suddivijayanews31/07/2024
ಸುದ್ದಿವಿಜಯ, ಜಗಳೂರು: ತಾಲೂಕಿನ ಗೌರಿಪುರ ಗ್ರಾಮದಲ್ಲಿ ಬುಧವಾರ ಬೆಳಗಿನ ಜಾವ ಶಿಕ್ಷಕಿ ನಾಗಮ್ಮ(50)ನ ಮೇಲೆ ಗಂಡ ಸತ್ಯಪ್ಪ ಅರಿತವಾದ ಆಯುಧದಿಂದ ಕತ್ತು ಸೀಳಿ ಕೊಲೆ ಮಾಡಿ ತಾನೂ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಸೆಣಸಾಡತ್ತಿರುವ ಘಟನೆ ನಡೆದಿದೆ.
ಘಟನೆ ವಿವರ: 28 ವರ್ಷಗಳ ಹಿಂದೆ ಗೌರಿಪುರ ಗ್ರಾಮದ ಸತ್ಯಪ್ಪ ಎಂಬುವರನ್ನು ನಾಗಮ್ಮ ವಿವಾಹವಾಗಿದ್ದರು. ವಿವಾಹವಾಗಿ 10 ವರ್ಷಗಳ ನಂತರ ಕೊಲೆ ಆರೋಪಿ ಸತ್ಯಪ್ಪ ತನ್ನ ಪತ್ನಿ ನಾಗಮ್ಮಳ ಮೇಲೆ ವಿನಾ ಕಾರಣ ಅನುಮಾನ ಪಡುವುದು, ಹಣಕ್ಕಾಗಿ ಪೀಡಿಸುತ್ತಿದ್ದ ಎಂದು ದೂರಿನಲ್ಲಿ ನಾಗಮ್ಮ ಸಹೋದರಿ ಶಾಂತಮ್ಮ ಉಲ್ಲೇಖಿಸಿ ದೂರು ನೀಡಿದ್ದಾರೆ.
ಸಂಡೂರಿನ ಸರಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಕೊಲೆಯಾದ ನಾಗಮ್ಮ ತಾಲೂಕಿನ ಸಂತೆಮುದ್ದಾಪುರ ಸರಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ವರ್ಗಾವಣೆಯಾಗಿ ಕಾರ್ಯನಿರ್ವಹಿಸುತ್ತಿದ್ದರು.
ಜಗಳೂರು ಪಟ್ಟಣದಲ್ಲಿ ವಾಸವಾಗಿದ್ದ ಶಿಕ್ಷಕಿ ನಾಗಮ್ಮ, ಕೆಲ ದಿನಗಳ ಹಿಂದೆ ಶಾಲೆಗೆ ರಜೆ ಗೌರಿಪುರ ಗ್ರಾಮದ ಮಂಜಪ್ಪ ಎಂಬುವರ ಮನೆಗೆ ಸ್ಥಳಾಂತರ ಗೊಂಡಿದ್ದರು. ಹೀಗಿರುವಾಗ ಮೂರು ದಿನಗಳಿಂದಲೂ ಗಂಡ ಸತ್ಯಪ್ಪ ಮತ್ತು ನಾಗಮ್ಮ ನಡುವೆ ಕೌಟುಂಬಿಕ ವಿಚಾರದಲ್ಲಿ ಜಗಳವಾಗುತ್ತಿತ್ತು.
ಜು.30 ರಂದು ರಾತ್ರಿ 11 ಗಂಟೆಯಿಂದ ಬೆಳಗಿನ ಜಾವದ ವರೆಗೂ ಗಂಡ ಹೆಂಡತಿ ಮಧ್ಯೆ ಕೌಟುಂಬಿಕ ಜಗಳವಾಗಿದೆ. ಹೆಂಡತಿ ಮೇಲೆ ಅನುಮಾನ ವ್ಯಕ್ತಪಡಿಸಿ ಸತ್ಯಪ್ಪ ನಾಗಮ್ಮನ ಕುತ್ತಿಗೆಯನ್ನು ಅರಿತವಾದ ಆಯುಧದಿಂದ ಕತ್ತು ಸೀಳಿ ಕೊಲೆ ಮಾಡಿದ್ದಾನೆ.
ನಂತರ ತಾನು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ತಕ್ಷಣ ಸ್ಥಳೀಯರು ಜಗಳೂರು ಪಟ್ಟಣದ ಸರಕಾರಿ ಆಸ್ಪತ್ರೆಗೆ ಸತ್ಯಪ್ಪನನ್ನು ದಾಖಲಿಸಿದ್ದಾರೆ.
ಈ ಪ್ರಕರಣ ಸಂಬಂಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು ಇನ್‌ಸ್ಪೆಕ್ಟರ್ ಡಿ.ಶ್ರೀನಿವಾಸ್‌ರಾವ್ ಮತ್ತು ಪಿಎಸ್‌ಐ ಎಸ್.ಡಿ.ಸಾಗರ್ ನೇತೃತ್ವದ ಪೊಲೀಸರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆರೋಪಿ ಸತ್ಯಪ್ಪ ಸಾವು ಬದುಕುನ ಮಧ್ಯೆ ಹೋರಾಡುತ್ತಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.