ಸುದ್ದಿವಿಜಯ, ಜಗಳೂರು: ನೆಗಡಿ,ಮೈನಡುಗುವಿಕೆ,ಕೀಲುನೋವು ಇವು ಮಲೇರಿಯಾದ ರೋಗ ಲಕ್ಷಣಗಳಾಗಿದ್ದು ಜ್ವರ ಕಾಣಿಸಿಕೊಂಡರೆ ತಕ್ಷಣವೇ ಚಿಕಿತ್ಸೆ ಪಡೆಯಿರಿ ಎಂದು ಗ್ರಾಪಂ ಅಧ್ಯಕ್ಷೆ ಶ್ರುತಿ ಹೇಳಿದರು.
ತಾಲ್ಲೂಕಿನ ಮುಸ್ಟೂರು ಗ್ರಾಪಂ, ಜಿಲ್ಲಾಡಳಿತ, ತಾಪಂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಮುಷ್ಟೂರು ಪ್ರಾಥಮಿಕ ಆರೋಗ್ಯ ಕೇಂದ್ರ ಸಂಯುಕ್ತಾಶ್ರಯದಲ್ಲಿ ಮಲೆರಿಯಾ ವಿರೋಧಿ ಮಾಸಾಚರಣೆಯ ಉದ್ಘಾಟಿಸಿ ಮಂಗಳವಾರ ಮಾತನಾಡಿದರು.
ದೇಶದಲ್ಲಿ ದಿನೇ ದಿನೇ ಹೊಸ ಹೊಸ ಮಾರಕ ರೋಗಳು ಹುಟ್ಟಿಕೊಳ್ಳುವುದರಿಂದ ವೈದ್ಯಕೀಯ ರಂಗಕ್ಕೆ ಸವಾಲು ಹಾಕಿದಂತ್ತಾಗಿದೆ ಎಂದರು. ಒಬ್ಬ ಮನುಷ್ಯ ಮೂರು ಲೀಟರ್ ಗಿಂತ ಹೆಚ್ಚು ನೀರು ಕುಡಿದಾಗ ಅವನ ಆರೋಗ್ಯ ಸಧೃಢವಾಗಿರುತ್ತದೆ. ನಾವುಗಳು ಸೇವನೆ ಮಾಡುವ ಆಹಾರದಿಂದಲೂ ಒಂದೊಂದು ಭಾರಿ ಅನಾರೋಗ್ಯಕ್ಕೆ ತುತ್ತಾಗುವಂತಹ ಪರಿಸ್ಥಿತಿ ಯಾಗಿದೆ.
ಆದಷ್ಡೂ ನಾವುಗಳು ಆರೀಗ್ಯವನ್ನು ಸುಧಾರಣೆ ತರುವಂತಹ ಹಣ್ಣು ತರಕಾರಿಗಳನ್ನು ಸೇವಿಸುವುದರ ಜೊತೆಗೆ ಉತ್ತಮ ಗುಣಮಟ್ಟದ ಅಡುಗೆ ಎಣ್ಣೆಯನ್ನು ಬಳಸಬೇಕು ಬೇಕಾಬಿಟ್ಟಿಯಾಗಿ ಸಿಗುವಂತಹ ಅಡುಗೆ ಎಣ್ಣೆಯನ್ನು ಬಳಸುವುದರಿಂದಲೂಸಹ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದರು.
ದೊಣ್ಷೆಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಬಸವರಾಜೇಶ್ವರಿ ಮಾತನಾಡಿ, ಮಲೇರಿಯಾ ರೋಗವು ಒಂದು ವೈರಸ್ ಅಥವಾ ಸೊಳ್ಳೆಯಿಂದ ಬರುವಂತಹ ರೋಗವಿನಹ ಅದು ಒಬ್ಬರಿಂದ ಇನ್ಬೊಬ್ಬರಿಗೆ ಹರಡುವ ರೋಗವಲ್ಲವೆಂದರು.
ಈ ಸಂದರ್ಭದಲ್ಲಿ ಮುಸ್ಟೂರು ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಸಾಕಮ್ಕ, ಮುಸ್ಟೂರು ಪ್ರಾಥಮಿಕ ಆರೋಗ್ಯಾಧಿಕಾರಿ ಡಾ.ಉಮೇಶ್, ಆರೋಗ್ಯನಿರೀಕ್ಷಣಾಧಿಕಾರಿ ಡಿ.ಟಿ.ಉಮೇಶ್ ಪಿಡಿಒ ಜಯ್ಯಪ್ಪ ಸೇರಿದಂತೆ ಗ್ರಾಮ ಪಂಚಾಯಿತಿ ಮಟ್ಟದ ಸಾರ್ವಜನಿಕರು ಭಾಗವಹಿಸಿದ್ದರು.