ಸುದ್ದಿವಿಜಯ, ಜಗಳೂರು: ಹಾದಿಯಲ್ಲಿ ಸಾಗುತ್ತಿರುವಾಗ ಬಂಡಿಯ ಚಕ್ರಗಳು ಕೆಳಕ್ಕೆ ಉರುಳದಂತೆ ತಡೆಯಲು ಕಡಾಣಿಗಳು ಇರುವಂತೆಯೇ, ವ್ಯಕ್ತಿಯ ಮೈ ಮನದಲ್ಲಿ ತುಡಿಯುವ ಕೆಟ್ಟ ಒಳಮಿಡಿತಗಳನ್ನು ತಡೆದು, ವ್ಯಕ್ತಿಯು ತನ್ನ ಜೀವನದಲ್ಲಿ ಒಳ್ಳೆಯ ಹಾದಿಯಲ್ಲಿ ನಡೆಯಲು ಅಗತ್ಯವಾದ ಸಾಮಾಜಿಕ ಅರಿವು ಮತ್ತು ಎಚ್ಚರವನ್ನು ಮೂಡಿಸುವ ಕಸುವು ಶಿಕ್ಷಣದಲ್ಲಿದೆ ಎಂದು ಜೆ.ಎಂ.ಇಮಾಂ ಶಾಲೆಯ ಹಿರಿಯ ಶಿಕ್ಷಕ ಎಸ್. ಹಾಲಪ್ಪ ಹೇಳಿದರು.
ಪಟ್ಟಣದ ಜೆಎಂ ಇಮಾಂ ಶಾಲೆಯಲ್ಲಿ ಗುರುವಾರ 23ನೇ ಮಕ್ಕಳ ಹಬ್ಬದ 2ನೇ ದಿನದ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಾಮಾಜಿಕ ಅರಿವು’ ಎಂದರೆ ವ್ಯಕ್ತಿಯು ತನ್ನ ನಡೆನುಡಿಗಳಿಂದ ತನಗೆ ಮತ್ತು ತನ್ನ ಕುಟುಂಬಕ್ಕೆ ಒಳಿತನ್ನು ಮಾಡಿಕೊಳ್ಳುವಂತೆಯೇ ಸಹ ಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡಬೇಕು ಎಂಬ ತಿಳಿವಳಿಕೆ ಶಿವಶರಣಶರಣೆಯರ ನುಡಿಗಳಲ್ಲಿದೆ.
ಪೂರ್ವ ಎಂದರೆ ಅಂಕು ಡೊಂಕು ಇಲ್ಲದ ಶೂನ್ಯ ದಿಂದ ಶೂನ್ಯ ಕೂಡಿ ಕಳೆದರೂ ಶೂನ್ಯವೇ ಬರುತ್ತದೆ.ಅಂಕು ಡೊಂಡು ಇಲ್ಲದ ಜೀವನ ನಡೆಸಬೇಕು ಎಂದರೆ ಅದಕ್ಕೆ ಶಿಕ್ಷಣ ಬೇಕು.
ಶಿಕ್ಷಣದಿಂದ ಪರಿಪೂರ್ಣ ಜೀವನವೇ ಬದುಕಿನ ಸಾರ್ಥಕತೆ ಮೂಡುತ್ತದೆ. ನಮ್ಮ ಶಾಲೆ ಗುಣಮಟ್ಟದಲ್ಲಿ ರಾಜಿ ಇಲ್ಲದೇ ವಿದ್ಯಾರ್ಥಿಗಳಿಗೆ ನ್ಯಾಯ ಕೊಡುವ ಕೆಲಸ ಮಾಡುತ್ತಿದೆ.
ಮಕ್ಕಳ ಅಭಿವೃದ್ಧಿಗೆ ಶಾಲಾ ಆಡಳಿತ ಮಂಡಳಿ, ಶಿಕ್ಷಕರು ಕಂಕಣ ಬದ್ಧವಾಗಿ ನಿಂತಿದ್ದಾರೆ. ಮನೆ ಮನೆಗೆ ತೆರಳಿ ಮಕ್ಕಳ ಕುಂದು ಕೊರತೆ ನೀಗಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಇಮಾಂ ಟ್ರಸ್ಟ್ ಸದಸ್ಯ ಎಸ್.ಎಚ್ ಮಸ್ತಾನ್ ಸಾಬ್, 2001ರಲ್ಲಿ ಅರಂಭವಾದಾಗ ಇಮಾಂ ಶಾಲೆ ಆರಂಭದಲ್ಲಿ 16 ಜನ ವಿದ್ಯಾರ್ಥಿಗಳು ಇದ್ದರು.
23 ವರ್ಷಗಳಲ್ಲಿ 900 ವಿದ್ಯಾರ್ಥಿಗಳು ಇದ್ದಾರೆ. ಸಾಕಷ್ಟು ವಿದ್ಯಾರ್ಥಿಗಳು ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ರ್ಯಾಂಕ್ ಬಂದಿದ್ದಾರೆ.
ಈ ಬಾರಿಯ ಪರೀಕ್ಷೆಯಲ್ಲಿ ರಾಜ್ಯ, ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ರ್ಯಾಂಕ್ ಪಡೆದು ಶಾಲೆ ಕೀರ್ತಿ ಹೆಚ್ಚಿಸಿ.
ಶಾಲೆಯ ಅಭಿವೃದ್ಧಿಗಾಗಿ ಸಾಕಷ್ಟು ಯೋಜನೆ ಹಾಕಿ ಕೊಂಡಿದ್ದೇವೆ.
ಹೊಸ ಬಿಲ್ಡಿಂಗ್ ನಿರ್ಮಾಣವಾಗುತ್ತಿದ್ದು, ಮುಂದಿನ ಶೈಕ್ಷಣಿಕ ವರ್ಷದಲ್ಲಿ 1200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೇರುವ ನಿರೀಕ್ಷೆಯಿದೆ ಎಂದರು.
ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಹಾಜಿ ಜೆ.ಬಿ. ಖಲೀಲ್ ಸಾಬ್, ಖಜಾಂಚಿ ಜೆ.ಕೆ. ಮಹಮದ್ ಷರೀಫ್ ಪದಾಧಿಕಾರಿಗಳಾದ ಹಾಜಿಮಾ ನೂರ್ ಫಾತಿಮಾ ಬೇಗಂ, ಫರಿದಾ ಬೇಗಂ,
ಆಡಳಿತಾಧಿಕಾರಿ ಜೆ.ಕೆ. ಮಹಮದ್ ಹುಸೇನ್, ಮುಖ್ಯ ಶಿಕ್ಷಕರಾದ ಜೆ.ಆರ್.ಶಂಕರ್, ಮೇಲ್ವಿಚಾರಕ ಬಿ.ಟಿ.ನಾಗರಾಜ್, ಹಿರಿಯ ಶಿಕ್ಷಕಿ ಎಂ.ಶಿಲ್ಪ ಸೇರಿದಂತೆ ಅನೇಕರು ಇದ್ದರು.