ಮಾತೃ ಭಾಷೆ ರಕ್ಷಣೆ ನಮ್ಮೆಲ್ಲರ ಹೊಣೆ: ಶಾಸಕ ಎಸ್.ವಿ.ರಾಮಚಂದ್ರ!

Suddivijaya
Suddivijaya November 1, 2022
Updated 2022/11/01 at 12:38 PM

ಸುದ್ದಿವಿಜಯ, ಜಗಳೂರು: ನೆಲ, ಜಲ, ಸಂಪನ್ಮೂಲಗಳ ರಕ್ಷಣೆಯ ಜೊತೆಗೆ ಮಾತೃಭಾಷೆಯಾಗಿರುವ ಕನ್ನಡ ಭಾಷೆಯನ್ನು ರಕ್ಷಣೆ ಮಾಡುವ ಹೊಣೆ ನಮ್ಮೆಲ್ಲರದ್ದಾಗಿದೆ ಎಂದು ಶಾಸಕ ಎಸ್.ವಿ.ರಾಮಚಂದ್ರ ಪ್ರತಿಪಾದಿಸಿದರು.

ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಪಪಂ ಸಹಭಾಗಿತ್ವದಲ್ಲಿ ಸೋಮವಾರ ಪಟ್ಟಣದ ಬಯಲು ರಂಗಮಂದಿರದಲ್ಲಿ 67 ಕನ್ನಡ ರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಚದುರಿ ಹೋಗಿದ್ದ ಮೈಸೂರು ಸಂಸ್ಥಾನವನ್ನು ಅಖಂಡ ಏಕೀಕರಣ ಕರ್ನಾಟಕವನ್ನಾಗಿ ಮಾಡಿದ ಕೀರ್ತಿ ಆಲೂರು ವೆಂಕಟರಾಯರಿಗೆ ಸಲ್ಲುತ್ತದೆ. 1973 ರಲ್ಲಿ ವಿಶಾಲ ಕರ್ನಾಟಕವಾಗಿ ರೂಪುಗೊಂಡ ಮೇಲೆ ಕನ್ನಡ ಭಾಷೆಗೆ ರಾಷ್ಟ್ರೀಯ ಮಟ್ಟದಲ್ಲಿ ತನ್ನದೇ ಆದ ಸ್ಥಾನ ಮಾನ ಸಿಕ್ಕಿತು. ಬಿಜೆಪಿ ಸರಕಾರದ ಬಂದ ಮೇಲೆ ಆಡಳಿತದಲ್ಲಿ ಕನ್ನಡವನ್ನು ಪರಿಣಾಮಕಾರಿಯಾಗಿ ಜಾರಿ ಮಾಡಲಾಯಿತು.

ಜಗಳೂರು ತಾಲೂಕು ಅಭಿವೃದ್ಧಿಗೆ ರಾಜ್ಯ ಸರಕಾರ 3500 ಕೋಟಿಗೂ ಹೆಚ್ಚು ಅನುದಾನ ನೀಡಿದೆ. ಮುಖ್ಯವಾಗಿ 665 ಕೋಟಿ ವೆಚ್ಚದ ತುಂಗಭದ್ರಾ ಏತ ನೀರಾವರಿ ಮೂಲಕ ತಾಲೂಕಿನ 57 ಕೆರೆ ತುಂಬಿಸುವ ಯೋಜನೆ, 1338 ಕೋಟಿ ವೆಚ್ಚದ ಅಪರ್ ಭದ್ರಾ ಯೋಜನೆ, 50 ಕೋಟಿ ವೆಚ್ಚದಲ್ಲಿ ಜಲ ಜೀವನ್ ಮಿಷನ್ ಯೋಜನೆ, 448 ಕೋಟಿ ವೆಚ್ಚದ ಪ್ರತಿ ಹಳ್ಳಿಗೂ ಮನೆ ಮನೆಗೆ ನೀರು ಪೂರೈಸುವ ಯೋಜನೆ, 218 ಕೋಟಿ ವೆಚ್ಚದಲ್ಲಿ ರಸ್ತೆಗಳ ಅಭಿವೃದ್ಧಿ ಸೇರಿದಂತೆ ವಿವಿಧ ಯೋಜನೆಗಳು ನಮ್ಮ ಸರಕಾದ ಮಹಾತ್ವಾಕಾಂಕ್ಷಿ ಯೋಜನೆಗಳಾಗಿವೆ. ನಾನು ಕೊಟ್ಟ ಮಾತಿನಂತೆ ನಡೆದು ಕೊಂಡಿದ್ದೇನೆ ಎಂದು ಹೇಳಿದರು. ಇದೇ ಡಿಸೆಂಬರ್ 10 ರಿಂದ ರಾಜ್ಯ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಆಯೋಜನೆ ಮಾಡಲಾಗುವುದು. ರಾಜ್ಯದ 40 ತಂಡಗಳು ಕಬಡ್ಡಿ ಟೂರ್ನಿಯಲ್ಲಿ ಭಾಗವಹಿಸಲಿವೆ ಎಂದರು.

