ಉತ್ಪಾದನಾ ವೆಚ್ಚ ತಗ್ಗಿಸಲು ಡ್ರೋಣ್ ಬಳಸಿ: KVK ಬೇಸಾಯ ತಜ್ಞ ಡಾ.ಬಿ.ಒ.ಮಲ್ಲಿಕಾರ್ಜುನ ರೈತರಿಗೆ ಸಲಹೆ

Suddivijaya
Suddivijaya January 19, 2024
Updated 2024/01/19 at 2:46 PM

ಸುದ್ದಿವಿಜಯ, ಜಗಳೂರು: ಇತ್ತೀಚಿನ ದಿನಗಳಲ್ಲಿ ಕೃಷಿ ಕ್ಷೇತ್ರದಲ್ಲಿ ಉತ್ಪಾದನಾ ವೆಚ್ಚ ಹೆಚ್ಚಾಗುತ್ತಿದ್ದು ಉತ್ಪಾದನಾ ವೆಚ್ಚ ತಗ್ಗಿಸಲು ಡ್ರೋಣ್ ಮೂಲಕ ಬೆಳೆಗಳಿಗೆ ಔಷಧೋಪಾಚಾರ ಮಾಡಿ ಎಂದು ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ತಜ್ಞ ಡಾ.ಬಿ.ಒ.ಮಲ್ಲಿಕಾರ್ಜುನ ರೈತರಿಗೆ ಸಲಹೆ ನೀಡಿದರು.

ತಾಲೂಕಿನ ಬಿದರಕೆರೆ ತರಳಬಾಳು ಅಮೃತ ರೈತ ಉತ್ಪಾದಕ ಕಂಪನಿ ವ್ಯಾಪ್ತಿಯ ಕಟ್ಟಿಗೆಹಳ್ಳಿ ಗ್ರಾಮದಲ್ಲಿ ಶುಕ್ರವಾರ ದಾವಣಗೆರೆ ಟಿಕೆವಿಕೆ ಮತ್ತು ಎಫ್‍ಪಿಒ ಸಂಯುಕ್ತಾಶ್ರಯದಲ್ಲಿ ಕಡಲೆ ಬೆಳೆಯಲ್ಲಿ ಡ್ರೋಣ್ ಬಳಕೆ ಪ್ರಾತ್ಯಕ್ಷತೆಯನ್ನು ಉದ್ಘಾಟಿಸಿ ಮಾತನಾಡಿದರು.ಜಗಳೂರು ತಾಲೂಕಿನ ಕಟ್ಟಿಗೆಹಳ್ಳಿ ಗ್ರಾಮದಲ್ಲಿ ಕಡಲೆ ಬೆಳೆಯಲ್ಲಿ ಡ್ರೋಣ್ ಪ್ರಾತ್ಯಕ್ಷತೆಯನ್ನು ದಾವಣಗೆರೆ ಕೆವಿಕೆ ಮತ್ತು ಬಿದರಕೆರೆ ಎಫ್‍ಪಿಒ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿತ್ತು.ಜಗಳೂರು ತಾಲೂಕಿನ ಕಟ್ಟಿಗೆಹಳ್ಳಿ ಗ್ರಾಮದಲ್ಲಿ ಕಡಲೆ ಬೆಳೆಯಲ್ಲಿ ಡ್ರೋಣ್ ಪ್ರಾತ್ಯಕ್ಷತೆಯನ್ನು ದಾವಣಗೆರೆ ಕೆವಿಕೆ ಮತ್ತು ಬಿದರಕೆರೆ ಎಫ್‍ಪಿಒ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಇತ್ತೀಚಿನ ದಿನಗಳಲ್ಲಿ ಪ್ರತಿ ಬೆಳೆಗೂ ರೋಗಬಾಧೆ ಜಾಸ್ತಿಯಾಗುತ್ತಿದ್ದು ಕೂಲಿ ಕಾರ್ಮಿಕರ ವೆಚ್ಚ ಹೆಚ್ಚಾಗುತ್ತಿದೆ. ಸಣ್ಣ ರೈತರು ಕೃಷಿಯಲ್ಲಿ ಸಾಕಷ್ಟು ನಷ್ಟ ಅನುಭವಿಸುತ್ತಿದ್ದಾರೆ. ಅಷ್ಟೇ ಅಲ್ಲ ಕಾರ್ಮಿಕರಿಂದ ಔಷಧ ಸಿಂಪಡಿಸುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ.

