ಸುದ್ದಿವಿಜಯ, ಜಗಳೂರು: ನಂಜುಂಡಪ್ಪ ವರದಿ ಅನುಸಾರ ರಾಜ್ಯದಲ್ಲೇ ಅತ್ಯಂತ ಹಿಂದುಳಿದ ಜಗಳೂರು ವಿಧಾನ ಸಭಾ ಕ್ಷೇತ್ರದ ನೀರಾವರಿ ಅಭಿವೃದ್ಧಿಗೆ 57 ಕೆರೆ ತುಂಬಿಸುವ ಯೋಜನೆ ವಿಳಂಬವಾಗುತ್ತಿದ್ದು ನೀರು ಬಿಡಿ ಎಂದರೆ ರೈಲು ಬಿಡುವ ಕೆಲಸವನ್ನು ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳು ಮಾಡುತ್ತಿದ್ದಾರೆ ಎಂದು ಸದಸನದಲ್ಲಿ ಗುರುವಾರ ಶಾಸಕ ಬಿ.ದೇವೇಂದ್ರಪ್ಪ ಪ್ರಸ್ತಾಪ ಮಾಡಿದರು.
ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯ ವೇಳೆ ಮಾತನಾಡಿದ ಅವರು ನನ್ನ ವಿಧಾನಸಭಾ ಕ್ಷೇತ್ರದ 224 ಕ್ಷೇತ್ರಗಳಲ್ಲೇ ಅತ್ಯಂತ ಹಿಂದುಳಿದ ಕ್ಷೇತ್ರವಾಗಿದೆ. 2018ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಕ್ಷೇತ್ರದ ಅಭಿವೃದ್ಧಿಗೆ ಸಿರಿಗೆರೆ ಜಗದ್ಗುರುಗಳ ಆಶಯದಂತೆ 665 ಕೋಟಿ ರೂ ವೆಚ್ಚದ ಹರಿಹರ ಬಳಿಯ ತುಂಗಭದ್ರಾ ನದಿಯಿರುವ ದೀಟೂರು ಏತ ನೀರಾವರಿ ಯೋಜನೆಗೆ ಬಜೆಟ್‍ನಲ್ಲಿ ಹಣ ಮೀಸಲಿಟ್ಟರು.
ಯೋಜನೆ ಆರಂಭವಾಗಿ 6 ವರ್ಷಗಳೇ ಕಳೆದಿವೆ. 2023ನೇ ಇಸವಿ ಬಂದರು ಕಾಮಗಾರಿ ಪೂರ್ಣಗೊಂಡಿಲ್ಲ. ಈಗಾಗಲೇ ಎರಡು ಬಾರಿ ಶಾಸಕರು ಆಯ್ಕೆಯಾಗಿ ಹೋಗಿದ್ದಾರೆ. ನೀರು ಬಿಡಿ ಎಂದರೆ ಕರ್ನಾಟಕ ನೀರಾವರಿ ನಿಗದಮ ಅಧಿಕಾರಿಗಳು ಸುಳ್ಳು ರೈಲು ಬಿಡುವ ಕೆಲಸ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಜವಾನನನ್ನು ಆಯ್ಕೆ ಮಾಡಿದ ಕ್ಷೇತ್ರ:
ಕಾಂಗ್ರೆಸ್ ಪಕ್ಷ ಟಿಕೆಟ್ ಕೊಡುವ ವೇಳೆ ಕೆಲಸವರು ಜನವಾನಿಗೆ ಟಿಕೆಟ್ ಕೊಟ್ಟರೆ ಕ್ಷೇತ್ರದ ಅಭಿವೃದ್ಧಿಯನ್ನು ಅವರಿಂದ ಏನನ್ನು ನಿರೀಕ್ಷಿಸಲು ಸಾಧ್ಯ ಎಂದು ಅಪಪ್ರಚಾರ ಮಾಡಿದರು. ಆದರೆ ಜನ ನನ್ನ ಮೇಲೆ ಭರವಸೆಯಿಟ್ಟು ವಿಧಾನಸಭೆಗೆ ಆಯ್ಕೆ ಮಾಡಿ ಕಳುಹಿಸಿದ್ದಾರೆ.
ಹೀಗಾಗಿ ಕ್ಷೇತ್ರದ ಅಭಿವೃದ್ಧಿಯಾಗಬೇಕಾದರೆ 57 ಕೆರೆ ಏತ ಕಾಮಗಾರಿ ಪೂರ್ಣಗೊಂಡರೆ ಮಾತ್ರ ಸಾಧ್ಯ. ಇನ್ನು ಏಳು ಕಿಮೀ ಪೈಪ್‍ಲೈನ್ ಕಾಮಗಾರಿ ಬಾಕಿ ಉಳಿದಿದೆ. ಅದು ಪೂರ್ಣಗೊಂಡೆ 34 ಕೆರೆಗಳಿಗೆ ನೀರು ಹರಿಸಬಹುದು. ನೀರಾವರಿ ನಿಗಮದ ಅಧಿಕಾರಿಗಳು ಕಾಮಗಾರಿಗೆಯನ್ನು ತುರ್ತಾಗಿ ಪೂರ್ಣಗೊಳಿಸಬೇಕಿದೆ ಎಂದು ಸಭಾಧ್ಯಕ್ಷರಿಗೆ ಮನವಿ ಮಾಡಿದರು.