ಸುದ್ದಿವಿಜಯ,ಜಗಳೂರು: ಕಟಾವು ಮಾಡಬೇಕಿದ್ದ ಮೆಕ್ಕೆಜೋಳ ಜಮೀನಿಗೆ ಹಾಗೂ ಸಂಗ್ರಹಿಸಿದ ಮೆಕ್ಕೆಜೋಳ ತೆನೆಯ ರಾಶಿಗೆ ಆಕಸ್ಮಿಕ ಬೆಂಕಿ ತಗಲಿ ಲಕ್ಷಾಂತರ ರೂಗಳು ನಷ್ಟವುಂಟಾಗಿರುವ ಘಟನೆ ತಾಲೂಕಿನ ಭರಮಸಮುದ್ರ ಗ್ರಾಮದಲ್ಲಿ ಗುರುವಾರ ಸಂಭವಿಸಿದೆ.
ಗ್ರಾಮದ ರೈತ ಶಿವಣ್ಣ ಎಂಬುವರಿಗೆ ಸೇರಿದ 2 ಎಕರೆ ಮೆಕ್ಕೆಜೋಳ ಹಾನಿಯಾಗಿದೆ. ಗ್ರಾಮದಲ್ಲಿ ತನಗಿದ್ದ 2.29 ಎಕರೆ ಜಮೀನಿನಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಮೆಕ್ಕೆಜೋಳ ಬೆಳೆದಿದ್ದ, ಚನ್ನಾಗಿಯೇ ಬೆಳೆದು ಕಟಾವಿಗೆ ಬಂದಿತ್ತು.
2ಎಕರೆಯಲ್ಲಿ 1 ಎಕರೆ ಕಟಾವು ಮಾಡಿ ಜಮೀನಿನಲ್ಲಿಯೇ ರಾಶಿ ಹಾಕಿದ್ದ, ಇನ್ನೊಂದು ಎಕರೆಯನ್ನು ಮರುದಿನ ಕಟಾವು ಮಾಡಬೇಕೆಂದುಕೊಂಡಿದ್ದ ಆದರೆ ಗುರುವಾರ ಜಮೀನಿಗೆ ಬೆಂಕಿ ಬಿದ್ದಿರುವ ವಿಷಯ ತಿಳಿದಾಗ ಸ್ಥಳಕ್ಕೆ ದೌಡಾಯಿಸಿ ನೋಡಿದರೆ ಒಂದು ಎಕರೆ ಸಂಪೂರ್ಣ ಸುಟ್ಟು, ರಾಶಿ ಹಾಕಿದ್ದ ತೆನೆಯೂ ಬೆಂಕಿಗೆ ಆಹುತಿಯಾಗಿತ್ತು.
ಕೂಡಲೇ ಅಗ್ನಿಶಾಮಕ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಬೆಂಕಿನಂದಿಸಿದ್ದಾರೆ ಆದರೆ ಅಷ್ಟೊತ್ತಿಗೆ ಬಹುತೇಕ ಸುಟ್ಟು ಕರಕಲಾಗಿತ್ತು. ಇದರಿಂದ ರೈತರ ಶಿವಣ್ಣ ಅವರ 2 ಎಕರೆ ಮೆಕ್ಕೆಜೋಳ ಹಾನಿಯಿಂದು ಸುಮಾರು 1.5 ಲಕ್ಷ ನಷ್ಟವುಂಟಾಗಿದೆ ಎನ್ನಲಾಗಿದೆ.
ಮೆಕ್ಕೆಜೋಳ ರಾಶಿಗೆ ಬೆಂಕಿ ಬಿದ್ದ ಚಿತ್ರ