ಜಗಳೂರು:ಕೊಡದಗುಡ್ಡದ ವೀರಣ್ಣನ ಸನ್ನಿಧಾನದಲ್ಲಿ ಜನತಾ ದರ್ಶನಕ್ಕೆ ಶಾಸಕ ದೇವೇಂದ್ರಪ್ಪ ಚಾಲನೆ

Suddivijaya
Suddivijaya September 26, 2023
Updated 2023/09/26 at 1:40 AM

ಸುದ್ದಿವಿಜಯ,ಜಗಳೂರು: ಸರಕಾರಿ ಕೆಸಲ ದೇವರ ಕೆಲಸ ಎಂದು ಭಾವಿಸಿ ಬಡವರ, ದೀನ ದಲಿತರ ಸಮಸ್ಯೆಗಳನ್ನು ಕ್ಷಿಪ್ರಗತಿಯಲ್ಲಿ ಸರಕಾರಿ ಅಧಿಕಾರಿಗಳು ಕಾರ್ಯ ಮುಗಿಸಿಕೊಡಬೇಕು. ಕೆಲಸ ಮಾಡಿಕೊಡಲು ಹಣ ಪಡೆದರೆ ಲಂಚ ತೆಗೆದುಕೊಳ್ಳುವುದು ಶಿಕ್ಷರ್ಹ ಅಪರಾಧವೋ ಅದೇ ರೀತಿ ವಿಳಂಭ ದೊರಣೆ ಅನುಸರಿಸುವುದು ಸಹ ಲಂಚಕ್ಕೆ ಸಮ ಎಂದು ಶಾಸಕ ಬಿ.ದೇವೇಂದ್ರಪ್ಪ ಅಧಿಕಾರಿಗಳಿಗೆ ಎಚ್ಚರಿಸಿದರು.

ತಾಲೂಕಿನ ದೇವಿಕೆರೆ ಗ್ರಾಪಂ ವ್ಯಾಪ್ತಿಗೆ ಬರುವ ಕೊಡದ ಗುಡ್ಡ ಗ್ರಾಮದಲ್ಲಿ ತಾಲೂಕು ಆಡಳಿತ, ತಾಪಂ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಜನರ ಅಹ್ವಾಲು, ಸಮಸ್ಯೆಗಳ ಮಾಹಿತಿ ಪಡೆದು ಅವರು ಮಾತನಾಡಿದರು.

ಜನತಾ ದರ್ಶನ ವಿನೂತನ ಕಾರ್ಯಕ್ರಮವಾಗಿದ್ದು, ಜನರ ಸಮಸ್ಯೆಗಳನ್ನು ಆಲಿಸಿ ಸ್ಥಳದಲ್ಲಿಯೇ ಪರಿಹಾರ ನೀಡುವಂತ ಕೆಲಸವಾಗಿದೆ ಎಂದರು. ಹಲವು ಅಡೆತಡೆಗಳ ನಂತರ 57 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಡಿ ಈಗಾಗಲೇ ತಾಲೂಕಿನ 11 ಕೆರೆಗಳಿಗೆ ನೀರು ಬಂದಿದ್ದು, ಉಳಿದ ಕೆರೆಗಳಿಗೆ ಪೈಪ್ ಲೈನ್ ಅಳವಾಡಿಸುವ ಕಾಮಗಾರಿ ಪ್ರಗತಿಯಲ್ಲಿದೆ.ಜಗಳೂರು ತಾಲೂಕಿನ ಕೊಡದ ಗುಡ್ಡ ಗ್ರಾಮದಲ್ಲಿ ನಡೆದ ಜನಾತ ದರ್ಶನ ಕಾರ್ಯಕ್ರಮವನ್ನು ಶಾಸಕ ಬಿ. ದೇವೇಂದ್ರಪ್ಪ ಉದ್ಘಾಟಿಸಿದರು.ಜಗಳೂರು ತಾಲೂಕಿನ ಕೊಡದ ಗುಡ್ಡ ಗ್ರಾಮದಲ್ಲಿ ನಡೆದ ಜನಾತ ದರ್ಶನ ಕಾರ್ಯಕ್ರಮವನ್ನು ಶಾಸಕ ಬಿ. ದೇವೇಂದ್ರಪ್ಪ ಉದ್ಘಾಟಿಸಿದರು.

