ಸುದ್ದಿವಿಜಯ, ದಾವಣಗೆರೆ: ಜಗಳೂರು ತಾಲ್ಲೂಕಿನ ಹಾಲೇಕಲ್ಲು ಮೂಲದ ಪತಿ, ಪತ್ನಿ ಗಂಡು ಮಗು ಮೂವರು ಅಮೆರಿಕಾದಲ್ಲಿ ಮೃತಪಟ್ಟಿದ್ದು, ಅವರ ಮೃತದೇಹ ತಾಯ್ನಾಡಿಗೆ ಬರೋದಿಲ್ಲ.
ಬದಲಾಗಿ ಬಾಲ್ಟಿಮೋರ್‍ನಲ್ಲಿಯೇ ಅಂತ್ಯಕ್ರಿಯೆ ನೆರವೇರಿಸಲು ಕುಟುಂಬ ಸದಸ್ಯರು ನಿರ್ಧರಿಸಿದ್ದಾರೆ. ಈ ಮೂಲಕ ತಾಯ್ನಾಡಿಗೆ ಬರಬೇಕಾದ ಮೃತ ದೇಹಗಳು ಅಮೆರಿಕದ ಮಣ್ಣಲ್ಲಿ ದೇವರ ಮಡಿಲಿಗೆ ಸೇರಿವೆ.
ಹೌದು, ಹಾಲೆಕಲ್ಲು ಗ್ರಾಮದ ಮೂಲದವರಾದ ಯೋಗೇಶ್ ಹೊನ್ನಾಳ(37), ಪ್ರತಿಭಾ ಹೊನ್ನಾಳ(35), ಯಶ್ ಹೊನ್ನಾಳ(6) ಅಮೆರಿಕದ ಮೇರಿಲ್ಯಾಂಡ್ ರಾಜ್ಯದ ಬಾಲ್ಟಿಮೋರ್ ನಲ್ಲಿ 9 ವರ್ಷಗಳಿಂದ ವಾಸವಾಗಿದ್ದರು.
ಮೃತ, ಪತಿ ಪತ್ನಿ ಇಬ್ಬರೂ ವೃತ್ತಿಯಲ್ಲಿ ಸಾಫ್ಟ್‍ವೇರ್ ಎಂಜಿನಿಯರಾಗಿ ಸೇವೆ ಸಲ್ಲಿಸಿದ್ದರು. ಆದರೆ ಆಗಸ್ಟ್ 15 ರ ಬೆಳಗಿನ ಜಾವ ಅಮೆರಿಕದ ಪೊಲೀಸರು ಕುಟುಂಬಸ್ಥರಿಗೆ ಕರೆ ಮಾಡಿ ಮೃತ ಪಟ್ಟ ಬಗ್ಗೆ ಮಾಹಿತಿ ನೀಡಿದ್ದರು.ಇದರಿಂದ ಇಡೀ ಕುಟುಂಬ ದುಖಃದಲ್ಲಿದ್ದು, ಮೂರು ಜನರ ಸಾವಿನ ಬಗ್ಗೆ ಸಾಕಷ್ಟು ಅನುಮಾನ ವ್ಯಕ್ತಪಡಿಸುತ್ತಿದ್ದರು. ಮೃತ ಯೋಗೇಶ್ ಹೊನ್ನಾಳ ತಾಯಿ ಮತ್ತು ಮಗುವಿಗೆ ಮೊದಲು ಗುಂಡು ಹೊಡೆದು ನಂತರ ತಾನು ಆತ್ಮಹತ್ಯೆ ಮಾಡಿಕೊಂಡಿದ್ದರು.
ಬಳಿಕ ಮೂವರ ಮೃತದೇಹವನ್ನು ಸ್ವದೇಶಕ್ಕೆ ತರಿಸಿಕೊಡುವಂತೆ ಕುಟುಂಬಸ್ಥರು ಸರ್ಕಾರಕ್ಕೆ ಮನವಿ ಮಾಡಿ ಕೊಂಡಿದ್ದರು. ಆದರೆ ಅಮೆರಿಕಾ ಪೊಲೀಸರು ಇದಕ್ಕೆ ಒಪ್ಪಿಲ್ಲ.
