Suddivijayanews25/5/2024
ಸುದ್ದಿವಿಜಯ,ಜಗಳೂರು:ತಾಲೂಕಿನ ಹುಚ್ಚವ್ವನಹಳ್ಳಿ ಗ್ರಾಮದಲ್ಲಿ ಮಾಳಿಗೆ ಮನೆ ಕುಸಿದು ಅಪಾಯದಿಂದ ಪಾರಾಗಿದ್ದ ಸನಾವುಲ್ಲ ಮನೆಗೆ ಶನಿವಾರ ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ಭೇಟಿ ನೀಡಿ ವೈಯಕ್ತಿಯವಾಗಿ 10 ಸಾವಿರ ಸಹಾಯ ಹಸ್ತ ನೀಡಿ ಆತ್ಮಸ್ಥೈರ್ಯ ತುಂಬಿದರು.
ನಂತರ ಮಾತನಾಡಿ, ನಿಮ್ಮ ಕುಟುಂಬದ ಮೇಲೆ ದೇವರ ಕರುಣೆ ಇದೆ. ಎಲ್ಲರು ಮನೆಯೊಳಗೆ ಇರುವಾಗಲೇ ಈ ಘಟನೆ ನಡೆದರು ಸಣ್ಣ ಪುಟ್ಟ ಗಾಯಗಳಾಗಿ ಜೀವಕ್ಕೆ ಯಾವ ತೊಂದರೆಯಾಗಿಲ್ಲ.
ಮಳೆಗಾಲದಲ್ಲಿ ತುಂಬ ಎಚ್ಚರಿಕೆಯಿಂದ ಇರಬೇಕು ಎಂದರು.ಮನೆಯನ್ನು ಕಳೆದುಕೊಂಡು ಬೀದಿಗೆ ಬಂದಿರುವುದು ಬೇಸರ ತಂದಿದೆ.
ಆದಷ್ಟು ಬೇಗ ಸರಕಾರದಿಂದ ಮನೆ ಮಂಜೂರು ಮಾಡಿಸಿಕೊಡಲಾಗುವುದು, ಅಲ್ಲಿಯವರೆಗೂ ಬೇರೊಂದು ಬಾಡಿಗೆ ಮನೆಯಲ್ಲಿ ಆಶ್ರಯ ಪಡೆದುಕೊಳ್ಳಿ ಎಂದರು.
ಇದೇ ವೇಳೆ ಹುಚ್ಚವ್ವನಹಳ್ಳಿ ಗ್ರಾಮದ ಹನುಮಂತರೆಡ್ಡಿ ಖಾಸಗಿ ಬಸ್ ಅಪಘಾತದಲ್ಲಿ ಗಾಯಗೊಂಡಿದ್ದರಿಂದ ಮನೆಗೆ ಭೇಟಿ ನೀಡಿದ ಶಾಸಕರು ಆರೋಗ್ಯ ವಿಚಾರಿಸಿದರು.
ಗ್ರಾ.ಪಂ ಉಪಾಧ್ಯಕ್ಷ ೧೦ ಸಾವಿರ ನೆರವು:
ಹಿರೇಮಲ್ಲನಹೊಳೆ ಗ್ರಾಮ ಪಂಚಾಯಿತಿಯ ಮಾಜಿ ಉಪಾಧ್ಯಕ್ಷ ಅನುಪ್ರೆಡ್ಡಿ ನಿರಾಶ್ರಿತ ಕುಟುಂಬಕ್ಕೆ ವೈಯಕ್ತಿವಾಗಿ 10 ಸಾವಿರ ನೀಡಿ ಧೈರ್ಯ ತುಂಬಿದರು.
ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷಕ ಧನಂಜಯ್, ಗ್ರಾಮ ಲೆಕ್ಕಾಧಿಕಾರಿ ಸರ್ವಶ್ರೀ, ಹಿರೇಮಲ್ಲನ ಹೊಳೆ ಗ್ರಾ.ಪಂ ಮಾಜಿ ಉಪಾಧ್ಯಕ್ಷ ಅನುಪ್ ರೆಡ್ಡಿ, ಸದಸ್ಯ ನಾಗರಾಜ್ ಮುಖಂಡರಾದ ಪ್ರಕಾಶ್ ರೆಡ್ಡಿ, ಪರ್ವೀಜ್, ಪಲ್ಲಾಗಟ್ಟಿ ಶೇಖರಪ್ಪ, ಆದರ್ಶ, ರಂಗನಾಥ್ ತಿಪ್ಪೇಸ್ವಾಮಿ ಸೇರಿದಂತೆ ಮತ್ತಿತರರಿದ್ದರು.