ಸುದ್ದಿವಿಜಯ, ಜಗಳೂರು: ಪ್ರಸ್ತುತ ವರ್ಷದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ತಾಲೂಕಿನ ಹಿರಿಯ ಸಾಹಿತಿಗಳು, ಬಹುಮುಖ ಪ್ರತಿಭೆ ಎನ್.ಟಿ.ಎರ್ರಿಸ್ವಾಮಿ ಅವರನ್ನು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಆಯ್ಕೆ ಸಮಿತಿ ಅವರ ಸೇವೆ ಪರಿಗಣಿಸಿ ಆಯ್ಕೆ ಮಾಡಬೇಕು ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಸುಜಾತಮ್ಮ ರಾಜು ಮನವಿ ಮಾಡಿದರು.
ಪಟ್ಟಣದ ಪತ್ರಿಕಾಭವನದಲ್ಲಿ ಶನಿವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ತಾಲೂಕಿನ ಹಾಲೇನಹಳ್ಳಿ ಎಂಬ ಕುಗ್ರಾಮದಲ್ಲಿ ಜನಿಸಿದ ಎನ್.ಟಿ.ಎರ್ರಿಸ್ವಾಮಿ, ಲೀಡ್ ಬ್ಯಾಂಕ್ ಮೇನೇಜರ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರೂ ಸಹ ಅವರ ತುಡಿತ ಕನ್ನಡ ಸಾಹಿತ್ಯ, ಬರಹ, ಲೇಖನ, ಅಂಕಣ ಬರಹ, ಸಮಾಜ ಸೇವೆ, ಜಾನಪದ ಸಾಹಿತ್ಯ, ಸ್ತ್ರಿ ಸಬಲೀಕರಣದಲ್ಲೇ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
1979 ರಿಂದ 40 ವರ್ಷಗಳ ಕಾಲ ಬ್ಯಾಂಕ್ ವೃತ್ತಿ ಯಲ್ಲಿದ್ದರೂ ಸಹ ರಾಜ್ಯದ 14 ಕಾರ್ಯನಿರ್ವಹಿಸಿದ್ದಾರೆ. ಅಷ್ಟೇ ಅಲ್ಲ ಆಂಧ್ರ ಪ್ರದೇಶದಲ್ಲೂ ಕೆಲಸ ಮಾಡಿ ಅಲ್ಲಿಯೂ ತಮ್ಮ ಸಾಮಾಜಿಕ ಜಾಗೃತಿ, ಶೈಕ್ಷಣೀಕ ಕ್ರಾಂತಿ ಮಾಡಿದವರು. ರಾತ್ರಿ ತರಗತಿಗಳನ್ನು ಸ್ವತಂ ಅವರೇ ತೆರೆದು ಮಹಿಳಾ ಶಿಕ್ಷಣದಲ್ಲಿ ಕ್ರಾಂತಿ ಮಾಡಿದವರು. ಕ್ರಿಯಾಶೀಲ ಪ್ರತಿಭೆ ಎರ್ರಿಸ್ವಾಮಿ ಅವರು 28 ಕೃತಿಗಳನ್ನು ರಚಿಸಿದ್ದಾರೆ.
ಅವರ ಸಾಹಿತ್ಯ ಕ್ಷೇತ್ರದ ಸಾಧನೆಗೆ ಗೋರುರು ಸಾಹಿತ್ಯ ಪ್ರಶಸ್ತಿ, ರಾಜ್ಯಮಟ್ಟದ ವಾಲ್ಮೀಕಿ ಪ್ರಶಸ್ತಿ, ಜೆಎಂ ಇಮಾಂ ಸ್ಮಾರಕ ಪ್ರಶಸ್ತಿ, ಸಿದ್ದಯ್ಯ ಪುರಾಣಿಕ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಹುಡುಕಿಕೊಂಡು ಬಂದಿವೆ. ತಾಲೂಕು ಶರಣ ಸಾಹಿತ್ಯ ಪರಿಷತ್‍ನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಅವರು ನಿಸ್ವಾರ್ಥವಾಗಿ ತಮ್ಮನ್ನು ತಾವು ನಾಡು, ನುಡಿ, ಸಾಹಿತ್ಯ, ಸಂಸ್ಕøತಿಯಲ್ಲಿ ತೊಗಡಿಸಿಕೊಂಡಿದ್ದಾರೆ.
