ಸುದ್ದಿವಿಜಯ, ಜಗಳೂರು: ತಾಲೂಕಿನ ಹಿರೇಮಲ್ಲನಹೊಳೆ ಸರಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟದಲ್ಲಿ ಕೂದಲು, ಹುಳುಗಳು ಸಿಕ್ಕಿದ್ದು ಬಿಸಿಯೂಟ ಊಟ ಮಾಡಲು ಮಕ್ಕಳು ನರಳಾಟ ಅನುಭವಿಸುವಂತಾಗಿದೆ.
ಮಿಡ್‍ಡೇ ಮೀಲ್ಸ್ ಸರಕಾರದ ಮಹಾತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದು. ಮಕ್ಕಳು ಹಸಿವಿನಿಂದ ಬಳಲ ಬಾರದು ಮತ್ತು ಹಾಜರಾತಿ ಹೆಚ್ಚಿಸಲು ಜಾರಿಗೆ ಬಂದ ಮಧ್ಯಾಹ್ನದ ಬಿಸಿಯೂಟ ಈ ಶಾಲೆಯಲ್ಲಿ ಹಳ್ಳ ಹಿಡಿದಿದೆ. ಹೀಗಾಗಿ ವಿದ್ಯಾರ್ಥಿಗಳು ಊಟ ಮಾಡಲು ಮೂಗು ಮುರಿಯುತ್ತಿದ್ದಾರೆ.
ಮಂಗಳವಾರ ಮಧ್ಯಾಹ್ನ ಬಿಸಿಯೂಟ ಬಡಿಸುವಾಗಿ ಅನ್ನದಲ್ಲಿ ಕೂದಲು ಮತ್ತು ಹುಳುಗಳು ಕಂಡು ಬಂದಿವೆ. ಕರುನಾಡ ನವ ನಿರ್ಮಾಣ ವೇದಿಕೆ ರಾಜ್ಯ ಅಧ್ಯಕ್ಷ ಜೆ.ಎಚ್.ಎಂ.ಮಹಾಲಿಂಗಪ್ಪ ಇದನ್ನು ಪ್ರಶ್ನಿಸಿದ್ದಾರೆ.
ಕೆಲ ತಿಂಗಳಿಂದ ಈ ಶಾಲೆಯಲ್ಲಿ ಬಿಸಿಯೂಟ ಮಾಡಿರಲಿಲ್ಲವಂತೆ. ಅಡುಗೆ ಸಿಬ್ಬಂದಿಯ ಅಜಾಗರೂಕತೆಯಿಂದ ಇಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ ಹೀಗಾಗಿ ಮಕ್ಕಳು ನರಳಾಟ ಶಿಕ್ಷಣ ಇಲಾಖೆಯ ಗಮನಕ್ಕೂ ಬಂದಿಲ್ಲ. ಶಿಕ್ಷಕರ ಬೇಜವಾಬ್ದಾರಿಯೂ ಎದ್ದು ಕಾಣುತ್ತಿದೆ ಎಂದು ಆರೋಪಿಸಿದ್ದಾರೆ.
ಅಕ್ಷರ ದಾಸೋಹ ಅಡುಗೆ ತಯಾರಕರು ಅಕ್ಕಿ, ಬೇಳೆ, ತರಕಾರಿ ತೊಳೆಯದೆ ಅಡುಗೆ ಮಾಡುತ್ತಿದ್ದಾರೆ. ಅಡುಗೆ ಮಾಡುವಾಗ ಶುದ್ಧ ಕುಡಿಯುವ ನೀರು ಬಳಸದೇ ಟ್ಯಾಂಕ್ ನೀರನ್ನೇ ಬಳಸುತ್ತಿದ್ದಾರೆ. ಈ ಅವ್ಯವಸ್ಥೆಯ ಬಗ್ಗೆ ಮಕ್ಕಳು ಪ್ರಶ್ನಿಸಿದರೆ ಅಡುಗೆ ತಯಾರಕರು ಮಕ್ಕಳಿಗೆ ಅವಾಶ್ಯ ಶಬ್ದಗಳಿಂದ ನಿಂದಿಸುತ್ತಾರೆ ಎಂದು ಗ್ರಾಮಸ್ಥರು ಆರೋಪ ಮಾಡಿದ್ದಾರೆ.
ಈ ವಿಚಾರವನ್ನು ಅನೇಕ ಬಾರಿ ಅಧಿಕಾರಿಗಳ ಗಮನಕ್ಕೆ ತಂದರು ಸಹ ಯಾವುದೆ ಪ್ರಯೋನವಾಗಿಲ್ಲ. ಎಂದು ಅಧಿಕಾರಿಗಳ ವಿರುದ್ದ ಗ್ರಾಮಸ್ಥರು ಅಸಮಾಧಾನ ಹೊರ ಹಾಕಿದ್ದಾರೆ.