ಸುದ್ದಿವಿಜಯ,ಜಗಳೂರು: ತಾಲೂಕಿನ ಕೆಚ್ಚೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಕಿಲಾಕಣ್ವಕುಪ್ಪೆ ಲಕ್ಷಮ್ಮ ಮಾರಪ್ಪ ಹಾಗೂ ಉಪಾಧ್ಯಕ್ಷೆ ಚಿಕ್ಕಮ್ಮನಹಟ್ಟಿ ಸುಧಾಮಣಿ ಕಾಟಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 20 ಮಂದಿ ಸದಸ್ಯರಿದ್ದು, ಶನಿವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ 11ಮಂದಿ ಸದಸ್ಯರ ಹಾಜರಿದ್ದರೆ, 9 ಮಂದಿ ಗೈರಾಗಿದ್ದರು.
ಬೆಳಗ್ಗೆ 11 ಗಂಟೆಯಿಂದ ಆರಂಭವಾದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಲಕ್ಷ್ಮಮ್ಮ, ಉಪಾಧ್ಯಕ್ಷ ಸ್ಥಾನಕ್ಕೆ ಚಿಕ್ಕಮ್ಮನಹಟ್ಟಿ ಸುಧಾಮಣಿ ಇಬ್ಬರು ನಾಮ ಪತ್ರಗಳನ್ನು ಸಲ್ಲಿಸಿದ್ದರು.
ಬೇರೆ ಯಾವ ಸದಸ್ಯರು ನಾಮ ಪತ್ರ ಸಲ್ಲಿಸುವ ಪ್ರಯತ್ನ ಮಾಡದ ಹಿನ್ನೆಲೆ ನಿಯಮಾನುಸಾರ ಚುನಾವಣಾಧಿಕಾರಿ ಮೀನಗಾರಿಕೆ ಇಲಾಖಾಧಿಕಾರಿ ಮಂಜುನಾಥ್ ಅವಿರೋಧ ಆಯ್ಕೆಯನ್ನು ಘೋಷಣೆ ಮಾಡಿದರು.
ಅಧ್ಯಕ್ಷ- ಉಪಾಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆ ಪಂಚಾಯಿತಿ ಹೊರಗಡೆ ಜಮಾಯಿಸಿದ್ದ ಮುಖಂಡರು, ಕಾರ್ಯಕರ್ತರು, ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಪಿಡಿಒ ನಂದಿಲಿಂಗೇಶ್ವರ, ಸದಸ್ಯರಾದ ಡಿ.ಬಸಪ್ಪ, ಸಣ್ಣಓಬಯ್ಯ,ಓಬಳೇಶ್, ಯೋಗಾನಂದ, ಹನುಮಂತಮ್ಮ, ಸುಷ್ಮಾಸ್ವರಾಜ್, ಬೊಮ್ಮಕ್ಕ,
ನಾಗಮ್ಮ, ಸುಲೋಚನಮ್ಮ, ಮುಖಂಡರಾದ ಗಾದ್ರಪ್ಪ, ಬಂಗಾರಪ್ಪ, ಮಲ್ಲಿಕಾರ್ಜುನ, ಪಿ.ಲೋಕೇಶ್. ಚೌಡಪ್ಪ, ಮಾರಪ್ಪ, ಮೂಗಣ್ಣ, ಐನಳ್ಳಿ ನಾಗರಾಜ್, ಹನುಮಂತಪ್ಪ, ಕಾಟಪ್ಪ, ಸಿದ್ದೇಶ್ ಸೆರಿದಂತೆ ಮತ್ತಿತರರಿದ್ದರು.
ಕೆಚ್ಚೇನಹಳ್ಳಿ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಅವಿರೋಧ ಆಯ್ಕೆ ನಡೆಯಿತ