ಜಗಳೂರು: ವಿವಾಹಿತ ಮಹಿಳೆಗೆ ಜೊತೆ ಅಸಭ್ಯವರ್ತನೆ, ಚಾಕು ಇರಿತ!

Suddivijaya
Suddivijaya June 21, 2024
Updated 2024/06/21 at 11:08 AM

ಸುದ್ದಿವಿಜಯ, ಜಗಳೂರು: ಕಾಮುಕನೊಬ್ಬ ತನ್ನ ಕಾಮ ತೃಷೆ ತೀರಿಸಿಕೊಳ್ಳಲು ವಿವಾಹಿತ ಮಹಿಳೆ ಮನೆಗೆ ನುಗ್ಗಿ ಬಲವಂತವಾಗಿ ಅತ್ಯಾಚಾರ ಮಾಡಲು ಯತ್ನಿಸಿ ಮಹಿಳೆ ಕೂಗಾಡಿದ್ದಕ್ಕೆ ಆಕೆಗೆ ಮೂರು ಬಾರಿ ಚಾಕುವಿನಿಂದ ಇರಿದ ಘಟನೆ ಗುರುವಾರ ಸಂಜೆ ಚಿಕ್ಕಮ್ಮನಹಟ್ಟಿಯ ಗೊಲ್ಲರಹಟ್ಟಿಯಲ್ಲಿ ನಡೆದಿದೆ.

ಗುರುವಾರ ಸಂಜೆ 5 ಗಂಟೆಗೆ ಮಹಿಳೆ ಸುಶ್ಮಿತಾ (ಹೆಸರು ಬದಲಿಸಲಾಗಿದೆ) ಮನೆಯಲ್ಲಿದ್ದಾಗ ಏಕಾ ಏಕಿ ಮನೆಗೆ ನುಗ್ಗಿ ಅತ್ಯಾಚಾರ ಮಾಡಲು ಯತ್ನಿಸಿದ್ದಾನೆ.

ಮಹಿಳೆ ಸ್ಪಂದಿಸದಿದ್ದಾಗ ಅವಾಚ್ಯ ಶಬ್ಧಗಳಿಂದ ನಿಂದಿಸಿ ಆಕೆಯ ಬೆನ್ನು, ಕುತ್ತಿಗೆ ಮತ್ತು ಎದೆಯ ಭಾಗಕ್ಕೆ ಮೂರು ಬಾರಿ ಚಾಕುವಿನಿಂದ ಇರಿದು ಮಾರಣಾಂತಿಕ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ.

ತಕ್ಷಣವೇ ಮಹಿಳೆಯ ಕೂಗಾಟ ಕೇಳಿದ ಅಕ್ಕ ಪಕ್ಕದ ಮನೆಯವರು ಮನೆಗೆ ಬಂದು ನೋಡಿದದಾಗ ರಕ್ತದ ಮಡುವಿನಲ್ಲಿ ಬಿದ್ದಿದ್ದು ಕಂಡು ತಕ್ಷಣ ಅವರನ್ನು ಜಗಳೂರು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಆಸ್ಪತ್ರೆಗೆ ಪಿಎಸ್‍ಐ ಎಸ್.ಡಿ.ಸಾಗರ್ ಭೇಟಿ ನೀಡಿ ಮಹಿಳೆಯಿಂದ ಸ್ವಯಂ ಹೇಳಿಕೆ ದೂರು ದಾಖಲಿಸಿಕೊಂಡರು. ಆರೋಪಿ ಕಾಟೇಶ್‍ನನ್ನು ಗುರುವಾರ ರಾತ್ರಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Share this Article
Leave a comment

Leave a Reply

Your email address will not be published. Required fields are marked *

error: Content is protected !!