ಸುದ್ದಿವಿಜಯ, ಜಗಳೂರು: ಚಿತ್ರದುರ್ಗದ ಬಸವಮೂರ್ತಿ ಮಾದರ ಚೆನ್ನಯ್ಯ ಪೀಠದ ಪಕ್ಕದ ಮೈದಾನದಲ್ಲಿ ಜ.28ರಂದು ಎಚ್.ಕಾಂತರಾಜು ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಲು ಒತ್ತಾಯಿಸಿ ಶೋಷಿತ ಸಮುದಾಯಗಳಿಂದ ಬೃಹತ್ ಅಹಿಂದ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಬಿ. ದೇವೇಂದ್ರಪ್ಪ ತಿಳಿಸಿದರು.
ಪಟ್ಟಣದ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೀಸಲಾತಿ ಪಡೆಯಲು ಧರಣಿ, ಪಾದಯಾತ್ರೆ, ಹೋರಾಟ, ಪ್ರತಿಭಟನೆ ನಡೆಸುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಇಲ್ಲಿ ಯಾರ ವಿರುದ್ದ ಹೋರಾಟ ನಡೆಸುತ್ತಿಲ್ಲ.
ಅಹಿಂದ ವರ್ಗಕ್ಕೆ ಸಿಗಬೇಕಾದ ಮೀಸಲಾತಿ ಸೌಲಭ್ಯಗಳನ್ನು ಪಡೆಯಲು ಸಂಘಟಿತರಾಗಬೇಕಾಗಿದೆ. ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ರಾಜ್ಯದ ದಲಿತ, ಎಸ್ಸಿ, ಎಸ್ಟಿ, ಅಲ್ಪ ಸಂಖ್ಯಾತ ಸೇರಿದಂತೆ ರಾಜಕೀಯ ನಾಯಕರು ಭಾಗವಹಿಸಲಿದ್ದಾರೆ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದರು.ಅಂದು ಜಗಳೂರು ತಾಲೂಕಿನಿಂದ ಸುಮಾರು 100ಕ್ಕೂ ಹೆಚ್ಚು ಬಸ್‍ಗಳನ್ನು ಪ್ರತಿ ಹಳ್ಳಿಗೂ ಕಳಿಸಲಾಗುವುದು. ಹಾಗಾಗಿ ಎಲ್ಲರು ಕಡ್ಡಾಯವಾಗಿ ಪಾಲ್ಗೊಳ್ಳಬೇಕು. ಎಚ್. ಕಾಂತ್‍ರಾಜ್ ವರದಿ ಜಾರಿಗೊಳ್ಳುವುದರಿಂದ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಒಂದಷ್ಟು ಅಭಿವೃದ್ದಿಯಾಗಲು ಸಾಧ್ಯವಾಗುತ್ತದೆ.
ಇದು ಸರಿ, ತಪ್ಪುಗಳ ಪ್ರಶ್ನೆ ಬೇಡ, ಮೊದಲು ಜಾರಿಗೊಳಿಸಿ ನಂತರ ಲೋಪ ದೋಷಗಳಿದ್ದರೆ ಸರಿಪಡಿಸಲಾಗುವುದು. ಗೊಂದಲ ಬೇಡ ಎಂದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಷಂಷೀರ್ ಅಹಮದ್, ಕೆಪಿಪಿಸಿ ಎಸ್ಟಿ ಘಟಕ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ, ಕೆಪಿಪಿಸಿ ಎಸ್ಟಿ ಘಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಡಿ.ಕೀರ್ತಿಕುಮಾರ್, ಕೆಪಿಪಿಸಿ ಸದಸ್ಯ ಕಲ್ಲೇಶ್ ರಾಜ್ ಪಾಟೀಲ್, ಪ.ಪಂ ಸದಸ್ಯ ಮಹಮದ್,
ನಿವೃತ್ತ ಸಮಾಜ ಕಲ್ಯಾಣಾಧಿಕಾರಿ ಸಿ.ಮಹೇಶ್ವರಪ್ಪ, ಜಿ.ಪಂ ಮಾಜಿ ಸದಸ್ಯ ಸಿ.ಲಕ್ಷ್ಮಣ, ಕುರುಬ ಸಂಘದ ಅಧ್ಯಕ್ಷ ಓಮಣ್ಣ, ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಶೇಖರಪ್ಪ ಪಲ್ಲಾಗಟ್ಟೆ ಮುಖಂಡರಾದ ಜಿ.ಎಚ್ ಶಂಭುಲಿಂಗಪ್ಪ, ಹಟ್ಟಿ ತಿಪ್ಪೇಸ್ವಾಮಿ, ಹುಚ್ಚವ್ವನಹಳ್ಳಿ ರಂಗನಾಥರೆಡ್ಡಿ, ಯುವ ಕಾಂಗ್ರೆಸ್ ಅಧ್ಯಕ್ಷ ವಿಜಯ್ ಕೆಂಚೂಳ್, ಕೆಳಗೋಟೆ ಭದ್ರಿ ಸೇರಿದಂತೆ ಮತ್ತಿತರರಿದ್ದರು.