ರೈತರು ಸಹ ಕಾಮಗಾರಿ ಸಹಕಾರ ನೀಡಬೇಕು. ವರ್ಷದಲ್ಲಿ 4 ತಿಂಗಳು ಮಾತ್ರ ನೀರು ದೊರೆಯಲಿದ್ದು, ನದಿ ಸಮೀಪ ಉತ್ತಮ ಮಳೆಯಾದರೆ ಮಾತ್ರ ನೀರು ದೊರೆಯಲಿದೆ ಆ ಭಾಗದಲ್ಲಿ ಮಳೆಯಾಗದಿದ್ದಾರೆ ಕೆರೆಗಳಿಗೆ ನೀರು ಬರುವುದಿಲ್ಲ. ಭದ್ರ ಮೇಲ್ದಂಡೆ ನೀರವಾರಿ ಯೋಜನೆಯ ಕಾಮಗಾರಿ ಪ್ರಗತಿಯಲ್ಲಿದೆ ಎಂದವರು ಹೇಳಿದರು.

ತಹಶೀಲ್ದಾರ್ ಅರುಣ ಕಾರಗಿ ಮಾತನಾಡಲು ಪ್ರಾರಂಬಿಸುತ್ತಿದ್ದಂತೆ ಗ್ರಾಮದಲ್ಲಿರುವ ಕೆರೆ ಕೊಡಿ ಬಿದ್ದು ನೀರಲ್ಲ ಬಡ ರೈತರ ಜಮಿನುಗಳಿಗೆ ನುಗ್ಗುತ್ತಿವೆ ಮತ್ತು ಸುತ್ತಮುತ್ತಲಿನ ಪ್ರದೇಶ ಜೌಗು ಪ್ರದೇಶವಾಗಿದ್ದು ಸರಿಪಡಿಸುವಂತೆ ಅಧಿಕಾರಿಗಳ ಗಮನಕ್ಕೆ ತಂದರು ಪ್ರಯೋಜನವಾಗಿಲ್ಲ. ಇ ಸ್ವತ್ತು ಮಾಡಿಕೊಡುವಂತ ಎರಡು ವರ್ಷಗಳ ಹಿಂದೆ ಅರ್ಜಿಸಲ್ಲಿದರೂ ಇದುವರೆಗೆ ಕಾರ್ಯರೂಪಕ್ಕೆ ಬಂದಿಲ್ಲ.

ಸರ್ವೆ ಇಲಾಖೆಯವರು ಕೆಲಸ ಮಾಡಲು ಡಿಮ್ಯಾಂಡ್ ಮಾಡುತ್ತಿದ್ದಾರೆ ಎಂದು ಗ್ರಾಮದ ಮುಖಂಡ ಅನಂತ್ ಸಭೆಯ ಗಮನಕ್ಕೆ ತಂದಾಗ ಕೆರೆ ಕೊಡಿ ಸರಿಪಡಿಸುವ ಬಗ್ಗೆ ಸಂಬಂಧಿಸಿದ ಎಂಜಿನಿಯರ್ ತಹಶೀಲ್ದಾರ್ ಸ್ಥಳದಲ್ಲೆ ಸೂಚಿದ ಅವರು ಸ್ಮಶನಕ್ಕೆ ಗ್ರಾಮದ ಸಮೀಪ 4 ಎಕರೆ ಜಮಿನು ಇದೆ. ಅಲ್ಲಿ ಸ್ಮಶಾನದ ವ್ಯವಸ್ಥೆ ಮಾಡಿಸಲಾಗುವುದು.

ಪ್ರತಿಯೊಬ್ಬ ರೈತರು ರೈತ ಸಂಪರ್ಕ ಕೇಂದ್ರಗಳಿಗೆ ತೆರಳಿ ಇಕೆವೈಸಿ ಮಾಡಿಸಿದರೆ ಮಾತ್ರ ನಿಮ್ಮ ಖಾತೆಗಳಿಗೆ ಪ್ರಧಾನ ಮಂತ್ರಿ ಕಿಸಾನ ಸಮ್ಮಾನ್ ಹಣ ಬಿಳಲಿದೆ ದಯಮಾಡಿ ರೈತರು ಮಾಡಿಸಿಕೊಳ್ಳಬೇಕು ತಹಶೀಲ್ದಾರ್ ತಿಳಿಸಿದರು.

