ಅಪರಾಧಗಳು ಇಳಿಕೆಯಿಂದ ಸುಸ್ಥಿರ ಸಮಾಜ ನಿರ್ಮಾಣ:ನ್ಯಾ.ನಿವೇದಿತಾ ಅಭಿಪ್ರಾಯ

Suddivijaya
Suddivijaya May 10, 2024
Updated 2024/05/10 at 11:05 AM

ಸುದ್ದಿವಿಜಯ, ಜಗಳೂರು: ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಕ್ರೈಂ ಪ್ರಕರಣಗಳು ಹೆಚ್ಚಾಗುತ್ತಿದ್ದು ಕಳವಳ ಕಾರಿ ಸಂಗತಿ. ಅಪರಾಧ ಪ್ರಕರಣಗಳು ಇಳಿಮುಖಗೊಂಡಾಗ ಮಾತ್ರ ಆರೋಗ್ಯಕರ ವಾತಾವರಣ ನಿರ್ಮಾಣ ಮಾಡಲು ಸಾಧ್ಯ ಎಂದು ಸಿಜೆಎಂ ಹಿರಿಯ ನ್ಯಾಯಾಧೀಶೆ ನಿವೇದಿತಾ ಹೇಳಿದರು.

ಪಟ್ಟಣದ ನ್ಯಾಯಾಲಯದ ಸಭಾಂಗಣದಲ್ಲಿ ಶುಕ್ರವಾರ ಸಿಜೆಎಂ ನ್ಯಾಯಾಧೀಶೆಯಾಗಿ ಬಡ್ತಿ ಹೊಂದಿದ ಹಿನ್ನೆಲೆ ವಕೀಲರ ಸಂಘದಿಂದ ಹಮ್ಮಿಕೊಂಡಿದ್ದ ಬೀಳ್ಕೋಡುಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

ನ್ಯಾಯಾಲಯದಲ್ಲಿ ಸೇವೆ ಮಾಡುವುದು ಸುಲಭವಿಲ್ಲ. ತುಂಬ ಕಠಿಣವಾದ ದಾರಿಯಲ್ಲಿ ನಡೆಯಬೇಕಾಗುತ್ತದೆ. ಇಲ್ಲಿ ಸಂಬಂಧ, ಸ್ನೇಹ, ಬಂಧುಗಳು ಎಂಬುದನ್ನು ಮರೆತು ಕಾನೂನಿನ್ವಯ ಕರ್ತವ್ಯ ನಿರ್ವಸಹಿ ಬೇಕಾಗುತ್ತದೆ ಎಂದರು.

 ಜಗಳೂರು ಪಟ್ಟಣದ ನ್ಯಾಯಾಲಯದ ಸಭಾಂಗಣದಲ್ಲಿ ಶುಕ್ರವಾರ ಸಿಜೆಎಂ ನ್ಯಾಯಾಧೀಶೆಯಾಗಿ ಬಡ್ತಿ ಹೊಂದಿದ ಹಿನ್ನೆಲೆ ವಕೀಲರ ಸಂಘದಿಂದ ಹಮ್ಮಿಕೊಂಡಿದ್ದ ಬೀಳ್ಕೋಡುಗೆ ಕೊಟ್ಟು ಸನ್ಮಾನಿಸಿದರು.
 ಜಗಳೂರು ಪಟ್ಟಣದ ನ್ಯಾಯಾಲಯದ ಸಭಾಂಗಣದಲ್ಲಿ ಶುಕ್ರವಾರ ಸಿಜೆಎಂ ನ್ಯಾಯಾಧೀಶೆಯಾಗಿ ಬಡ್ತಿ ಹೊಂದಿದ ಹಿನ್ನೆಲೆ ವಕೀಲರ ಸಂಘದಿಂದ ಹಮ್ಮಿಕೊಂಡಿದ್ದ ಬೀಳ್ಕೋಡುಗೆ ಕೊಟ್ಟು ಸನ್ಮಾನಿಸಿದರು.

ಜಗಳೂರಿಗೆ ನ್ಯಾಯಾಧೀಶೆಯಾಗಿ ಬಂದಾಗಿನಿಂದಲೂ ನನಗೆ ವಹಿಸಿದ ಕೆಲಸವನ್ನು ನಾನು ಪ್ರಾಮಾಣಿಕವಾಗಿ ಮಾಡಿದ್ದೇನೆ ಎಂಬ ತೃಪ್ತಿ ಇದೆ. ದಾವಣಗೆರೆಯಿಂದ ಜಗಳೂರಿಗೆ ಬಂದು ಹೋಗುವುದೇ ಒಂದು ಸುಂದರ ಅನುಭವ, ಸಂತೋಷವಾಗುತ್ತದೆ.

ಅಣಜಿ ಕೆರೆ ಏರಿಯ ಮೇಲೆ ಸ್ವಲ್ಪ ಹೊತ್ತು ವಿರಮಿಸಿ, ಅಹಲ್ಲಾದಕರ ವಾತಾವರಣ ಸವಿಯುವುದೇ ಸುಂದರವಾದ ಕ್ಷಣವಾಗಿತ್ತು ಎಂದು ತಮ್ಮ ಅನುಭವವನ್ನು ಹಂಚಿಕೊಂಡರು.

ಈ ಸಂದರ್ಭದಲ್ಲಿ ಜೆಎಂಎಫ್‍ಸಿ ನ್ಯಾಯಾಧೀಶ ಆರ್.ಚೇತನ್, ಹಿರಿಯ ವಕೀಲರಾದ ಕೆ.ಎಂ ಬಸವರಾಜಪ್ಪ, ವೈ. ಹನುಮಂತಪ್ಪ, ಪರಮೇಶ್ವರಪ್ಪ, ಶರಣಪ್ಪ, ಎಚ್.ಎಂ. ಕರಿಬಸಯ್ಯ, ವಕೀಲರ ಸಂಘದ ಇ. ಓಂಕಾರೇಶ್ವರ,

ಸಹಾಯಕ ಸರ್ಕಾರಿ ಅಭಿಯೊಜಕರಾದ ಮಂಜುನಾಥ, ವಕೀಲರ ಸಂಘದ ಕಾರ್ಯದರ್ಶಿ ಕೆ.ವಿ. ರುದ್ರೇಶ್, ಎ.ಸಿ ತಿಪ್ಪೇಸ್ವಾಮಿ, ರಂಗನಾಥ್ ಹೆಚ್. ಬಸವರಾಜ್, ಸಿ ಬಸವರಾಜ್, ಕರಿಬಸಪ್ಪ, ಶಿವಪ್ರಕಾಶ್, ಇ. ನಾಗಪ್ಪ, ನಾಗೇಶ್, ಭೂಪತಿ, ಮಹಾಂತೇಶ್, ವೇದಮೂತಿ, ಗುತ್ತಿದುರ್ಗ, ಕೊಟ್ರೇಶ್ ಸೇರಿದಂತೆ ಮತ್ತಿತರರರಿದ್ದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!