ಸುದ್ದಿವಿಜಯ, ಜಗಳೂರು: ಕಾಂಗ್ರೆಸ್ ಸರಕಾರದ ಐದು ಗ್ಯಾರಂಟಿ ಯೋಜನೆಗಳ ಜೊತೆಗೆ ಮೂಲಸೌಕರ್ಯಗಳಾದ ರಸ್ತೆ, ನೀರು, ಚರಂಡಿ, ಶುದ್ಧ ಕುಡಿಯುವ ನೀರಿನ ಪೂರೈಕೆ ಸೇರಿ ಸಾರ್ವಜನಿಕರಿಗೆ ಬೇಕಾಗುವ ಅಗತ್ಯ ಸೌಲಭ್ಯಕ್ಕೆ ಒತ್ತು ನೀಡಲಾಗುವುದು ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.
ಪಟ್ಟಣದ ಮೇಕಾ ಸೂರ್ಯನಾರಾಯಣ ಲೇಔಟ್‍ನಲ್ಲಿ ಗುರುವಾರ ಜಿ.ಪಂ ಅನುದಾನದಡಿ ಸಿ.ಸಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಸರಕಾರ ಜಾರಿಗೆ ತಂದಿರುವ 5 ಗ್ಯಾರಂಟಿ ಯೋಜನೆಗಳಿಗೆ ಸಾಕಷ್ಟು ಹಣ ಖರ್ಚಾಗಲಿದೆ. ಹೀಗಾಗಿ ಅನುದಾನದ ಕೊರತೆಯಾಗಿದೆ. ಮುಂದಿನ ಮಾರ್ಚ್ ನಂತರ ಎಲ್ಲಾ ಕ್ಷೇತ್ರಗಳಿಗೆ ಅನುದಾನ ನೀಡಲಿದ್ದು ಕ್ಷೇತ್ರ ಅಭಿವೃದ್ದಿ ಪಡಿಸಲಾಗುವುದು ಎಂದರು.
ಅನೇಕ ವರ್ಷಗಳಿಂದಲೂ ನೆನಗುದಿಗೆ ಬಿದ್ದಿರುವ ಒಳಚರಂಡಿ ವ್ಯವಸ್ಥೆಯನ್ನು ನಮ್ಮ ಅವದಿಯೊಳಗೆ ಪೂರ್ಣಗೊಳಿಸಲಾಗುವುದು. ಮುಖ್ಯ ರಸ್ತೆಯನ್ನು ವಿಭಜನೆ ಮಾಡಲಾಗುವುದು, ಹೊಸ ಆಸ್ಪತ್ರೆ ನಿರ್ಮಿಸಲು ಚಿಂತನೆ ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮದ್, ಪ.ಪಂ ಸದಸ್ಯ ಮಂಜುನಾಥ್, ಜಿ.ಪಂ ಎಇಇ ಶಿವಮೂರ್ತಿ, ಇಂಜಿನಿಯರ್ ವಿಜಯನಾಯ್ಕ, ಮಾಜಿ ತಾ.ಪಂ ಅಧ್ಯಕ್ಷ ಡಿ.ಆರ್ ಹನುಮಂತಪ್ಪ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಶೇಖರಪ್ಪ ಪಲ್ಲಾಗಟ್ಟೆ, ಮುಖಂಡ ಮಹಮದ್ ಗೌಸ್, ಜಗಳೂರಯ್ಯ, ವಕೀಲ ಲಕ್ಷ್ಮಣ್, ಕೀರ್ತಿಕುಮಾರ್, ಅನೂಪ್ ಸೇರಿದಂತೆ ಮತ್ತಿತರಿದ್ದರು.
9ಜೆಎಲ್‍ಆರ್‍ಚಿತ್ರ3ಎ: ಜಗಳೂರು ಪಟ್ಟಣದ ಮೇಕಾ ಸೂರ್ಯನಾರಾಯಣ ಲೇಔಟ್‍ನಲ್ಲಿ ಗುರುವಾರ ಜಿ.ಪಂ ಅನುದಾನದಡಿ ಸಿ.ಸಿ ರಸ್ತೆ ಕಾಮಗಾರಿಗೆ ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ಭೂಮಿ ಪೂಜೆ ನೆರವೇರಿಸಿದರು.