ಮೃತರ ಕುಟುಂಬಸ್ಥರ ಸಂಬಂಧಿಕರಾದ ಜಯಣ್ಣ ಈ ಬಗ್ಗೆ ಮಾಹಿತಿ ನೀಡಿ, ಅಮೆರಿಕಾದ ಕಾಲಮಾನ ಬೆಳಗ್ಗೆ 12.30 ಕ್ಕೆಪೊಲೀಸರು ಹೇಳಿದ ಜಾಗದಲ್ಲಿ ಅಂತ್ಯ ಕ್ರಿಯೆ ನಡೆಯಲಿದೆ. ಭಾರತದ ಕಾಲಮಾನ ಪ್ರಕಾರ ರಾತ್ರಿ (ಆ.27) ಭಾನುವಾರ ಮಧ್ಯರಾತ್ರಿ 12.30 ಆಗಿರುತ್ತದೆ.ವೀರಶೈವ ಸಂಪ್ರದಾಯದ ಪ್ರಕಾರ ವಿಧಿ, ವಿಧಾನಗಳ ಪೂಜೆ ನಡೆಯಲಿದೆ. ಸಾಮಾನ್ಯವಾಗಿ ವೀರಶೈವ ಪದ್ದತಿ ಪ್ರಕಾರ ಭೂಮಿಯಲ್ಲಿ ಮೃತರನ್ನು ಹೂಳಬೇಕು. ಆದರೆ ಅಮೆರಿಕಾದಲ್ಲಿ ಇದಕ್ಕೆ ಅವಕಾಶವಿಲ್ಲ. ಆದ್ದರಿಂದ ಮೃತ ದೇಹಗಳಿಗೆ ಅಗ್ನಿ ಸ್ಪರ್ಶ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಇನ್ನು ಮೃತ ಯೋಗೇಶ್ ಹೊನ್ನಾಳ್ ಅವರ ತಾಯಿ ಶೋಭ, ಸಹೋದರ ಪುನೀತ್, ಸಂಬಂಧಿ ಸೋಮಶೇಖರ್ ಹಾಗೂ ಆತನ ಪತ್ನಿ ಪ್ರತಿಭಾ ಹೊನ್ನಾಳ ಪಾಲಕರು ಅಮೆರಿಕದಲ್ಲಿಯೇ ಅಂತ್ಯಕ್ರಿಯೆ ಮಾಡುವುದಕ್ಕೆ ಒಪ್ಪಿಕೊಂಡಿದ್ದಾರೆ. ಇನ್ನು ಅಮೆರಿಕಾದಲ್ಲಿರುವ ಮೃತಳ ಸಂಬಂಧಿಕರಾದ ಶ್ರೀನಿವಾಸ್ ಅವರ ನೇತೃತ್ವದಲ್ಲಿ ಕೆಲವು ಭಾರತೀಯ ಸಂಪ್ರದಾಯದಂತೆ ಅಂತ್ಯಕ್ರಿಯೆ ಮಾಡಲು ತಯಾರಿ ಮಾಡುತ್ತಿದ್ದಾರೆ.
ಇನ್ನು ಯೋಗೇಶ್ ಸೇರಿ ಆತನ ಕುಟುಂಬದ ಯಾವುದೇ ಮೃತ ದೇಹಗಳನ್ನು 12 ದಿನಗಳಾದರೂ ಶವ ನೋಡುವುದಕ್ಕೂ ಅಲ್ಲಿನ ಪೆÇಲೀಸರು ಬಿಡುತ್ತಿಲ್ಲ. ಆದ್ದರಿಂದ ಶವಗಳು ಭಾರತಕ್ಕೆ ಕೊಂಡೊಯ್ಯಲಾಗದ ಸ್ಥಿತಿಯನ್ನು ತಲುಪಿವೆಯಂತೆ. ಹೀಗಾಗಿ, ಅಮೆರಿಕದ ವೈದ್ಯರ ಸಲಹೆ ಮೇರೆಗೆ ಅಮೆರಿಕಾದಲ್ಲಿ ದಫನ್ ನಡೆಯಲಿದೆ.
ಏನಿದು ಘಟನೆ :
ಅಮೆರಿಕದ ಬಾಲ್ಟಿಮೋರ್‍ನಲ್ಲಿ ಎಂಜಿನಿಯರಿಂಗ್ ಕೆಲಸ ಮಾಡುತ್ತಾ ನೆಲೆಸಿದ್ದ ಯೋಗೇಶ್ ಹೊನ್ನಾಳ್, ತನ್ನ ಹೆಂಡತಿ, ಮಗುವನ್ನು ಶೂಟ್ ಮಾಡಿ ತಾನೂ ಆತ್ಮಹತ್ಯೆಗೆ ಶರಣಾಗಿದ್ದನು.
ಇನ್ನು ಕೊನೆಗೆ ಮೃತದೇಹವನ್ನಾದರೂ ಕನ್ನಡ ನಾಡಿಗೆ ಕಳಿಸಿಕೊಡಿ ಎಂದು ಅಮೇರಿಕಾಗೆ ಎಷ್ಟೇ ಮನವಿ ಮಾಡಿದರೂ, ಇದಕ್ಕೊಪ್ಪದ ಹಿನ್ನೆಲೆಯಲ್ಲಿ ತಂದೆ, ತಾಯಿಯನ್ನು ಬಿಟ್ಟು, ಅಮೇರಿಕಾದಲ್ಲಿರುವ ಸಂಬಂಧಿಕರೇ ಅಂತ್ಯಕ್ರಿಯೆ ಮಾಡಲು ಮುಂದಾಗಿದ್ದಾರೆ.
