‘ಲೋಕ ಸಮರ’ಕ್ಕೆ ಕಾಂಗ್ರೆಸ್ ಪಕ್ಷದಿಂದ ಕಲ್ಲೇಶ್ ರಾಜ್ ಪಟೇಲ್ ಕಣಕ್ಕೆ ಸಿದ್ಧತೆ

Suddivijaya
Suddivijaya October 26, 2023
Updated 2023/10/26 at 12:37 PM

ಸುದ್ದಿವಿಜಯ,ಜಗಳೂರು: ದಿನದಿಂದ ದಿನಕ್ಕೆ ಲೋಕ ಸಮರದ ಕಾವು ಏರುತ್ತಿದೆ. ಅದರಲ್ಲೂ ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.

ಅದರಲ್ಲೂ ಮಧ್ಯ ಕರ್ನಾಟಕದ ದೇವನಗರಿ ದಾವಣಗೆರೆ ಲೋಕ ಸಮರಕ್ಕೆ ‘ಕೈ’ ಅಭ್ಯರ್ಥಿಗಳ ಟಿಕೆಟ್ ಲಾಬಿ ಹೆಚ್ಚುತ್ತಿದೆ.

ಕೇಂದ್ರದ ಕಾಂಗ್ರೆಸ್ ಹೈ ಕಮಾಂಡ್ ಸಹ ಇಂಡಿಯಾ ಒಕ್ಕೂಟದ ಮೂಲಕ ಹೇಗಾದರೂ ಮಾಡಿ ನಮೋ ಆಡಳಿತ ಕೊನೆಗಾಣಿಸಲು ಶತಪಥ ಹೆಜ್ಜೆಹಾಕುತ್ತಿದ್ದಾರೆ.

ಗ್ಯಾರಂಟಿ ಯೋಜನೆಗಳ ಮೂಲಕ ಕಾಂಗ್ರೆಸ್ ಅಧಿಕಾರದ ಗದ್ದುಗೆ ಹಿಡಿದಿರುವ ಕಾಂಗ್ರೆಸ್ ಪಕ್ಷಕ್ಕೆ ಲೋಕಸಭಾ ಚುನಾವಣೆಯಲ್ಲಿ ರಣಕಹಳೆ ಮೊಳಗಿಸಲು ಸಜ್ಜಾಗಿದೆ. ಪಂಚರಾಜ್ಯ ಚುನಾವಣೆ ಲೋಕ ಸಮರದ ದಿಕ್ಸೂಚಿ ಎಂದೇ ಕರೆಯಲಾಗುತ್ತಿದೆ.

ಕಲ್ಲೇಶ್ ರಾಜ್ ಪಟೇಲ್ ಪ್ರಬಲ ಆಕಾಂಕ್ಷಿ: ದಾವಣಗೆರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಗಳು ಸದ್ದಿಲ್ಲದೇ ಟಿಕೆಟ್‍ಗಾಗಿ ವರಿಷ್ಠರನ್ನು ಭೇಟಿ ಮಾಡುತ್ತಿರುವುದು ಹೊಸದೇನಲ್ಲ. ಮೂಲತಃ ಜಗಳೂರು ಕ್ಷೇತ್ರದವರಾದ ಮೆದಗಿನಕೆರೆ ಗ್ರಾಮದ ಕಲ್ಲೇಶ್ ರಾಜ್ ಪಟೇಲ್ ಕೆಪಿಸಿಸಿ ಸದಸ್ಯರಾಗಿದ್ದು ಪಕ್ಕ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರು.

ಎಲ್‍ಎಲ್‍ಬಿ ಪದವಿಧರಾಗಿರುವ ಅವರು ಭಾರತ್ ಜೋಡೋ ಯಾತ್ರೆಯ ಮೂಲಕ ಕಾಂಗ್ರೆಸ್ ಅಧಿಕಾರಕ್ಕೆ ತರಲು ಹೆಜ್ಜೆ ಹಾಕಿದವರಲ್ಲಿ ಇವರು ಒಬ್ಬರು.

ರಾಹುಲ್ ಗಾಂಧಿಗೂ ಆಪ್ತರು: ಕಳೆದ ವರ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆದ ಭಾರತ್ ಜೋಡೋ ಯಾತ್ರೆಯಲ್ಲಿ ದಾವಣಗೆರೆ ಕ್ಷೇತ್ರದಿಂದ ಇಡೀ ಪಾದ ಯಾತ್ರೆಯಲ್ಲೇ ರಾಹುಲ್ ಗಾಂಧೀ ಜೊತೆ ಕೈ ಜೋಡಿಸಿ ಇಡೀ ದೇಶದಾದ್ಯಂತ ಸಂಚಾರ ಮಾಡಿ ಬಂದಿದ್ದಾರೆ.

