ಸುದ್ದಿವಿಜಯ, ಜಗಳೂರು: ಬಿರುಬೇಸಿಗೆ ಮಾಯವಾಗುವ ಲಕ್ಷಣಗಳು ಇಂದಿನಿಂದ ಶುರುವಾಗಿದೆ. ಪೂರ್ವ ಮುಂಗಾರು ಮಳೆಯ ಅಬ್ಬರದ ನಡುವೆ ರಾಜ್ಯಕ್ಕೆ ಗುಡ್‌ನ್ಯೂಸ್ ಸಿಕ್ಕಿದೆ. ಜೂನ್ 7 ಅಥವಾ 8ರಂದು ಮುಂಗಾರು ಮಾರುತಗಳು (ಮಾನ್ಸೂನ್) ಕರ್ನಾಟಕ ಪ್ರವೇಶಿಸಲಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇದೇ ಮೇ 19ರಂದು ನೈಋತ್ಯ ಮುಂಗಾರು ಮಾರುತಗಳು ಅಂಡಮಾನ್ ನಿಕೋಬಾರ್ ಮೂಲಕ ಭಾರತವನ್ನು ಪ್ರವೇಶ ಮಾಡಲಿವೆ. ಮೇ 31 ರಂದು ಕೇರಳಕ್ಕೆ ಮಾರುತಗಳು ತಾಕಲಿವೆ.
ಜೂನ್ ಮೊದಲ ವಾರದಲ್ಲಿ ಈ ಮಾರುತಗಳು ಕರ್ನಾಟಕವನ್ನು ಪ್ರವೇಶ ಮಾಡಲಿವೆ. ಆದ್ದರಿಂದ ಜೂನ್ 7 ಅಥವಾ 8 ರಂದು ಮುಂಗಾರು ಮಳೆ ಶುರುವಾಗಲಿದೆ.
ಈ ಬಾರಿ ಕರ್ನಾಟಕ ಸೇರಿ ದಕ್ಷಿಣ ಭಾರತದಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇದೇ ವೇಳೆ, ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯ ಅಬ್ಬರ ಮುಂದುವರೆದಿದೆ. ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಈಗಾಗಲೇ ಮಳೆ ಅಬ್ಬರ ಮುಂದುವರೆದಿದ್ದು ವಿವಿಧ ಜಿಲ್ಲೆಗಳಲ್ಲಿ ಸುರಿದ ಧಾರಾಕಾರ ಮಳೆಗೆ ಜನ ತತ್ತರಿಸಿದ್ದಾರೆ. ಕೆಲವೆಡೆ ಸಂಚಾರ ಅಸ್ತವ್ಯಸ್ಥಗೊಂಡಿದೆ.