ನಾಡು,ನುಡಿ, ಬಡವರ ಸೇವೆಗಾಗಿ ಜೀವವನ್ನೇ ಮುಡಿಪಾಗಿಡುವೆ: ಬಿ.ಮಹೇಶ್ವರಪ್ಪ

Suddivijaya
Suddivijaya July 17, 2022
Updated 2022/07/17 at 11:58 PM

ಸುದ್ದಿವಿಜಯ, ಬೆಂಗಳೂರು: ಸ್ವಾತಂತ್ರ ಬಂದು 75 ವರ್ವಗಳಾದರೂ ಸಮಾಜದಲ್ಲಿ ಇನ್ನೂ ಬಡತನದಿಂದ ಮುಕ್ತವಾಗಿಲ್ಲ. ತಾಂಡವಾಡುತ್ತಿರುವ ಹಸಿವು ನೀಗಿಸುವ ಕಾರ್ಯಕ್ಕೆ ಮತ್ತು ನಾಡು-ನುಡಿಗಾಗಿ ನನ್ನ ಜೀವವನ್ನೇ ಮುಡಿಪಾಗಿಡುವೆ ಎಂದು ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯನ ನಿರ್ದೇಶಕ ಬಿ.ಮಹೇಶ್ವರಪ್ಪ ಹೇಳಿದರು.

ಭಾನುವಾರ ಬೆಂಗಳೂರು ನಗರದ ಕನ್ನಡ ಭವನದ ರವೀಂದ್ರ ಕಲಾ ಕ್ಷೇತ್ರದಲ್ಲಿ ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ವತಿಯಿಂದ ಸಮಾಜ ಸುಧಾರಕರು ವಿವಿದ ಗಣ್ಯರು ಹಾಗು ಡಾ.ರಾಜರತ್ನ ಪುನೀತ್ ರಾಜ್ ರಾಜಕುಮಾರ್ ಅಂಗರಕ್ಷಕರ ಸಮ್ಮುಖದಲ್ಲಿ “ರಾಷ್ತ್ರೀಯ ರಾಜ ರತ್ನ ಡಾ.ಪುನೀತ್ ರಾಜ್ ಕುಮಾರ್ ಪ್ರಶಸ್ತಿ” ಯನ್ನ ಸ್ವೀಕರಿಸಿ ಅವರು ಮಾತನಾಡಿದರು.

ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಬಿ.ಮಹೇಶ್ವರಪ್ಪರಿಗೆ ಪ್ರಶಸ್ತಿ
ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಬಿ.ಮಹೇಶ್ವರಪ್ಪರಿಗೆ ಪ್ರಶಸ್ತಿ

ಮನುಷ್ಯನಿಗೆ ಬೇಕಿರುವುದು ಎರಡು ತುತ್ತು ಅನ್ನ. ಹಸಿದವರಿಗೆ ಊಟ ಹಾಕಿದರೆ ಕೋಟಿ ಪುಣ್ಯ ಬರುತ್ತದೆ. ಜಗಳೂರಿನ ಜನತೆ ನನ್ನನ್ನು ಸ್ನೇಹ ಜೀವಿಯಾಗಿ ನೋಡುತ್ತಿದ್ದಾರೆ.

ನಾನೂ ಸಹ ಬಡತನದಿಂದ ಬೆಳೆದು ಬಂದವನು. ಕಷ್ಟ-ನೋವು ನಲಿವುಗಳನ್ನು ಅನುಭವಿಸಿದ್ದೇನೆ. ಹೀಗಾಗಿ ಯಾರೇ ಬಂದರೂ ನನಗೆ ಎಷ್ಟೇ ಕಷ್ಟಗಳಿದ್ದರೂ ಅವರಿಗೆ ಕೈಲಾದಷ್ಟು ಸಹಾಯ ಮಾಡುತ್ತೇನೆ.

ಡಾ.ರಾಜ್‌ಕುಮಾರ್‌ ಮತ್ತು ಡಾ.ಪುನಿತ್‌ ರಾಜ್‌ಕುಮಾರ್‌ ಇದೇ ಮಾತಿಗೆ ಬದ್ಧವಾಗಿ ಸಮಾಜ ಸೇವೆಯ ಜೊತೆಗೆ ರಂಗ ಕಲೆಯ ಜೊತೆಗೆ ಸಾಂಸ್ಕೃತಿಕವಾಗಿಯೂ, ನಾಡು ನುಡಿಗಾಗಿ ಕಂಕಣ ಬದ್ಧರಾಗಿ ದುಡಿದರು. ಅವರ ಹಾದಿಯಲ್ಲಿ ಎಲ್ಲರೂ ನಡೆದರೆ ಸಮಾಜ ಅಭಿವೃದ್ಧಿ ಪಥದಲ್ಲಿ ಸಾಗುವುದರಲ್ಲಿ ಅನುಮಾನವಿಲ್ಲ ಎಂದರು.

ನಾನು ಎಂದಿಗೂ ಪ್ರಶಸ್ತಿಗಳ ಹಿಂದೆ ಬಿದ್ದವನಲ್ಲ. ಪ್ರಶಸ್ತಿಗಳೇ ನನ್ನನ್ನು ಹುಡುಕಿ ಬಂದಿರುವುದು ನನಗೆ ಖುಷಿ ತಂದಿದೆ. ʼರಾಷ್ತ್ರೀಯ ರಾಜ ರತ್ನ ಡಾ.ಪುನೀತ್ ರಾಜ್ ಕುಮಾರ್ ಪ್ರಶಸ್ತಿʼ ಸ್ವೀಕರಿಸುತ್ತಿರುವುದು ನನಗೆ ಹೆಮ್ಮೆ ಅನ್ನಿಸುತ್ತಿದೆ. ಪ್ರಶಸ್ತಿ ನೀಡಿದ ಆಯೋಜಕರಿಗೆ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ ಎಂದು ಬಿ.ಮಹೇಶ್ವರಪ್ಪ ಹೇಳಿದರು.

ʼರಾಷ್ತ್ರೀಯ ರಾಜ ರತ್ನ ಡಾ.ಪುನೀತ್ ರಾಜ್ ಕುಮಾರ್ ಪ್ರಶಸ್ತಿʼ ಜಗಳೂರಿನಿಂದ ನೂರಾರು ಮಹೇಶ್ವರಪ್ಪ ಅಭಿಮಾನಿಗಳು ಬೆಂಗಳೂರಿನ ಭವನದ ರವೀಂದ್ರ ಕಲಾ ಕ್ಷೇತ್ರದಲ್ಲಿ ಇದ್ದರು. ಪ್ರಶಸ್ತಿ ವಿತರಣೆ ಆಗುತ್ತಿದ್ದಂತೆ ನೂರಾರು ಅಭಿಮಾನಿಗಳು ಚಪ್ಪಾಳೆ ತಟ್ಟಿ ಅಭಿನಂದಿಸಿದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!