ಜಗಳೂರು: ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸ-ಶಾಸಕ ಎಸ್.ವಿ.ರಾಮಚಂದ್ರ!

Suddivijaya
Suddivijaya March 6, 2023
Updated 2023/03/06 at 12:42 PM

ಸುದ್ದಿವಿಜಯ, ಜಗಳೂರು: ಕಳೆದ ಮೂರು ವರ್ಷಗಳಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಜಿಲ್ಲೆಯಲ್ಲಿಯೇ ತಾಲೂಕು ಪ್ರಥಮ ಸ್ಥಾನದಲ್ಲಿದ್ದು ಈ ಬಾರಿಯ ಪರೀಕ್ಷೆಯಲ್ಲಿಯೂ ಸಹ ಪ್ರಥಮ ಸ್ಥಾನಗಳಿಸಲು ಮಕ್ಕಳು ಶ್ರಮವಹಿಸಿ ಓದಬೇಕು ಎಂದು ಶಾಸಕ ಎಸ್.ವಿ.ರಾಮಚಂದ್ರ ಮಕ್ಕಳಿಗೆ ಹುರಿದುಂಬಿಸಿದರು.

ತಾಲೂಕಿನ ಉದ್ದಗಟ್ಟ ಗ್ರಾಮದಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಸೋಮವಾರ ಅಟಲ್ ಟಿಂಕಗಿಂಗ್ ಲ್ಯಾಬ್ ಉದ್ಘಾಟಿಸಿದ ನಂತರ ‘ವಿಜ್ಞಾನ ಮೆರಗು ಪ್ರತಿಭೆಗಳ ಮಿನುಗು’ ಕಾರ್ಯಕ್ರಮ ಹಾಗೂ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಉದ್ದಗಟ್ಟ ಗ್ರಾಮದಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಸೋಮವಾರ ಅಟಲ್ ಟಿಂಕಗಿಂಗ್ ಲ್ಯಾಬ್ ಉದ್ಘಾಟಿಸಿದ
ಉದ್ದಗಟ್ಟ ಗ್ರಾಮದಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಸೋಮವಾರ ಅಟಲ್ ಟಿಂಕಗಿಂಗ್ ಲ್ಯಾಬ್ ಉದ್ಘಾಟಿಸಿದ ಶಾಸಕ ಎಸ್.ವಿ.ರಾಮಚಂದ್ರ!

ಒಂದು ಶಾಲೆ ಯಶಸ್ವಿಯಾಗಬೇಕಾದರೆ ಅದಕ್ಕೆ ಶಿಕ್ಷಕರ ಜವಾಬ್ದಾರಿ ಮತ್ತು ಪೋಷಕರ ಪ್ರೋತ್ಸಾಹ ಹೆಚ್ಚಿರುತ್ತದೆ. ಪ್ರಾಂಶುಪಾಲ ಕೆ.ಎಂ.ಕಲ್ಲೇಶ್ ಮತ್ತು ಎಲ್ಲ ಶಿಕ್ಷಕರು ಹೆಚ್ಚು ಶ್ರಮ ವಹಿಸಿತ್ತಿದ್ದು ಕಳೆದ ಬಾರಿ ಹತ್ತನೇ ತರಗತಿ ಫಲಿತಾಂಶದಲ್ಲಿ ಈ ಶಾಲೆ ತಾಲೂಕಿನಲ್ಲೇ ಹೆಚ್ಚು ಅಂಕಗಳಿಸುವಂತೆ ಮಾಡಿದ್ದಾರೆ.

ವಸತಿ ಶಾಲೆಗಳ ಮಕ್ಕಳಿಗೆ ಪಿಯುಸಿ ವರೆಗೆ ಓದುವ ಅಕವಾಶ ಕಲ್ಪಿಸಬೇಕು ಎಂದು ಸರಕಾರಕ್ಕೆ ಮನವಿ ಮಾಡಿದ್ದೇನೆ. ಕ್ರೀಡಾ ವಿಭಾಗದಲ್ಲಿ ಜಿಲ್ಲೆಯಲ್ಲೇ ಹೆಚ್ಚು ಪ್ರಶಸ್ತಿ ತಂದು ಕೊಟ್ಟ ಕೀರ್ತಿ ಉದ್ದಗಟ್ಟ ಶಾಲೆಗೆ ಸಲ್ಲುತ್ತದೆ ಎಂದರು.

