ಸುದ್ದಿವಿಜಯ, ಜಗಳೂರು: ಅಬಕಾರಿ ಕಾಯ್ದೆಗಳನ್ನು ಉಲ್ಲಂಘಿಸಿ ತಾಲೂಕಿನ ವ್ಯಾಪ್ತಿಯಲ್ಲಿ ಮದ್ಯ ಸಾಗಾಣೆ ಮಾಡಿದವರ ವಿರುದ್ಧ ನಾಲ್ಕು ಕಠಿಣ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.
ಲೈನೆಸ್ಸ್‍ದಾರರ ವಿರುದ್ಧ 5 ಬಿಎಲ್‍ಸಿ ಪ್ರಕರಣಗಳು, ಸಾರ್ವಜನಿಕ ಸ್ಥಳಗಳಾದ ಡಾಬಾ, ಹೋಟೆಲ್‍ಗಳಲ್ಲಿ ಅಕ್ರಮವಾಗಿ ಗ್ರಾಹಕರಿಗೆ ಮದ್ಯ ಸೇವನೆಗೆ ಅವಕಾಶ ಕೊಟ್ಟ ಮಾಲೀಕರ ವಿರುದ್ಧ 8 ಪ್ರಕರಣಗಳನ್ನು ದಾಖಲಿಸಿ ಒಟ್ಟು 49.240 ಲೀ ಅಕ್ರಮ ಮದ್ಯ, 5 ಲೀ. ಬಿಯರ್ ಹಾಗೂ ಮೂರು ದ್ವೀಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವಲಯ ಅಬಕಾರಿ ನಿರೀಕ್ಷಕರಾದ ಜೆ.ಕೆ.ಶೀಲಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಘೋಷಣೆಗೂ ಮುನ್ನ ಮಾ.1 ರಿಂದ ಮಾ.29ರವರೆಗೆ ತಾಲೂಕಿನಲ್ಲಿ ಅಕ್ರಮ ಮದ್ಯ ಸಾಗಾಣೆ ಮೇಲೆ ಅಬಕಾರಿ ಪೊಲೀಸರು ಹದ್ದಿನ ಕಣ್ಣಿಟ್ಟು ಅಕ್ರಮ ಮದ್ಯ ಮಾರಾಟ, ಸಾಗಾಣೆ ಬಗ್ಗೆ ಎಚ್ಚರವಹಿಸಿದ್ದಾರೆ.
ತಾಲೂಕಿನ ವ್ಯಾಪ್ತಿಯಲ್ಲಿ ಅಬಕಾರಿ ಇಲಾಖೆಯ ಪರವಾನಿಗೆ ಪಡೆದು ವಿವಿಧ ಮಾದರಿಯ ಒಟ್ಟು 20 ಸನ್ನದುಗಳು ಮದ್ಯದ ವಹಿವಾಟು ನಡೆಸುತ್ತಿದ್ದು ಲೈನೆನ್ಸ್‍ದಾರರಿಗೆ ತಾಲೂಕು ವ್ಯಾಪ್ತಿಯಲ್ಲಿ ಹಾಗೂ ಅಬಕಾರಿ ಉಪ ಆಯುಕ್ತರ ನೇತೃತ್ವದಲ್ಲಿ ಜಿಲ್ಲಾ ಮಟ್ಟದಲ್ಲಿ ಸಭೆ ನಡೆಸಿ ಷರತ್ತು ವಿಧಿಸಲಾಗಿದೆ.
ಈ ಬಾರಿಯ ಚುನಾವಣೆಯು ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ನಡೆಸುವ ನಿಟ್ಟಿನಲ್ಲಿ ಸಾರ್ವಜನಿಕರು ಸೇರಿದಂತೆ ಎಲ್ಲ ಲೈಸೆನ್ಸ್ ಹೊಂದಿರುವ ಮದ್ಯ ಮಾರಾಟಗಾರರು ಸಹಕಾರ ನೀಡಬೇಕು. ಒಂದು ವೇಳೆ ಅಕ್ರಮ ಮದ್ಯ ಮಾರಾಟ ಸಾಗಾಣೆ ಮಾರಾಟ ಮಾಡುವ ವ್ಯಕ್ತಿಗಳು ಕಂಡು ಬಂದರೆ ಅಬಕಾರಿ ಇಲಾಖೆ ಇಲ್ಲವೇ ಪೊಲೀಸ್ ಠಾಣೆಗೆ ತಿಳಿಸಿ ಎಂದು ಸಾರ್ವಜನಿಕರಿಗೆ ಕೋರಿಕೊಂಡಿದ್ದಾರೆ.