ಸಾಹಿತ್ಯ ವಲಯದ ಎಲ್ಲ ಆಸ್ತಕರು ಕಸಾಪ ಕಾರ್ಯಕಾರಿ ಸಮಿತಿ ಸೇವೆಯಲ್ಲಿ ಒಮ್ಮತದಿಂದ ತೀರ್ಮಾನ ಮಾಡಿದ್ದೇವೆ. ಈ ಬಾರಿ ರಾಜೋತ್ಸವ ಪ್ರಶಸ್ತಿಯನ್ನು ಬರದ ನಾಡಿನ ಸಾಹಿತ್ಯ ಮಾಣಿಕ್ಯ ಎಂದೇ ಹೆಸರಾಗಿರುವ ಎರ್ರಿಸ್ವಾಮಿ ಅವರಿಗೆ ನೀಡಬೇಕು ಎಂದು ಆಗ್ರಹಿಸಿದರು.
ಸಾಹಿತಿ, ಕಸಾಪ ಗೌರವ ಸಲಹೆಗಾರ ಡಿ.ಸಿ.ಮಲ್ಲಿಕಾರ್ಜುನ್ ಮಾತನಾಡಿ, ರಾಜ್ಯೋತ್ಸವ ಪ್ರಶಸ್ತಿಗೆ ಮೌಲ್ಯ ಬರಬೇಕು ಎಂದರೆ ಅರ್ಹರನ್ನು ಆಯ್ಕೆ ಮಾಡಬೇಕು. ಆಗ ಮಾತ್ರ ಪ್ರಶಸ್ತಿಗೂ ಗೌರವ ಮತ್ತು ತೆಗೆದುಕೊಂಡ ವ್ಯಕ್ತಿಗೂ ಗೌರವ ಸಲ್ಲುತ್ತದೆ.
ಬರದ ನಾಡಾದ ಜಗಳೂರಿಗೆ ಸಾಹಿತ್ಯಕ್ಕೆ ಬರವಿಲ್ಲ ಎಂಬುದನ್ನು ಎನ್‍ಟಿ ಎರ್ರಿಸ್ವಾಮಿ ತೋರಿಸಿಕೊಟ್ಟಿದ್ದಾರೆ. ಸರಳ, ಸಜ್ಜನ ವ್ಯಕ್ತಿ ಅಷ್ಟೇ ಅಲ್ಲ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅತ್ಯಂತ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದರು.ಒಂದೇ ದಿನ ಹತ್ತು ಸಾವಿರ ಮಹಿಳಾ ಸಂಘಗಳಿಗೆ 40 ಕೋಟಿ ಸಾಲ ಕೊಡುವಂತ ದಿಟ್ಟ ನಿರ್ಧಾರ ಕೈಗೊಂಡ ವ್ಯಕ್ತಿ ಎಂದರೆ ಅದು ಎರ್ರಿಸ್ವಾಮಿ. ಅವರ ಸೇವೆ ನಾಡು, ನುಡಿಗೆ ಅಗಣಿತವಾಗಿದೆ. ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ ಜಿಲ್ಲೆಯಾದ್ಯಂತ ಅವರ ಹೆಸರು ಚಿರಪರಿಚಿತ ವ್ಯಕ್ತಿ.
ಅವರಿಗೆ ಪ್ರಶಸ್ತಿ ನೀಡುತ್ತೇವೆ ಎಂದರೆ ಯಾರಿಂದಲೂ ವಿರೋಧವಿಲ್ಲ ಹೀಗಾಗಿ ಅವರನ್ನೇ ಈ ಬಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಉಪನ್ಯಾಸಕ ನಾಗಲಿಂಗಪ್ಪ, ವಕೀಲ ಹಾಗೂ ಭದ್ರಾ ಮೇಲ್ದಂಡೆ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಆರ್.ಓಬಳೇಶ್, ಕಸಾಪ ಸಲಹೆಗಾರರು, ನಿವೃತ್ತ ಶಿಕ್ಷಕ ಕೆ.ಕೃಷ್ಣಮೂರ್ತಿ, ಕಸಾಪ ಸದಸ್ಯ ಗ್ಯಾಸ್ ಓಬಣ್ಣ, ಕಸಪ ಕಾರ್ಯದರ್ಶಿ ಗೀತಾ ಮಂಜು, ಕಣ್ವಕುಪ್ಪೆ ಲೋಕೇಶ್, ಲಿಂಗಣ್ಣನಹಳ್ಳಿ ಲೋಕೇಶ್ ಸೇರಿದಂತೆ ಅನೇಕರು ಇದ್ದರು.