 : ಜಗಳೂರು ತಾಲೂಕಿನ ಉದ್ದಗಟ್ಟ ಗ್ರಾಮದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ 'ವಿಜ್ಞಾನ ಮೆರಗು ಪ್ರತಿಭೆಗಳ ಮಿನುಗು' ಕಾರ್ಯಕ್ರಮ ಹಾಗೂ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಲಾಯಿತು.
 : ಜಗಳೂರು ತಾಲೂಕಿನ ಉದ್ದಗಟ್ಟ ಗ್ರಾಮದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ‘ವಿಜ್ಞಾನ ಮೆರಗು ಪ್ರತಿಭೆಗಳ ಮಿನುಗು’ ಕಾರ್ಯಕ್ರಮ ಹಾಗೂ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಲಾಯಿತು.

ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಕೆ.ಮಂಜಾನಾಯ್ಕ ಮಾತನಾಡಿ, ವಸತಿ ಶಾಲೆಗಳಲ್ಲಿ ಮಕ್ಕಳ ಅಭ್ಯುದಯಕ್ಕೆ ಸರಕಾರ ಸಾಕಷ್ಟು ನೆರವು ನೀಡುತ್ತಿದ್ದು ಸದುಪಯೋಗ ಪಡಿಸಿಕೊಂಡು ಭವಿಷ್ಯ ರೂಪಿಸಿಕೊಳ್ಳಿ ಎಂದರು.

ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ ಮಾತನಾಡಿ, ತಾಲೂಕಿನಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಶಾಲೆಗಳಲ್ಲಿ ವಸತಿ ಶಾಲೆಗಳು ಕ್ರಿಯಾಶೀಲವಾಗಿವೆ. ಸ್ವಚ್ಛತೆ, ಶಿಕ್ಷಣ ನೀಡುತ್ತಿದ್ದು ಮಕ್ಕಳಿಗೆ ಮನೆಯಂತಹ ವಾತಾವರಣ ಇಲ್ಲಿದೆ ಎಂದರು.

ಪ್ರಾಂಶುಪಾಲ ಕೆ.ಎಂ.ಕಲ್ಲೇಶ್ ಮಾತನಾಡಿ, ಉದ್ದಗಟ್ಟ ಶಾಲೆಗೆ ಸರಕಾರ ಸುಸಜ್ಜಿತ ಕ್ರೀಡಾ ಉಪಕರಣಗಳಿಗೆ ಐದು ಕೋಟಿ ರೂ ಅನುದಾನ ಮಂಜೂರು ಆಗಿದ್ದು. ರಾಜ್ಯದಲ್ಲೇ ಈ ಶಾಲೆ 2ನೇಯದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಗುಣಾತ್ಮಕ ಫಲಿತಾಂಶ ನೀಡುತ್ತಿದೆ. ಸಮರ್ಪಣಾ ಮನೋಭಾವದಿಂದ ಎಲ್ಲ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು. ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು.

ಕಾರ್ಯಕ್ರಮದಲ್ಲಿ ಸರಕಾರಿ ನೌಕರರ ತಾಲೂಕು ಅಧ್ಯಕ್ಷ ಬಿ.ಆರ್.ಚಂದ್ರಪ್ಪ, ಆರ್‍ಎಸ್‍ಇಎ ಜಿಲ್ಲಾಧ್ಯಕ್ಷ ಎನ್.ಬಿ.ರೇವಣಸಿದ್ದಪ್ಪ. ಆರ್‍ಟಿಐ ಸಂಪನ್ಮೂಲ ವ್ಯಕ್ತಿ ಎ.ಎಂ.ಪಿ.ವಾಗೀಶ್, ಸಮಾಜಿಕ ಚಿಂತಕ ಅರವಿಂದನ್, ಬಿಜೆಪಿ ಮುಖಂಡ ಮಾರುತಿ, ಬಿದರಕೆರೆ ವಸತಿ ಶಾಲೆ ಪ್ರಾಂಶುಪಾಲ ಅಮರೇಶ್, ಡಾ.ಟಿ.ಬಸವರಾಜ್, ಮೆದಗಿನಕೆರೆ ವಸತಿ ಪ್ರಾಂಶುಪಾಲ ಬಸವರಾಜ್, ಗ್ರಾಪಂ ಉಪಾಧ್ಯಕ್ಷರಾದ ಕವಿತಾ ಸೇರಿದಂತೆ ಅನೇಕರು ಇದ್ದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!