ಸುದ್ದಿವಿಜಯ, ಜಗಳೂರು: ದೇವಸ್ಥಾನಕ್ಕೆ ಕಳಶ ಎಷ್ಟು ಮುಖ್ಯವೋ ಗ್ರಾಮಗಳಲ್ಲಿ ಸಾಮರಸ್ಯವು ಅಷ್ಟೆ ಮುಖ್ಯ. ಶಾಂತಿ ಸುಖ ನೆಮ್ಮದಿ ನೆಲಸಲು ಸೌಹಾರ್ದತೆ ಅತ್ಯಗತ್ಯ ಎಂದು ಕಣ್ವ ಕುಪ್ಪೆ ಗವಿ ಮಠದ ನಾಲ್ವಡಿ ಶಾಂತ ಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಹಿರೇಮಲ್ಲನಹೊಳೆ ಗ್ರಾಮದಲ್ಲಿ ಶುಕ್ರವಾರ ಮಡಿವಾಳ ಸಮಾಜದ ವತಿಯಿಂದ ನಿರ್ಮಾಣವಾದ ಹುಚ್ಚಂಗಮ್ಮ ದೇವಿ ನೂತನ ವಿಗ್ರಹ ಹಾಗು ಕಳಶರೋಹಣ ಪ್ರತಿಷ್ಠಾಪನೆ ನೆರವೇರಿಸಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ಮನುಷ್ಯ ಜನ್ಮ ದೊಡ್ಡದು ಅದನ್ನ ಸಾತ್ವಿಕ ಗುಣಗಳಿಂದ ಸಕಾರಗೊಳಿಸಬೇಕು. ಅದಕ್ಕಾಗಿ ದೇವರ ಕಾರ್ಯಗಳ ಮಾಡುವ ಮೂಲಕ ಸಾರ್ಥಕ ಜನ್ಮಪಡೆಯಬೇಕಿದೆ. ದೇವಸ್ಥಾನ ಲೋಕಾರ್ಪಣೆ ಗೊಂಡಿದೆ. ದೇವರು ಪ್ರತಿಷ್ಠಾಪಿಸಿದರೆ ನಮ್ಮ ಕೆಲಸ ಮುಗಿಯುವುದಿಲ್ಲ. ಶ್ರದ್ದಾ ಭಕ್ತಿಯಿಂದ ದೇವರ ಕಾರ್ಯಗಳನ್ನು ಮಾಡಬೇಕು ಆಗ ಮಾತ್ರ ಸಕಲ ಶಾಂತಿ ಲಭಿಸಲಿದೆ ಎಂದರು.ಮಡಿವಾಳ ಗುರುಪೀಠದ ಬಸವ ಮಡಿವಾಳ ಮಾಚಿದೇವ ಸ್ವಾಮೀಜಿ ಮಾತನಾಡಿ ಸಮಾಜವು ಒಗ್ಗೂಡಿದಾಗ ಮಾತ್ರ ನಮ್ಮ ಹಕ್ಕು ಪಡೆಯಲು ಸಾಧ್ಯವಾಗುತ್ತದೆ ಸಮಾಜದ ಮಕ್ಕಳಿಗೆ ಶಿಕ್ಷಣ ಕೊಡಿಸುವ ಮೂಲಕ ಸಮಾಜ ಜಾಗೃತವಾಗಬೇಕು. ಸದಾ ಕಾಯಕದ ಮೂಲಕ ಬದುಕು ಕಟ್ಟಿಕೊಂಡ ಮಡಿವಾಳ ಸಮಾಜವು ಶೈಕ್ಷಣಿಕವಾಗಿ ಆರ್ಥಿಕವಾಗಿ ಮುಂದು ಬರವೇಕಿದೆ ಎಂದರು.
ಮಾಜಿ ಶಾಸಕ ಎಚ್.ಪಿ.ರಾಜೇಶ್ ಮಾತನಾಡಿ, ಸಮಾಜ ಸೇವೆ ಮಾಡಲು ಅಧಿಕಾರವೇ ಮುಖ್ಯವಲ್ಲ. ಸಿಕ್ಕ ಅವಕಾಶದಲ್ಲಿ ತಾಲ್ಲೂಕಿನ ಬಹುತೇಕ ಹಳ್ಳಿಗಳ ಅಭಿವೃದ್ದಿಗೆ ಶ್ರಮಿಸಿ ನನ್ನ ಕೈಲಾದ ಸೇವೆ ಮಾಡಿರುವೆ.
ಯಾರೆ ಜನಪ್ರತಿನಿಧಿ ಆದರು ಗ್ರಾಮದವರು ಪಕ್ಷ ಭೇದ ಮಾಡದೇ ಅಭಿವೃದ್ಧಿಗೆ ಶ್ರಮಿಸಬೇಕು. ನಾನು ಹಿರೇಮಲ್ಲನಹೊಳೆ ಗ್ರಾಮದಲ್ಲಿ ನನ್ನ ಅವದಿಯಲ್ಲಿ 18 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ಹಾಗು 5 ಲಕ್ಷ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡಿದ ತೃಪ್ತಿ ಇದೆ ಎಂದು ಸ್ಮರಿಸಿದರು.
ಕೆಪಿಸಿಸಿ ಎಸ್ಟಿ ಘಟಕ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ ಮಾತನಾಡಿದರು. ಈ ಸಂದರ್ಭದಲ್ಲಿ ಗ್ರಾಮದ ಹುಚ್ಚೆಂಗೆಮ್ಮದೇವಿ ಸಮಿತಿಯ ಎಲ್ಲಾ ಸದಸ್ಯರು ಹಾಗು ಸಮಾಜದ ಗುಡಿಕಟ್ಟು ಅಣ್ಣ ತಮ್ಮಂದಿರು ಊರಿನ ಗ್ರಾಮಸ್ಥರು ಹಾಗು ಯುವಕರು ಮಹಿಳೆಯರು ಭಾಗವಹಿಸಿದ್ದರು.