ತಹಶೀಲ್ದಾರ್ ಜಿ.ಸಂತೋಷಕ್‍ಕುಮಾರ್ ಮಾತನಾಡಿ, ಅತ್ಯಂತ ಪ್ರಾಚೀನ ಇತಿಹಾಸ ವಿರುವ ಈ ಕನ್ನಡಕ್ಕೆ 8 ಜ್ಞಾನ ಪೀಠ ಪ್ರಶಸ್ತಿಗಳು ಬಂದಿವೆ. ಅದಕ್ಕೆ ಕಾರಣ ಎಲ್ಲ ಮಹಾನ್ ವ್ಯಕ್ತಿಗಳ ಬದ್ಧತೆ. ಪರಿಸರ ಸಂರಕ್ಷಣೆ, ನೆಲ-ಜಲ ಸಂರಕ್ಷಣೆ ನಮ್ಮಲ್ಲರ ಹೊಣೆ ಎಂದರು.
ನಿವೃತ್ತ ಉಪನ್ಯಾಸಕ ಪ್ರೊ.ಸುಭಾಷ್ ಕರ್ನಾಟಕ ಏಕೀಕರಣ ನಡೆದು ಬಂದ ದಾರಿಯ ಬಗ್ಗೆ ಸಮಗ್ರವಾಗಿ ಉಪನ್ಯಾಸ ನೀಡಿದರು.

ಮಕ್ಕಳಿಂದ ಸಾಂಸ್ಕøತಿಕ ಕಲರವ:
ಸಂತೆಪೇಟೆ ಶಾಲೆ, ಜೆಎಂ ಇಮಾಂ ಶಾಲೆ ಬೇಡರ ಕಣ್ಣಪ್ಪ ಶಾಲೆ, ಬಾಲಭಾರತಿ ಶಾಲೆ, ಆರ್‍ವಿಎಸ್ ಶಾಲೆ, ಸರಕಾರಿ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲಾ ಮಕ್ಕಳು ಕನ್ನಡ ಭಾವಗೀತೆ, ಸಿನಮಾ ಗೀತೆಗಳಿಗೆ ನೃತ್ಯ ಮಾಡಿದರು ಜೂನಿಯರ್ ವಿಷ್ಣುವರ್ಧನ್ ಎಂದೇ ಖ್ಯಾತಿಯಾಗಿರುವ ಬಡೇಖಾನ್ ಕನ್ನಡವೇ ನಮ್ಮಮ್ಮ ಗೀತೆಗೆ ನೃತ್ಯ ಮಾಡಿದರು.

ಸಾಧಕರಿಗೆ ಪ್ರಶಸ್ತಿ: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 25ಕ್ಕೂ ಹೆಚ್ಚು ಸಾಧಕರಿಗೆ ತಾಲೂಕು ಆಡಳಿತ ಪ್ರಶಸ್ತಿ ನೀಡಿ ಗೌರವಿಸಿತು. ಸಾಹಿತ್ಯ ವಿಭಾಗದಲ್ಲಿ ರವಿಕುಮಾರ್, ಡಾ.ಪ್ರಭಾಕರ್ ಲಕ್ಕೋಳ್, ರಾಜಣ್ಣ ನಿಬಗೂರು, ಗೀತಾ ಮಂಜು, ಸಂಗೀತ ವಿಭಾಗದಲ್ಲಿ ಅಶೋಕ್ ತುರುಮುರಿ, ಕ್ರೀಡೆಯಲ್ಲಿ ಹಾಲೇಶ್, ಸಂಘ ಸಂಸ್ಥೆಯಲ್ಲಿ ಮಹಾಂತೇಶ, ಸಾಮಾಜಿಕ ಸೇವೆಯಲ್ಲಿ ಕೆ.ಕೃಷ್ಣಮೂರ್ತಿ ಕಲ್ಲೇದೇವರಪುರ, ವಿಜ್ಞಾನ ತಂತ್ರಜ್ಞಾನ ಮಂಜುನಾಥ್ ಸಾಹುಕಾರ್,

ಸಿನಿಮಾ ದುರ್ಗಸಿಂಹ, ಬಡೇಖಾನ್, ನಾಡು-ನುಡಿ-ಸಂಸ್ಕøತಿ, ಗಿಡ್ಡನಕಟ್ಟೆ ತಿಪ್ಪೇಸ್ವಾಮಿ, ಬಯಲಾಟ ಆಕನೂರು ಪೋತರಾಜ, ಪತ್ರಕರ್ತರ ವಿಭಾಗದಲ್ಲಿ ಅಣಬೂರು ಮಠದ ಕೊಟ್ರೇಶ್, ಲೋಕೇಶ್ ಎಂ.ಐಹೊಳೆ, ಕರಿಯಮ್ಮ ಜೌಡಪ್ಪ, ಧನ್ಯಕುಮಾರ್, ಎಚ್.ಬಾಬು, ಪೌರಕಾರ್ಮಿಕ ತಿಪ್ಪೇಸ್ವಾಮಿ, ಯಕ್ಷಗಾನ ನಿಂಗಪ್ಪ ತೋರಣಗಟ್ಟೆ, ಜಾನಪದ ಬಡಪ್ಪ ತೋರಣಗಟ್ಟೆ, ಶಿಕ್ಷಣ ಆರ್.ಶಶಿರೇಖಾ, ತನುಶ್ರೀ, ಸುಜಾತ, ಡಾ.ಚೇತನ್, ವೈದ್ಯಾಧಿಕಾರಿ ಡಾ.ನೀರಜ್ ಅವರಿಗೆ ತಾಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಆರ್. ಚಂದ್ರಪ್ಪ, ಬಿಇಒ ಉಮಾದೇವಿ, ಪಪಂ ಚೀಫ್ ಆಫೀಸರ್ ಲೋಕ್ಯಾನಾಯ್ಕ, ಪಪಂ ಅಧ್ಯಕ್ಷೆ ಸಿ.ವಿಶಾಲಾಕ್ಷಿ, ಉಪಾಧ್ಯಕ್ಷ ನಿರ್ಮಲಾ ಕುಮಾರಿ, ತಾಪಂ ಇಒ ಕೆ.ವೈ.ಚಂದ್ರಶೇಖರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

 

Share this Article
Leave a comment

Leave a Reply

Your email address will not be published. Required fields are marked *

error: Content is protected !!