಪಡಿಸಲಾಗಿದೆ ಎಲ್ಲರೂ ಬನ್ನಿ ಎಂದು ಆಹ್ವಾನಿಸಿದರು.
ಈ ಸಂದರ್ಭದಲ್ಲಿ ಯಾದವಸಮಾಜದ ತಿಪ್ಪೇಸ್ವಾಮಿ ಗೌಡ, ಎಲ್.ಬಿ.ಭೈರೇಶ್, ಅರವಿಂದ್ ಕುಮಾರ್, ಪ್ರವೀಣ್ ಕುಮಾರ್, ಸೂರಲಿಂಗಪ್ಪ, ಸುರೇಶ್ ಗೌಡ, ತಿಪ್ಪೇಶ್, ಅಜರತ್ ಹಾಲಿ , ಸತೀಶ್, ಪ್ರವೀಣ್ ಕುಮಾರ್, ಯು.ಜಿ.ಶಿವಕುಮಾರ್, ಗಿರೀಶ್ ಒಡೆಯರ್, ಕುಬೇಂದ್ರಪ್ಪ, ಆನಂದ ರಾಜು, ಚನ್ನಬಸಪ್ಪ, ಎಕೆ ಬಸವರಾಜ್, ಮಹಾಂತೇಶ್,