ಹೀಗಾಗಿ ಡ್ರೋಣ್ ತಾಂತ್ರಿಕತೆ ಮೂಲಕ ಔಷಧ ಸಿಂಪಡಿಸಿದರೆ ರೈತರ ಆರೋಗ್ಯ, ಸಮಯ ಉಳಿತಾಯವಾಗುತ್ತದೆ. ಜೊತೆಗೆ ಮಣ್ಣಿಗೆ ರಾಸಾಯನಿಕ ವಿಷ ಸೇರ್ಪಡೆ ಪ್ರಮಾಣ ಕಡಿಮೆಯಾಗುತ್ತದೆ.

ಅಷ್ಟೇ ಅಲ್ಲ ಡ್ರೋಣ್ ಮೂಲಕ ರಾಸಾಯನಿಕ ಸಿಂಪಡಿಸಿದರೆ ಬೆಳೆಗಳಿಗೆ ನಿಖರವಾಗಿ ಸಿಂಪಡಣೆಯಾಗುತ್ತದೆ. ದೊಡ್ಡ ಹಿಡುವಳಿದಾರರಿಗೆ ಡ್ರೋಣ ಮೂಲಕ ಔಷಧ ಸಿಂಪಡಣೆಯಿಂದ ಆರ್ಥಿಕ ಲಾಭವಾಗುವುದರಲ್ಲಿ ಅನುಮಾನವೇ ಇಲ್ಲ ಎಂದರು.ಕೃಷಿ ಇಲಾಖೆ ಎಡಿಎ ಮಿಥುನ್ ಕಿಮಾವತ್ ಮಾತನಾಡಿ, ವರ್ಷದಿಂದ ವರ್ಷಕ್ಕೆ ಕೃಷಿ ಕ್ಷೇತ್ರದಲ್ಲಿ ಉತ್ಪಾದನೆ ಕುಂಠಿತವಾಗಲು ಕಾರಣ ಅತಿಯಾದ ರೋಗಬಾಧೆಯಾಗಿದೆ. ಪ್ರತಿಯೊಂದು ಬೆಳೆಗೂ ಔಷಧ ಸಿಂಪಡಿಸಿದೇ ಇದ್ದರೆ ಯಾವ ಬೆಳೆಯೂ ಬೆಳೆಯದಂತ ಸ್ಥಿತಿ ನಿರ್ಮಾಣವಾಗಿದ್ದು ರೈತರು ಹೆಚ್ಚು ಆರ್ಥಿಕ ನಷ್ಟ ಅನುಭವಿಸುವುದರ ಜೊತೆಗೆ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ. ಹೀಗಾಗಿ ರೈತರು ತಾಂತ್ರಿಕತೆಯ ಡ್ರೋಣ್ ಬಳಸಿದರೆ ಸಾಕಷ್ಟು ಲಾಭಗಳು ಇವೆ ಎಂದರು.

ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ತೋಟಯ್ಯ ಮಾತನಾಡಿ, ಜಗಳೂರು ಮಣ್ಣಿನ ಗುಣ ಉತ್ಕøಷ್ಟವಾಗಿದೆ. ಮಳೆ ಕಡಿಮೆಯಾಗಿದ್ದರೂ ಗುಣಮಟ್ಟದ ರೈತರು ಗುಣಮಟ್ಟದ ಕಡಲೆ ಬೆಳೆ ಬೆಳೆದಿದ್ದಾರೆ. 57 ಕೆರೆ ನೀರು ತುಂಬುವ ಯೋಜನೆ ಪೂರ್ಣಗೊಂಡರೆ ತೋಟಗಾರಿಕಾ ಬೆಳೆಗಳಾದ ಬಾಳೆ, ಅಡಕೆ, ಪಪ್ಪಾಯ, ದಾಳಿಂಬೆ ಬೆಳೆಗಳತ್ತ ವಾಲುತ್ತಾರೆ ಹೀಗಾಗಿ ಡ್ರೋಣ್ ಬಳಕೆ ಅನಿವಾರ್ಯ ಎಂದರು.ಕಟ್ಟಿಗೆಹಳ್ಳಿ ಗ್ರಾಮದಲ್ಲಿ ಒಂದೇ ದಿನ 90 ಎಕರೆ ಕಡಲೆ ಬೆಳೆಗೆ ಉಚಿತವಾಗಿ ಚಿಕ್ಪಿ ಮ್ಯಾಜಿಕ್ ಮತ್ತು ನೀಮ್ ಆಯಿಲ್ ಔಷಧವನ್ನು ಸಿಂಡಿಸಲಾಯಿತು.

ಕಾರ್ಯಕ್ರಮದಲ್ಲಿ ಬಿದರಕೆರೆ ಎಫ್‍ಪಿಒ ಅಧ್ಯಕ್ಷ ಮೆದಗಿನಕೆರೆ ಮಂಜುನಾಥ್, ನಿರ್ದೇಶಕರಾದ ರೇವಣಸಿದ್ದಪ್ಪ, ಬಿಸ್ತುವಳ್ಳಿ ನಾಗರಾಜ್, ಸಿಇಒ ಸುರೇಶ್, ಡಿಇಒ ಆದರ್ಶ, ಕೆವಿಕೆಯ ಶಿವಕುಮಾರ್, ರೈತರಾದ ನಾಗರಾಜ್, ರವಿಕುಮಾರ್, ಬಸವಪ್ರಭು ಸೇರಿದಂತೆ ಅನೇಕರು ಇದ್ದರು.

‘ಡ್ರೋಣಾ’ಚಾರ್ಯನ ಕುರಿತು ರೈತರ ಪ್ರತಿಕ್ರಿಯೆ

ರೈತರು ಪ್ರತಿ ಬೆಳೆಗೂ ಔಷಧ ಸಿಂಪಡಿಸಿ ರಾಸಾಯನಿಕಗಳು ದೇಹಕ್ಕೆ ಸೇರುವ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಆರೋಗ್ಯ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿದ್ದಾರೆ.

ಡ್ರೋಣ್ ಬಳಕೆ ಪ್ರಾತ್ಯಕ್ಷತೆಯಿಂದ ನಮಗೆ ಸಾಕಷ್ಟು ಲಾಭ ಇದೆ ಎಂದು ಅರ್ಥವಾಯಿತು. ಮುಂದಿನ ದಿನಗಳಲ್ಲಿ ರಾಸಾಯನಿಕ ಸಿಂಪಡಣೆಗೆ ಡ್ರೋಣ್ ಬಳಸಲು ಉತ್ಸುಕರಾಗಿದ್ದೇವೆ ಎಂದು ಕೃಷಿಕರಾದ ಎನ್.ಬಿ.ಮಂಜುನಾಥ್, ಎನ್.ಎಸ್.ಸೋಮನಗೌಡ, ಕರಿಬಸಪ್ಪ, ಸುರೇಶ್, ಕರಿಬಸವನಗೌಡ ಸೇರಿದಂತೆ ಅನೇಕ ಪ್ರಗತಿಪರ ರೈತರು ಪ್ರತಿಕ್ರಿಯೆ ನೀಡಿದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!