ಸಾವಿನ ಬಗ್ಗೆ ಪೊಲೀಸರು ಪರಿಶೀಲನೆ ಮಾಡಿದಾಗ ಮೂವರ ತಲೆಯಲ್ಲಿಯೂ ಬಂದೂಕಿನ ಬುಲೆಟ್‍ಗಳು ಪತ್ತೆಯಾಗಿದ್ದವು. ಜೊತೆಗೆ, ಮನೆಯಲ್ಲಿ ಡೆತ್‍ನೋಟ್ ಬರೆದಿಟ್ಟು, ಕುಟುಂಬದ ಯಜಮಾನ (ಯೋಗೇಶ್ ಹೊನ್ನಾಳ್) ತನ್ನ ಪತ್ನಿ ಹಾಗೂ ಮಗನನ್ನು ಬಂದೂಕಿನಿಂದ ಶೂಟ್ ಮಾಡಿ ಕೊಲೆಗೈದು, ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಅಮೆರಿಕಾದ ಪೊಲೀಸರು ಮಾಹಿತಿ ನೀಡಿದ್ದರು.
ಇನ್ನು ಮರಣೋತ್ತರ ಪರೀಕ್ಷೆ ಹಾಗೂ ಇತರೆ ಪೊಲೀಸರ ತನಿಖೆ ಪೂರ್ಣಗೊಳಿಸಿ ಮೃತದೇಹಗಳನ್ನು ಕರ್ನಾಟಕಕ್ಕೆ ಕಳುಹಿಸಿ ಕೊಡಲಾಗುತ್ತದೆ ಎಂದು ಕುಟುಂಬ ಸದಸ್ಯರು ನಂಬಿಕೊಂಡಿದ್ದರು. ಆದರೆ ಅದು ಹಾಗೆ ಆಗಲಿಲ್ಲ
ಶ್ರಮ ವ್ಯರ್ಥ:
ಮೃತಪಟ್ಟ ಪಾರ್ಥಿವ ಶರೀರಗಳನ್ನು ಭಾರತಕ್ಕೆ ತರಲು ಕುಟುಂಬಸ್ಥರು ಶತಪ್ರಯತ್ನ ಮಾಡುತ್ತಿದ್ದರು. ಈ ಬಗ್ಗೆ ದಾವಣಗೆರೆ ಜಿಲ್ಲಾಡಳಿತವು ಅಮೆರಿಕಾವನ್ನು ಕೂಡ ಸಂಪರ್ಕ ಮಾಡಿತ್ತು. ಜೊತೆಗೆ, ಮೃತ ಮಹಿಳೆ ಸಂಬಂಧಿಕರಾದ ಶ್ರೀನಿವಾಸ್ ಎನ್ನುವವರು ಅಮೆರಿಕಾದಲ್ಲಿದ್ದು, ಅವರೇ ದಾವಣಗೆರೆ ಮೃತದೇಹ ತರುವುದಾಗಿ ಭರವಸೆ ನೀಡಿದ್ದರು. ಆದರೆ, 12 ದಿನಗಳಾದರೂ ಇನ್ನೂ ಪೊಲೀಸರು ಮೃತದೇಹ ಕೊಡಲು ನಿರಾಕರಣೆ ಮಾಡಿದ್ದರಿಂದ, ಅಮೆರಿಕಾದಲ್ಲಿಯೇ ಅಂತ್ಯಕ್ರಿಯೆ ನಡೆಸುವಂತೆ ಮೃತರ ಪೋಷಕರು ತಿಳಿಸಿದ್ದಾರೆ. ಇದರಿಂದಾಗಿ ಕೊನೆಯ ಬಾರಿಗೆ ಸತ್ತವರ ಮುಖವನ್ನೂ ನೋಡಲಾಗದೇ ದಾವಣಗೆರೆಯಲ್ಲಿರುವ ಮೃತ ಪ್ರತಿಭಾ ಹೊನ್ನಾಳ್ ತಂದೆ-ತಾಯಿ ಮರಗುತ್ತಿದ್ದಾರೆ.
ಸಾವಿಗೆ ಕಾರಣವೇನು?
ಅಮೆರಿಕಾದ ಬಾಲ್ಟಿಮೋರ್‍ನಲ್ಲಿದ್ದ ಯೋಗೇಶ್ ಹೊನ್ನಾಳ್ ಡಿಪ್ರೇಶನ್ ಗೆ ಹೋಗಿದ್ದರು. ಆ ಕಾರಣದಿಂದ ಪತಿ, ಮಗನನ್ನು ಶೂಟ್ ಮಾಡಿ ಬಳಿಕ ಯೋಗೇಶ್ ಸಹ ಆತ್ಮಹತ್ಯೆ ಮಾಡಿಕೊಂಡಿದ್ದರು. ಡೆತ್ ನೋಟ್ ನಲ್ಲಿ ನನ್ನ ಸಾವಿಗೆ ಯಾರು ಕಾರಣರಲ್ಲ ಎಂದು ಬರೆದಿದ್ದಾರೆ. ಆದರೆ ಡೆತ್ ನೋಟ್ ಸಿಕ್ಕ ಬಳಿಕವೇ ನಿಜವಾದ ಕಾರಣ ಗೊತ್ತಾಗಲಿದೆ ಎಂದು ಸಂಬಂಧಿಕರು ಅನಿಸಿಕೆ ವ್ಯಕ್ತಪಡಿಸುತ್ತಾರೆ