ಸುದ್ದಿವಿಜಯ, ಜಗಳೂರು: ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಪ್ರಪ್ರಥಮ ಬಾರಿಗೆ ಆಯೋಜಿಸಿರುವ ಜಗಳೂರು ಪ್ರೀಮಿಯರ್ ಲೀಗ್ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಶನಿವಾರ ಶಾಸಕ ಬಿ.ದೇವೇಂದ್ರಪ್ಪ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಕ್ರೀಡೆಯಿಂದ ಸಮಾನತೆ ಹಾಗೂ ಜಾತ್ಯಾತೀತ ಮನೋಭಾವ ಮೂಡುವುದಲ್ಲದೆ ದೈಹಿಕ ಸದೃಢತೆಗೆ ಪೂರಕವಾಗಿವೆ. ಸೋಲು ಗೆಲುವು ಸಹಜ ಭಾಗವಹಿಸುವಿಕೆ ಮುಖ್ಯವಾಗಿದೆ.
ತೀರ್ಪುಗಾರರು ಗೊಂದಲ ಸೃಷ್ಟಿಸದೆ ಪಾರದರ್ಶಕವಾಗಿ ತೀರ್ಪುನೀಡಬೇಕು. ಕ್ರೀಡಾಪಟುಗಳು ತೀರ್ಪುಗಳನ್ನು ಸಮಾನವಾಗಿ ಸ್ವೀಕರಿಸಿ ತಮ್ಮ ಪ್ರತಿಭೆ ಪ್ರದರ್ಶಿಸಬೇಕು. 10 ಪ್ರಾಂಚೈಸಿಗಳು ತಲಾ15 ಜನ ಆಟಗಾರರಂತೆ 10 ತಂಡಗಳನ್ನು ಪ್ರತಿ ತಂಡಕ್ಕೆ 20 ಸಾವಿರ ರೂ ಖರೀದಿಸಿ ಆಟವಾಡಿಸುತ್ತಿರುವ ಮೂಲಕ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.
ತಾಲೂಕಿನ ಕ್ರಿಕೆಟ್ ಪ್ರೇಮಿಗಳು ಪ್ರೇಕ್ಷಕರಾಗಿ ಮನೆಯಲ್ಲಿ ಕುಳಿತು ಯೂಟೂಬ್ ಚಾನೆಲ್‍ನಲ್ಲಿ ಲೈವ್ ಸ್ಪೋಟ್ರ್ಸ್ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಯಾವ ಬಿಸಿಸಿಐಗೂ ನಾಚಿಸುವಂತಿದೆ. ರಾಜ್ಯ ಮಟ್ಟದ ಕ್ರೀಡೆಯಾಗಿ ನೋಡುತ್ತಿದ್ದೇವೆ ಎಂದು ಭಾಸವಾಗುತ್ತದೆ ಎಂದರು. ನಂತರ ಬ್ಯಾಟ್ ಹಿಡಿದು ಕ್ರಿಕೆಟ್ ಆಡಿ ಎಲ್ಲಾ ಕ್ರೀಡಾಪಟುಗಳು ಸಾರ್ವಜನಿಕರು ಗಮನವನ್ನು ಸೆಳೆದರು.
ದೊಣ್ಣೆಹಳ್ಳಿ ಮುಸ್ಟೂರಪ್ಪ, ಜಗಳೂರು ಪ್ರೀಮಿಯರ್ ಲೀಗ್ ಟೆನಿಸ್ ಬಾಲ್ ಕ್ರಿಕೆಟ್ (ಜೆಪಿಎಲ್)ನ ಆಯೋಜಕರಾದ ನಾಗರಾಜು, ರೋಷನ್, ಎನ್.ಹೆಚ್.ಕುಮಾರ್, ರೋಷನ್, ಶಾರುಕ್, ಕೆಚ್ಚೇನಹಳ್ಳಿ ಹರೀಷ್. ಕ್ಯಾಸೇನಹಳ್ಳಿ ರಮೇಶ್, ಚಂದ್ರು, ಸೇರಿದಂತೆ ಇದ್ದರು.