ಸುದ್ದಿವಿಜಯ, ಜಗಳೂರು: ನಾಡು ಕಂಡ ಅಪರೂಪದ ಧೀಮಂತ ರಾಜಕಾರಣಿ ಮೈಸೂರು ಮಹಾರಾಜರಿಂದ ‘ಮುಷೀರ್-ಉಲ್-ಮುಲ್ಕ್’ ಪ್ರಶಸ್ತಿ ಪಡೆದ ರಾಜ್ಯ ಮೊದಲ ಶಾಸನ ಸಭೆಯ ವಿರೋಧ ಪಕ್ಷದ ನಾಯಕರಾಗಿದ್ದ ಜೆ.ಎಂ.ಇಮಾಂ ಸಾಬ್ ಹೆಸರಿನಲ್ಲಿ ಕೊಡಮಾಡುವ ‘ಜೆಎಂ ಇಮಾಂ ಸ್ಮಾರಕ’ 5ನೇ ರಾಜ್ಯ ಪ್ರಶಸ್ತಿಯನ್ನು ಪ್ರಸ್ತುತ ವರ್ಷ ನ್ಯಾ.ಸಂತೋಷ್ ಹೆಗಡೆ ಅವರಿಗೆ ಪ್ರದಾನ ಮಾಡಲಾಗುವುದು ಎಂದು ಟ್ರಸ್ಟ್‌ನ ಅಧ್ಯಕ್ಷ ಹಾಜಿ ಜೆ.ಕೆ. ಹುಸೇನ್ ಮಿಯ್ಯಾ ಸಾಬ್ ತಿಳಿಸಿದರು.
ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವ ಅವರು, ಡಿ.27 ರಂದು ಬುಧವಾರ ಜಗಳೂರು ಪಟ್ಟಣದ ಜೆಎಂ ಇಮಾಂ ಸ್ಮಾರಕ ಶಾಲೆಯ ಆವರಣದಲ್ಲಿರುವ ಸಂತ ಶಿಶುವಿನಾಳ ಶರೀಫ್ ಸಾಹೇಬರ ರಂಗ ಮಂದಿರದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಡಿ.28 ರಂದು ಗುರುವಾರ 23ನೇ ‘ಮಕ್ಕಳ ಹಬ್ಬ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.ಜೆಎಂ ಇಮಾಂ ಸಾಬ್
ಕಾರ್ಯಕ್ರಮವನ್ನು ಹಿರಿಯ ಪತ್ರಕರ್ತ ಮತ್ತು ಸಂಸ್ಕೃತ ಚಿಂತಕ ಡಾ.ಎನ್.ಜಗದೀಶ್ ಕೊಪ್ಪ ಉದ್ಘಾಟನೆ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಶಾಸಕ ಬಿ.ದೇವೇಂದ್ರಪ್ಪ, ರಾಜ್ಯ ಪಿಂಜಾರ ಸಂಘದ ಅಧ್ಯಕ್ಷ ಜಲೀಲ್ ಸಾಬ್, ಬಿಇಒ ಹಾಲಮೂರ್ತಿ, ಶೌರ್ಯ ಪ್ರಶಸ್ತಿ ಪುರಸ್ಕೃತ ರಾದ ಮಹಿಮಾ ಮಾನಸಿ, ಪಾಲ್ಗುಣಿ ಯಾಜ್ಞ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಟ್ರಸ್ಟ್‌ನ ಕಾರ್ಯದರ್ಶಿ ಹಾಜಿ ಜೆ.ಬಿ.ಖಲೀಲ್ ಸಾಬ್, ಸಲಹಾ ಸಮಿತಿಯ ಎನ್.ಟಿ.ಎರ್ರಿಸ್ವಾಮಿ, ಡಿ.ಸಿ.ಮಲ್ಲಿಕಾರ್ಜುನ, ಹಾಲಪ್ಪ, ಬಸವೇಶ, ಯಾದವರೆಡ್ಡಿ, ಡಾ.ದಾದಾಪೀರ್ ನವಿಲೇಹಾಳ್, ಡಾ.ಬಿ.ಎ.ರಾಜಪ್ಪ, ಜೆ.ಎ.ಸೀತಾರಾಂ, ಆಡಳಿತಾಧಿಕಾರಿ ಜೆ.ಕೆ.ಮಹಮದ್ ಹುಸೇನ್ ಸೇರಿದಂತೆ ಅನೇಕರು ಭಾಗವಹಿಸಲಿದ್ದಾರೆ.
ಮಕ್ಕಳ ಹಬ್ಬದಲ್ಲಿ ಇಮಾಂ ಶಾಲೆಯ ಮಕ್ಕಳಿಂದ ಸಾಂಸ್ಕøತಿ, ಜಾನಪದ, ನಾಟಕ, ಕಲೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.