ಸುದ್ದಿವಿಜಯ, ಜಗಳೂರು: ಟಿಕೆಟ್ ಸಿಗಲಿಲ್ಲ ಎಂದು ಕಾಂಗ್ರೆಸ್‍ನ ನಿಷ್ಠಾವಂತ ನಾಯಕ ಕೆ.ಪಿ.ಪಾಲಯ್ಯ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕೊಂಡಾಡಿದರು.
ಕಾಂಗ್ರೆಸ್ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆತ್ಮೀಯರಾಗಿರುವ ರಾಜ್ಯ ಎಸ್‍ಟಿ ಘಟಕದ ಅಧ್ಯಕ್ಷ ಕೆ.ಪಿ.ಪಾಲಯ್ಯ ಅವರು ಟಿಕೆಟ್ ಕೇಳಿದ್ದರು. ವರಿಷ್ಠರ ತೀರ್ಮಾನದಂತೆ ನಾವು ದೇವೇಂದ್ರಪ್ಪ ಅವರಿಗೆ ನೀಡಲಾಗಿದೆ.
ಹಾಗಂತ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದರಾ. ಯಾರಿಗೆ ಟಿಕೆಟ್ ಕೊಟ್ಟರೂ ಸರಿ ಪಕ್ಷ ಗೆಲುವಿಗೆ ಸಿದ್ದ ಎಂದು ಹೇಳಿದ ಮಾತಿಗೆ ಬದ್ಧರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಧಾನ ಕಾರ್ಯದರ್ಶಿ ಅಸಗೋಡು ಜಯಸಿಂಹ ಮಾತನಾಡಿ, ಸಿದ್ದರಾಮಯ್ಯ ಬರುತ್ತಿದ್ದಂತೆ ಉರಿಬಿಸಿಲು ಕಡಿಮೆಯಾಯಿತು. ಪ್ರಕೃತಿ ಸಹಾಯ ಮಾಡಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬರುವ ವಾತಾವರಣ ದಟ್ಟವಾಗಿದೆ.
ಸಿದ್ದರಾಮಯ್ಯ ಪ್ರಣಾಳಿಕೆಯಲ್ಲಿದ್ದ 165 ಕಾರ್ಯಕ್ರಮ ಕೊಟ್ಟಿಂತೆ ನಡೆದಿದ್ದಾರೆ. ಈ ಬಾರಿ 165 ಸೀಟ್ ಬಂದರೂ ಅಚ್ಚರಿಯಿಲ್ಲ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಲ, ಸಿದ್ದರಾಮಯ್ಯ ಬಲ, ಮಲ್ಲಿಕಾರ್ಜುನ ಖರ್ಗೆ ಎಲ್ಲರ ಬಲದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್ ಅಭ್ಯರ್ಥಿ ಚಿಕ್ಕಮ್ಮನಹಟ್ಟಿ ಬಿ.ದೇವೇಂದ್ರಪ್ಪ ಅವರನ್ನು 30 ಸಾವಿರ ಮತಗಳಿಂದ ಗೆಲ್ಲಿಸಿ. ಇಬ್ಬರಿಗೂ ನೋಡಿದ್ದೇವೆ. ಸಹೃದಯಿ ದೇವೇಂದ್ರಪ್ಪ ಅವರಿಗೆ ಮಾತಹಾಕಿ ಎಂದರು.