ಸುದ್ದಿವಿಜಯ, ಜಗಳೂರು: ಸೋಮವಾರ ರಾತ್ರಿ ಸುರಿದ ಕೃತ್ತಿಕಾ ಮಳೆತಾಲೂಕಿನಾದ್ಯಂತ ಅಬ್ಬರಿಸಿದೆ.
ರಾತ್ರಿ 10.30ರ ವೇಳೆಗೆ ಆರಂಭವಾದ ವರುಣಾರ್ಭಟಕ್ಕೆ ಬರಗಾಲ ಎಂಬ ಪದ ಹಳ್ಳಗಳಲ್ಲಿ ಕೊಚ್ಚಿ ಹೋಗಿ ಕೆರೆ ಸೇರಿದೆ.
ಎರಡು ಗಂಟೆಗಳಿಗೂ ಹೆಚ್ಚು ಕಾಲ ಸುರಿದ ಗುಡುಗು, ಸಿಡಿಲು, ಕೋಲ್ಮಿಂಚು ಸಹಿತ ಧಾರಾಕಾರ ಮಳೆಗೆ ಅನೇಕ ಕೆರೆಗಳಿಗೆ ನೀರು ಬಂದಿದೆ.
ಕಳೆದ 2022 ರಲ್ಲಿ ಅಷ್ಟೊಂದು ಮಳೆ ಬಂದರೂ ಗಡಿ ಮಾಕುಂಟೆ ಕೆರೆ ತುಂಬಿರಲಿಲ್ಲ. ಮೇ.13 ಮತ್ತು ನಿನ್ನೆ ರಾತ್ರಿ ಸುರಿದ ಭಾರಿಮಳೆಗೆ 6 ಅಡಿ ನೀರು ಹರಿದು ಬಂದಿದೆ.
ಬಿದರಕೆರೆ ಭಾಗದಲ್ಲಿ ಸುರಿದ ಭಾರಿಮಳೆಗೆ ಜಮ್ಮಾಪುರ ಕೆರೆಗೆ ನೀರು ಹರಿದು ಬರುತ್ತದೆ. ಅರಿಶಿಣಗುಂಡಿ ಗ್ರಾಮದ ಹಳ್ಳ ತುಂಬಿ ಹರಿಯುತ್ತಿದೆ.
ಇನ್ನು ಜಗಳೂರು ಪಟ್ಟಣದ ಸುತ್ತಮುತ್ತ ಸಾಕಷ್ಟು ಮಳೆ ಯಾಗಿದ್ದು ರೈತರ ಮುಖದಲ್ಲಿ ಮಂದಹಾಸ ಮೂಡಿದೆ.
ಬಿತ್ತನೆಗೆ ಹಣಿಯಾಗುತ್ತಿರುವ ರೈತರು:
ಸಮೃದ್ಧವಾಗಿ ಮಳೆ ಸುರಿದ ಕಾರಣ ರೈತರು ಬಿತ್ತನೆಗೆ ಗೊಬ್ಬರ, ಬೀಜಗಳಿಗೆ ಆಗ್ರೋ ಅಂಗಡಿಗಳಿಗೆ ಭೇಟಿ ನೀಡುತ್ತಿದ್ದಾರೆ. ಪೂರ್ವ ಮುಂಗಾರು ಶುಭಾರಂಭ ಮಾಡಿದ್ದು ಮುಂದೆಯೂ ಉತ್ತಮ ಮಳೆ ಮುನ್ಸೂಚನೆ ಸಿಕ್ಕಿದೆ.
ಇನ್ನೂ ಮೂರು ದಿನ ಮಳೆ:
ದಾವಣಗೆರೆ ಜಿಲ್ಲೆಯಾದ್ಯಂತ ಇನ್ನೂ ಮೂರು ದಿನ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹೀಗಾಗಿ ಜಿಲ್ಲಾಡಳಿತ ಮತ್ತು ಆಯಾ ತಾಲೂಕು ಆಡಳಿತಗಳು ಮಳೆ ಎದುರಿಸಲು ಸಿದ್ಧತೆ ಮಾಡಿಕೊಳ್ಳಲು ಜಿಲ್ಲಾಧಿಕಾರಿಗಳು, ತಾಲೂಕು ದಂಢಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.