ಜಗಳೂರು: ರೈತರಿಗೆ ಕೊಂಚ ನೆಮ್ಮದಿ ತಂದ ‘ಕೃತಿಕಾ’ ಮಳೆ

Suddivijaya
Suddivijaya May 11, 2024
Updated 2024/05/11 at 3:50 AM

ಸುದ್ದಿವಿಜಯ, ಜಗಳೂರು: ತೀವ್ರ ಬರಗಾಲದಿಂದ ಬಸವಳಿದಿದ್ದ ರೈತರಿಗೆ ಶನಿವಾರ ಮಧ್ಯರಾತ್ರಿಯಿಂದ ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಕೃತಿಕಾ ಮಳೆ ರೈತರಿಗೆ ನೆಮ್ಮದಿ ತಂದಿದೆ.

ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಗುಡುಗು ಮತ್ತು ಮಿಂಚು ಸಹಿತ ನಿಧಾನಕ್ಕೆ ಆರಂಭವಾದ ಮಳೆ ರೈತರಲ್ಲಿ ಸಂತಸ ಮೂಡಿಸಿತು.
ಜಗಳೂರು ಪಟ್ಟಣ ಸೇರಿದಂತೆ ಅರಿಶಿಣಗುಂಡಿ, ತೋರಣಗಟ್ಟೆ,ಜಗಳೂರು ತಾಲೂಕಿನ ಲಿಂಗಣ್ಣನಹಳ್ಳಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಮಳೆಯಿಂದ ಗುಂಡಿಯಲ್ಲಿ ನೀರು ನಿಂತಿರುವ ಚಿತ್ರ.ಜಗಳೂರು ತಾಲೂಕಿನ ಲಿಂಗಣ್ಣನಹಳ್ಳಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಮಳೆಯಿಂದ ಗುಂಡಿಯಲ್ಲಿ ನೀರು ನಿಂತಿರುವ ಚಿತ್ರ.

ಕಟ್ಟಿಗೆಹಳ್ಳಿ, ಬಿದರಕೆರೆ, ಜಮ್ಮಾಪುರ, ಜಗಳೂರು ಗೊಲ್ಲರಹಟ್ಟಿ, ದೊಣೆಹಳ್ಳಿ, ರಸ್ತೆಮಾಚಿಕೆರೆ, ಬಿಳಿಚೋಡು, ಹಾಲೇಕಲ್ಲು ಸೇರಿದಂತೆ ಅನೇಕ ಗ್ರಾಮಗಳಲ್ಲಿ ಮಳೆಯಾಗಿದೆ.

ಅಲ್ಲಲ್ಲಿ ತಗ್ಗು ಪ್ರದೇಶ ಮತ್ತು ಗುಂಡಿಗಳಲ್ಲಿ ನೀರು ತುಂಬಿದ್ದು ರೈತರ ಮುಗೊದಲ್ಲಿ ಸಂತೋಷ ತಂದಿದೆ. ಮುಂದಿನ ದಿನಗಳಲ್ಲಿ ಮಳೆ ಬರುತ್ತದೆ ಎನ್ನುವ ಭರವಸೆ ಮೂಡಿದ್ದು ಹವಾಮಾನ ಇಲಾಖೆ ಇನ್ನು ನಾಲ್ಕು ದಿನಗಳ ಕಾಲ ಮಳೆ ಮುನ್ಸೂಚನೆ ನೀಡಿದ್ದರಿಂದ ರೈತರಲ್ಲಿ ಸಂತಸಕ್ಕೆ ಕಾರಣವಾಗಿದೆ.

ಅಡಕೆಗಳಿಗೆ ಆಸರೆ: ತೀವ್ರ ಉಷ್ಣ ಮಾರುತಗಳ ಹೊಡೆತಕ್ಕೆ ನಲುಗಿ ಹೋಗಿದ್ದ ಅಡಕೆ ಗಿಡಗಳು ಕೆಂಪಾಗಿ ಒಣಗುವ ಹಂತಕ್ಕೆ ಬಂದಿದ್ದವು.ಜಗಳೂರು ತಾಲೂಕಿನ ಅರಿಶಿಣಗುಂಡಿ ಗ್ರಾಮದ ಜಮೀನಿನಲ್ಲಿ ತೀವ್ರ ಉಷ್ಣಾಂಶದಿಂದ ಕೆಂಪಾಗಿರುವ ಅಡಕೆ ಮರಗಳಿಗೆ ವರುಣ ಆಗಮನದಿಂದ ಆಸರೆ.ಜಗಳೂರು ತಾಲೂಕಿನ ಅರಿಶಿಣಗುಂಡಿ ಗ್ರಾಮದ ಜಮೀನಿನಲ್ಲಿ ತೀವ್ರ ಉಷ್ಣಾಂಶದಿಂದ ಕೆಂಪಾಗಿರುವ ಅಡಕೆ ಮರಗಳಿಗೆ ವರುಣ ಆಗಮನದಿಂದ ಆಸರೆ.

ಹನಿ ನೀರಾವರಿ, ಅಥವಾ ಟ್ಯಾಂಕರ್ ಮೂಲಕ ನೀರು ಹರಿಸಿದರೂ ಒಣಗುವ ಹಂತಕ್ಕೆ ಬಂದಿದ್ದವು. ಆದರೆ ರಾತ್ರಿ ಸುರಿದ ಮಳೆ ಭೂಮಿ ಹಸನಾಗಿ ನೆನೆದಿದ್ದು ಅಡಿಕೆ ಗಿಡಗಳಿಗೆ ಜೀವಕಳೆ ಬಂದಂತಾಗಿದೆ.

ಇನ್ನೂ ಮೂರು ದಿನ ಮಳೆ ಸಾಧ್ಯತೆ:

ಮಳೆಯಾಗಿರುವ ಕಾರಣ ಬಿಸಿಲಿನ ತಾಪಮಾನ ಏರಿಕೆಯಾಗಿದ್ದು ಇನ್ನೂ ಮೂರು ದಿನಗಳ ಕಾಲ ಮಳೆ ಬೀಳುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Share this Article
Leave a comment

Leave a Reply

Your email address will not be published. Required fields are marked *

error: Content is protected !!