ಜಗಳೂರು: ಲಿಂಗಣ್ಣನಹಳ್ಳಿ VSSN ಅಧ್ಯಕ್ಷರಾಗಿ ಸುಜಾತಮ್ಮ ಆಯ್ಕೆ

Suddivijaya
Suddivijaya June 13, 2024
Updated 2024/06/13 at 2:26 PM

suddivijayanews13/06/2024

ಸುದ್ದಿವಿಜಯ, ಜಗಳೂರು: ತಾಲೂಕಿನ ಲಿಂಗಣ್ಣನಹಳ್ಳಿ ಪ್ರಾಥಮಿಕ ಕೃಷಿ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಗೋಪಗೊಂಡನಹಳ್ಳಿ ಸುಜಾತಮ್ಮ ಬಸವರಾಜಪ್ಪ ಗುರುವಾರ ಅವಿರೋಧವಾಗಿ ಆಯ್ಕೆಯಾದರು ಎಂದು ಸಹಕಾರ ಇಲಾಖೆ ಅಭಿವೃದ್ಧಿ ಇಲಾಖೆ ಅಧಿಕಾರಿ ಹರೀಶ್ ಘೋಷಣೆ ಮಾಡಿದರು.

ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದು ಅವರೊಬ್ಬರೆ ಕಣದಲ್ಲಿ ಇದ್ದ ಕಾರಣ ಅವರನ್ನ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಅಧಿಕಾರ ಸ್ವೀಕರಿಸಿ ಮಾತನಾಡಿದ ನೂತನ ಅಧ್ಯಕ್ಷೆ ಸುಜಾತಮ್ಮ ಮಾತನಾಡಿ, ನಮ್ಮ ಬ್ಯಾಂಕ್ ಕ್ಷೇತ್ರ ವ್ಯಾಪ್ತಿಯಲ್ಲಿ ರೈತರಿಗೆ ಸಹಕಾರ ಇಲಾಖೆ ಹಾಗು ಕೃಷಿ ಇಲಾಖೆ ಮತ್ತು ಸರಕಾರಿ ಸೌಲಭ್ಯಗಳನ್ನ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಸರ್ವ ನಿರ್ದೇಶಕರು ಸಹಕಾರ ನೀಡಬೇಕು ಎಂದು ಹೇಳಿದರು.

ಪಿ.ಎಲ್.ಡಿ.ಬ್ಯಾಂಕ್ ಮಾಜಿ ಅಧ್ಯಕ್ಷರು ಲಿಂಗಣ್ಣನಹಳ್ಳಿ ಕೆ.ತಿಮ್ಮರಾಯಪ್ಪ ಮಾತನಾಡಿ, ನಮ್ಮ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ರೈತರಿಗೆ ಅನುಕೂಲವಾಗುವಂತ ಯೋಜನೆಗಳನ್ನ ತಂದು ಅಭಿವೃದ್ಧಿ ಮಾಡಲಾಗುವುದು.

ಈ ನಿಟ್ಟಿನಲ್ಲಿ ನಿರ್ದೇಶಕರು ಮತ್ತು ಸಿಬ್ಬಂದ್ದಿಗಳ ಸಹಕಾರ ಮುಖ್ಯವಾಗಿದೆ ರೈತರೆ ಸಂಘದ ಬೆಳವಣಿಗೆಗೆ ಬುನಾದಿಯಾಗಿದ್ದಾರೆ ಅವರ ಹಿತ ಕಾಪಾಡಬೇಕಿದೆ ಎಂದರು.

ಈ ಸಂದರ್ಭದಲ್ಲಿಮುಖಂಡರಾದ ಎಚ್.ಜಿ.ಕೃಷ್ಣ ಮೂರ್ತಿ, ಅರಿಶಿನಗುಂಡಿ ನಾಗರಾಜ್, ಸೇರಿದಂತೆ ಸರ್ವ ಸದಸ್ಯರು ಸಿಇಓ ಭೀಮಶೆಟ್ಟಿ ಸೇರಿದಂತೆ ರೈತರು ಇದ್ದರು.

 

Share this Article
Leave a comment

Leave a Reply

Your email address will not be published. Required fields are marked *

error: Content is protected !!