ಈ ಸಂಧರ್ಭದಲ್ಲಿ ಗ್ರಾಪಂ ಅಧ್ಯಕ್ಷ ರಣದಮ್ಮ, ಉಪಾಧ್ಯಕ್ಷ ವಿರೇಶ್, ತಾ.ಪಂನ ಪ್ರಭಾರಿ ಇಓ ಕರಿಬಸವಯ್ಯ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಷಂಷೀರ್, ಕೆಪಿಸಿಸಿ ಸದಸ್ಯ, ಲೋಕಾಸಭಾ ಟಿಕೆಟ್ ಆಕಾಂಕ್ಷಿ ಕಲ್ಲೇಶ್‍ರಾಜ್‍ಪಾಟೇಲ್, ಅಲ್ಪ ಸಂಖ್ಯಾತರ ಘಟಜಕದ ಅಧ್ಯಕ್ಷ ಅಹಮದ ಆಲಿ, ಪಿಡಿಓ ಸುನಿತಾ, ಬಸಪುರ ರವಿಚಂದ್ರ, ಎಡಿ ಚಂದ್ರಶೇಖರ್,

ತಾಲೂಕು ಮಟ್ಟದ ಅಧಿಕಾರಿಗಳಾದ ಹಾಲಪ್ಪ, ಬಿರೇಂದ್ರ ಕುಮಾರ್, ಲಿಂಗರಾಜ್, ತೋಟದಯ್ಯ, ಕೃಷಿ ಇಲಾಖೆಯ ಗಿರೀಶ್, ಆರ್.ಐ ಧನಂಜಯ್, ಗ್ರಾ.ಪಂ.ಸದಸ್ಯರಾದ ಗುರುಸ್ವಾಮಿ ಸೇರಿದಂತೆ ಮತ್ತಿತರರು ಹಾಜರಿದ್ದರು.

ಮಧ್ಯ ಮಾರಾಟ ಆವಳಿ, ತಡೆಗಟ್ಟದ ಅಧಿಕಾರಿಗಳು:

ಗ್ರಾಮದಲ್ಲಿ ಆಕ್ರಮ ಮದ್ಯ ಮಾರಾಟದ ಹಾವಳಿ ಹೆಚ್ಚಾಗಿದ್ದು ಇದರ ಸೇವನೆಯಿಂದ ಯುವಕರು ದಾರಿ ತಪ್ಪುತ್ತಿದ್ದಾರೆ. ಕೃಷಿ ಇಲಾಖೆಯ ಸೌಲಭ್ಯಗಳು ಉಳ್ಳವರ ಪಾಲಾಗುತ್ತಿವೆ. ಗ್ರಾಮದಲ್ಲಿ ಸ್ವಚ್ಚತೆ ಕಣ್ಮರೆಯಾಗಿದ್ದು ಸೊಳ್ಳಗಳ ಹಾವಳಿಯಿಂದ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಧಿಕಾರಿಗಳು ಏನು ಕೆಲಸ ಮಾಡುತ್ತಿದ್ದಾರೆ ತಿಳಿಯದಾಗಿದೆ ಎಂದು ಕೊಡದಗುಡ್ಡ ಗ್ರಾಮಸ್ಥರು ಪ್ರಶ್ನೆಗಳ ಸುರಿಮಳೆಗೈದ ಪ್ರಸಂಗ ಜನತಾ ದರ್ಶನ ಕಾರ್ಯಕ್ರಮದಲ್ಲಿ ಶಾಸಕರು, ಅಧಿಕಾರಿಗಳ ಸಮ್ಮುಖದಲ್ಲೇ ಸೋಮವಾರ ಅಸಮಧಾನ ವ್ಯಕ್ತಪಡಿಸಿದರು.

 

Share this Article
Leave a comment

Leave a Reply

Your email address will not be published. Required fields are marked *

error: Content is protected !!