ಸುದ್ದಿವಿಜಯ, ಜಗಳೂರು: ತಮಿಳುನಾಡಿಗೆ ಕಾವೇರಿ ನೀರು ಬಿಡುವಂತೆ ನೀರು ನ್ಯಾಯ ಮಂಡಳಿ ಆದೇಶಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಧ್ಯ ಪ್ರವೇಶಿಸುವಂತೆ ಒತ್ತಾಯಿಸಿ ಮಂಗಳವಾರ ಕರ್ನಾಟಕ ರಕ್ಷಣ ವೇದಿಕೆ (ಟಿ.ಎ ನಾರಾಯಣಗೌಡ ಬಣ) ಕಾರ್ಯಕರ್ತರು ಪ್ರಧಾನಿಗೆ ರಕ್ತದಲ್ಲಿ ಪತ್ರ ಬರೆದು ಅಂಚೆ ಮೂಲಕ ರವಾನಿಸಿ ಮಂಗಳವಾರ ಚಳುವಳಿ ನಡೆಸಿದರು.
ಸರಕಾರಿ ಆಸ್ಪತ್ರೆಯಲ್ಲಿ ರಕ್ತ ತೆಗೆದು ಪ್ರವಾಸಿ ಮಂದಿರದಲ್ಲಿ ರಕ್ತದಲ್ಲಿ ಪತ್ರ ಬರೆದು ಅಂಚೆ ಕಚೇರಿಯಲ್ಲಿ ಪೋಸ್ಟ್ ಮಾಡುವ ಮೂಲಕ ಪ್ರಧಾನಿಗೆ ಪತ್ರ ಕಳಿಸಿದರು. ಕರವೇ ತಾಲೂಕಾಧ್ಯಕ್ಷ ವೈ.ಮಹಾಂತೇಶ್ ಮಾತನಾಡಿ, ಕಾವೇರಿ ವಿಷಯದಲ್ಲಿ ಪ್ರಧಾನಿ ಮಧ್ಯಪ್ರವೇಶಿಸಿ ನಾಲ್ಕು ರಾಜ್ಯಗಳ ಮಂತ್ರಿಗಳನ್ನ ಒಗ್ಗೂಡಿಸಿ ಅವರ ಜತೆ ಮಾತುಕತೆ ನಡೆಸಿ ಕಾವೇರಿ ವಿವಾದವನ್ನು ಬಗೆಹರಿಸಬೇಕು ಎಂದು ಆಗ್ರಹಿಸಿದರು.ರಾಜ್ಯದಲ್ಲಿ ಕಾವೇರಿ ಸಮಸ್ಯೆ ವ್ಯಾಪಕವಾಗಿ ಹರಡಿಕೊಂಡಿದೆ. ಪ್ರತಿಭಟನೆ, ಧರಣಿ, ಕರ್ನಾಟಕ ಬಂದ್ ಹೀಗೆ ವಿವಿಧ ರೀತಿಯಲ್ಲಿ ಕನ್ನಡಿಗರು ವಿರೋಧಿಸುತ್ತಿದ್ದಾರೆ. ಆದರೆ ಕೇಂದ್ರ ಸರಕಾರ ಈ ಬಗ್ಗೆ ಒಂದು ಪ್ರತಿಕ್ರಿಯೆ ನೀಡದೇ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದ್ದಾರೆ. ಚುನಾವಣೆಯಲ್ಲಿ ಹತ್ತಾರು ಬಾರಿ ಪ್ರವಾಸಿ ಮಾಡಿದ ಪ್ರಧಾನಿ ಈಗ ಏಕೆ ರಾಜ್ಯಕ್ಕೆ ಭೇಟಿ ನೀಡುತ್ತಿಲ್ಲ. ಇದರಲ್ಲಿ ರಾಜಕಾರಣ ಮಾಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಕ್ತದಲ್ಲಿ ಪತ್ರ ಬರೆಯುವ ಚಳುವಳಿ ಒಂದು ವಾರದವರೆಗೂ ನಡೆಯಲಿದ್ದು ಪ್ರತಿಯೊಬ್ಬರು ಸಹಕರಿಸಬೇಕೆಂದು ಕೋರಿದರು. ಈ ಸಂದರ್ಭದಲ್ಲಿ ಮಹಿಳಾ ಅಧ್ಯಕ್ಷ ರೇಖಾ ಶಂಭುಲಿಂಗಪ್ಪ, ಕಾರ್ಯದರ್ಶಿ ಮಂಜುಳ ಮಂಜುನಾಥ್, ಚಂಪಾವತಿ, ಉಪಾಧ್ಯಕ್ಷ ಅಫೀಜ್, ಗೌರವಾಧ್ಯಕ್ಷ, ಸುರೇಶ್, ನವೀನ್,ಗೊಲ್ಲರಹಟ್ಟಿ ತಿಪ್ಪೇಶ್ ಸೇರಿದಂತೆ ಮತ್ತಿತರರಿದ್ದರು.