ಸುದ್ದಿವಿಜಯ, ಜಗಳೂರು: ಸಂಸದ ಜಿ.ಎಂ.ಸಿದ್ದೇಶ್ವರ್ ಬರ ನಿರ್ವಹಣೆ ಸೇರಿದಂತೆ ಜಿಲ್ಲೆಯ ಸಮಗ್ರ ಅಭಿವೃದ್ಧಿ ವಿಚಾರದಲ್ಲಿ ವಿಫಲಾರಾಗಿದ್ದಾರೆ ಎಂದು ಕಾಂಗ್ರೆಸ್ ಲೋಕಸಭಾ ಟಿಕೆಟ್ ಆಕಾಂಕ್ಷಿ ಕಲ್ಲೇಶ್‍ರಾಜ್ ಪಟೇಲ್ ಆರೋಪಿಸಿದ್ದಾರೆ.
ಪಟ್ಟಣದ ಪತ್ರಿಕಾಭವನದಲ್ಲಿ ಬುಧವಾರ ಸುದ್ದಿಗೋಷ್ಠಿ ಉದ್ದೇಶಿ ಮಾತನಾಡಿದ ಅವರು, ಕೇಂದ್ರದ ಬರ ಅಧ್ಯಯನ ತಂಡ ಜಿಲ್ಲೆಗೆ ಬಂದಾಗ ಅವರೊಂದಿಗೆ ಸೇರಿ ಬರದ ನಷ್ಟದ ಬಗ್ಗೆ ಮಾಹಿತಿ ನೀಡಲಿಲ್ಲ. ಸಂಸದರಾಗಿ ಅವರು ಮಾಡಿರುವ ಸಾಧನೆ ಏನು? ಕಳೆದ ಐದು ವರ್ಷಗಳಲ್ಲಿ ಜಿ.ಎಂ.ಸಿದ್ದೇಶ್ವರ್ ಅಭಿವೃದ್ಧಿ ವಿಚಾರದಲ್ಲಿ ಮೈಮರೆತಿದ್ದಾರೆ.
ಕೇಂದ್ರದಲ್ಲಿ ರಾಜ್ಯ ವಿಮಾನಯಾನ ಸಚಿವರಾಗಿದ್ದ ಅವರು ದಾವಣಗೆರೆ ಜಿಲ್ಲೆಗೆ ವಿಮಾನ ನಿಲ್ದಾಣ ಮಾಡುವಲ್ಲಿ ವಿಫಲರಾದರು. ಬರದಿಂದ ರಾಜ್ಯ ತತ್ತಿಸುತ್ತಿರುತ್ತಿದೆ. 25 ಸಂಸದರು ಒಟ್ಟಾಗಿ ಸೇರಿ ಪ್ರಧಾನಿ ಬಳಿ ನಿಯೋಗ ಹೋಗಿ 30 ಸಾವಿರ ಕೋಟಿಗೂ ಹೆಚ್ಚು ನಷ್ಟವಾಗಿದ್ದು ರಾಜ್ಯಕ್ಕೆ ಕೊಡಿ ಎಂದು ಕೇಳುವ ಕಾಳಜಿ ಇಲ್ಲ ಎಂದು ಕುಟುಕಿದರು.
ಪ್ರಚಾರಕ್ಕಾಗಿ ಬಿಜೆಪಿ ಮುಖಂಡರು ಪ್ರಚಾರ ಮಾಡುತ್ತಿದ್ದಾರೆ. ವಿಶ್ವೇಶ್ವರ ಹೆಗಡೆ ಕಾಗೇರಿ ನೇತೃತ್ವದ ತಂಡ ಬಂದಾಗ ಹಸಿರು ಶಾಲು ಹಾಕಿಕೊಂಡು ಅಬ್ಬರದ ಪ್ರಚಾರ ಪಡೆಯಲು ಬರ ಅಧ್ಯಯ ಮಾಡಿದರು. ಅವರ ಗಿಮಿಕ್ ನಡೆಯುವುದಿಲ್ಲ ಎಂದರು.
ಟಿಕೆಟ್ ಕೊಟ್ಟರೆ ಲೋಕಾ ಚುನಾವಣೆಗೆ ಸ್ಪರ್ಧೆ:
ಕಾಂಗ್ರೆಸ್ ಪಕ್ಷದಲ್ಲಿ ನಮ್ಮ ಜಿಲ್ಲೆಗೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಹೈಕಮಾಂಡ್. ಅವರು ಈ ಹಿಂದೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದರು. ಜಿಲ್ಲಾಧ್ಯಕ್ಷ ಮಂಜಪ್ಪ ಸಹ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದರು.
ಅವರು ಸ್ಪರ್ಧಿಸದೇ ಇದ್ದು ನನಗೆ ಟಿಕೆಟ್ ಕೊಟ್ಟರೆ ನಾನು ಸ್ಪರ್ಧಿಸಲು ಸಿದ್ದವಿದ್ದೇನೆ. 1994 ರಿಂದಲೂ ಪಕ್ಷಕ್ಕಾಗಿ ದುಡಿದಿದ್ದೇನೆ. ಭಾರತ್ ಜೋಡೋ ಪಾದಯಾತ್ರೆಯಲ್ಲಿ ಭಾಗಿಯಾಗಿ ದೇಶದಾದ್ಯಂತ ಪಕ್ಷ ಬಲವರ್ಧನೆಗೆ ಶ್ರಮಿಸಿದ್ದೇನೆ. ವರಿಷ್ಠರು ನನ್ನನ್ನು ಗುರುತಿಸಿ ಟಿಕೆಟ್ ಕೊಟ್ಟರೆ ನಾನು ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದರು.