ಸುದ್ದಿವಿಜಯ, ಜಗಳೂರು: ಪಟ್ಟಣದ ಜೆ.ಎಂ. ಇಮಾಂ ಸ್ಮಾರಕ ಶಾಲೆಯಲ್ಲಿ 23ನೆಯ ಮಕ್ಕಳ ಹಬ್ಬ ದ ಪ್ರಯುಕ್ತ ಏರ್ಪಡಿಸಲಾದ ‘ವಾರ್ಷಿಕ ಕ್ರೀಡಾ ದಿನ’ ಕಾರ್ಯಕ್ರಮವನ್ನು ಜೆ. ಎಂ. ಇಮಾಂ ಟ್ರಸ್ಟ್ ನ ಅಧ್ಯಕ್ಷರಾದ ಹಾಜಿ ಜೆ. ಕೆ. ಹುಸೇನ್ ಮಿಯಾ ಸಾಬ್ ಉದ್ಘಾಟಿಸಿದರು.
ಕ್ರೀಡಾ ದಿನದ ಧ್ವಜಾರೋಹಣವನ್ನು ಹಿರಿಯ ಶಿಕ್ಷಕರಾದ ಎಸ್. ಹಾಲಪ್ಪ ನವರು ನೆರವೇರಿಸಿ ಮಕ್ಕಳಿಗೆ ಕ್ರೀಡಾ ಮನೋಭಾವದ ಬಗ್ಗೆ ಸಂದೇಶ ನೀಡಿದರು. ಸಂಸ್ಥೆಯ ಆಡಳಿತಾಧಿಕಾರಿಗಳಾದ ಮಹಮ್ಮದ್ ಹುಸೇನ್, ಮಕ್ಕಳಿಂದ ಕ್ರೀಡಾ ಜ್ಯೋತಿ ಸ್ವೀಕರಿಸಿದರು.ಜಗಳೂರು ಪಟ್ಟಣದ ಜೆಎಂ ಇಮಾಂ ಸ್ಮಾರಕ ಶಾಲೆಯಲ್ಲಿ ‘ವಾರ್ಷಿಕ ಕ್ರೀಡಾ ದಿನ’ಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ಜೆ. ಆರ್. ಶಂಕರ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಎಸ್. ಎಂ. ವಿಜಯಲಕ್ಷ್ಮಿ, ಹಿರಿಯ ಶಿಕ್ಷಕಿ ಶಿಲ್ಪ, ಸೀಮಾ ತಬಸ್ಸುಮ್, ಬಿ.ಟಿ. ನಾಗರಾಜ್ ಸೇರಿದಂತೆ ಎಲ್ಲಾ ಶಿಕ್ಷಕರು, ಸಿಬ್ಬಂದಿ ವರ್ಗ, ಮಕ್ಕಳು ಭಾಗವಹಿಸಿದ್ದರು.