ಹೈ ಕೋರ್ಟ್ ವಕೀಲರಾಗಿರುವ ಅವರು ಕಾಂಗ್ರೆಸ್ ಪಕ್ಷ ಕಟ್ಟಿ ಬೆಳೆಸುವಲ್ಲಿ ತಮ್ಮದೇ ಆದ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ರಾಜಕೀಯ ಕುಟುಂಬದ ಹಿನ್ನೆಲೆಯಿಂದ ಬಂದಿರುವ ಕಲ್ಲೇಶ್ ರಾಜ್ ಪಟೇಲ್ ಅವರಿಗೆ ರಾಹುಲ್ ಗಾಂಧಿ ಆಪ್ತರಾಗಿದ್ದಾರೆ. ಈ ಬಾರಿ ದಾವಣಗೆರೆ ಲೋಕ ಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಪ್ರಬಲ ಆಕಾಂಕ್ಷಿಯಾಗಿದ್ದಾರೆ.

ವರಿಷ್ಠರನ್ನು ಭೇಟಿ , ಟಿಕೆಟ್‍ಗೆ ಬೇಡಿಕೆ: ಸುಮಾರು 30 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷ ಕಟ್ಟುವಲ್ಲಿ ಬೆವರಿಳಿಸಿದ ಅವರಿಗೆ ಕಾಂಗ್ರೆಸ್ ವರಿಷ್ಠರು, ರಾಜ್ಯ ನಾಯಕರು ಆಪ್ತರು. ಮೊನ್ನೆಯಷ್ಟೇ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಪಿ.ಮಂಜಪ್ಪ ಮತ್ತು ಶಾಸಕ ಬಿ.ದೇವೇಂದ್ರಪ್ಪ ಅವರನ್ನು ಭೇಟಿ ಮಾಡಿ ಲೋಕ ಸಭಾ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಲು ಮನವಿ ಸಲ್ಲಿಸಿದ್ದರು.

ಅಷ್ಟೇ ಅಲ್ಲ ಪ್ರತಿ ವಿಧಾನಸಭಾ ಕ್ಷೇತ್ರಗಳಿಗೆ ತೆರಳಿ ಕಾಂಗ್ರೆಸ್ ಶಾಸಕರು, ಮುಖಂಡರನ್ನು, ಕಾರ್ಯಕರ್ತರನ್ನು ಭೇಟಿ ಮಾಡಿ ಪಕ್ಷಕ್ಕಾಗಿ ದುಡಿದಿದ್ದೇನೆ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ನಿಮ್ಮ ಸಹಕಾರ ಕೊಡಿ ಎಂದು ಮನವಿ ಸಲ್ಲಿಸುತ್ತಿದ್ದಾರೆ.ಈಶ್ವರ್ ಖಂಡ್ರೆ ಭೇಟಿ: ಲೋಕಸಭಾ ಕ್ಷೇತ್ರದ ವೀಕ್ಷಕರು ಹಾಗೂ ಅರಣ್ಯ ಸಚಿವರಾದ ಈಶ್ವರ್ ಬಿ. ಖಂಡ್ರೆ ರವರನ್ನು ಚನ್ನಗಿರಿ ಶಾಸಕರಾದ ಬಸವರಾಜ್ ಶಿವಗಂಗ ಜೊತೆಯಲ್ಲಿ ಗುರುವಾರ ಭೇಟಿ ಮಾಡಿ, 2024 ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಅವಕಾಶ ನೀಡಬೇಕು ಎಂದು ಮನವಿಸಲ್ಲಿಸಿದ್ದಾರೆ.

ಒಟ್ಟಾರೆ ಕಾಂಗ್ರೆಸ್ ಪಕ್ಷದಲ್ಲಿ ಶಿಸ್ತಿನ ಸಿಪಾಯಿ ಆಗಿರುವ ಕಲ್ಲೇಶ್‍ರಾಜ್ ಪಟೇಲ್ ಭಾರತ್ ಜೋಡೋ ಯಾತ್ರೆ ಮೂಲಕ ಕಾಂಗ್ರೆಸ್ ಅಧಿಕಾರಕ್ಕೆ ತರುವಲ್ಲಿ ಅವರ ಶ್ರಮ ಹೆಚ್ಚಿದೆ. ಅಷ್ಟೇ ಅಲ್ಲ ಅಜಾತ ಶತ್ರು ಕಲ್ಲೇಶ್ ರಾಜ್ ಅವರ ಪಕ್ಷ ನಿಷ್ಠೆ ಸೇವೆ ಪರಿಗಣಿಸಿರುವ ಕಾಂಗ್ರೆಸ್ ವರಿಷ್ಠರು ಟಿಕೆಟ್ ನೀಡುವ ಭರವಸೆಯನ್ನು ನೀಡಿದ್ದಾರೆ.

Share this Article
Leave a comment

Leave a Reply

Your email address will not be published. Required fields are marked *

error: Content is protected !!