ಸುದ್ದಿವಿಜಯ, ಜಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಸ್ಥಿತ್ವಕ್ಕೆ ಬರಲು ಮುಸ್ಲಿಂ ಸಮುದಾಯದ ಪಾತ್ರವೂ ಇದೆ. ಸರ್ವ ಜನಾಂಗದ ಶಾಂತಿಯ ತೋಟವಾಗಿರುವ ಕರ್ನಾಟದಲ್ಲಿರುವ ಮುಸ್ಲಿಂ ಜನಾಂಗದ ಹಕ್ಕು ರಕ್ಷಣೆ ಮಾಡುವುದು ನಮ್ಮ ಸರಕಾರದ ಆದ್ಯ ಕರ್ತವ್ಯ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.
ತಾಲೂಕಿನ ಹನುಮಂತಾಪುರ ಗ್ರಾಮದಲ್ಲಿ ಭಾನುವಾರ ಜಗಳೂರು ವಿಧಾನ ಸಭಾ ಕ್ಷೇತ್ರದ ಮುಸ್ಲಿಂ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ನೂತನ ಶಾಸಕರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.ಡಬಲ್ ಎಂಜಿನ್ ಸರಕಾರದ ಒಂದು ಎಂಜಿನ್ ಕಟ್ ಆಗಿದೆ. ಇನ್ನು ಕೆವಲ 9 ತಿಂಗಳಲ್ಲಿ ಮತ್ತೊಂದು ಎಂಜಿನ್ ಕಟ್ ಆಗಲಿದೆ ಎಂದು ಭವಿಷ್ಯ ನುಡಿದರು.
ಜಗಳೂರು ವಿಧಾನ ಸಭಾ ಕ್ಷೇತ್ರವನ್ನು ಪಿ.ಟಿ ಉಷಾ ಓಡಿದ ರೀತಿಯಲ್ಲಿ ಐದು ವರ್ಷಗಳಲ್ಲಿ ಅಭಿವೃದ್ದಿ ಕೆಲಸ ಮಾಡುತ್ತೇನೆ ಎಂದರು. ಪ್ರಮಾಣ ವಚನ ಸ್ವೀಕರಿಸುವಾಗ ಸಂವಿಧಾನದ ಅಡಿಯಲ್ಲಿ ಸರ್ವಜನಕ್ಕೂ ನ್ಯಾಯ, ಸತ್ಯದಲ್ಲಿ ನಡೆಯುತ್ತೇನೆ ಎಂದು ಹೇಳಿದರು.
ಸೂಲಿಬೆಲೆ ವಿರುದ್ಧ ವಾಗ್ದಾಳಿ:
ಕುವೆಂಪು ಹೇಳಿದಂತೆ ಸರ್ವಜನಾಂಗದ ಶಾಂತಿಯ ತೋಟದಲ್ಲಿ ಎಲ್ಲ ಧರ್ಮೀಯರು ಒಂದಾಗಿ ಬದುಕುತ್ತಿರುವ ಸಮುದಾಯಗಳ ಮಧ್ಯೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿರುವ ಚಕ್ರವರ್ತಿ ಸೂಲಿಬೆಲಿ ಎಲ್ಲಿದೀಯಾಪ್ಪ. ಕೋಮು ಗಲುಬೆ ಮಾಡುತ್ತೀರಾಲ್ಲಾ ಇದು ಸರಿಯೇ? ಸಾಮರಸ್ಯದಿಂದ ಬದುಕುವಾಗ ಅಮೃತಕ್ಕೆ ಉಳಿ ಹಿಂಡುವ ಕೆಲಸ ಮಾಡುವುದು ಬಿಡಿ ಎಂದರು.
ಕೆಪಿಸಿಸಿ ಎಸ್ಟಿ ಘಟಕದ ಅಧ್ಯಕ್ಷ ಕೆ.ಪಿ ಪಾಲಯ್ಯ ಮಾತನಾಡಿ, ಮುಸ್ಲಿಂ ಸಮುದಾಯ ಕಾಂಗ್ರೆಸ್ ಪಕ್ಷವನ್ನು ಕೈ ಹಿಡಿದಿದ್ದಕ್ಕೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಕಾರಣವಾಗಿದೆ. ಮುಸ್ಲಿಂರು ಇರುವ ಎಲ್ಲಾ ಗ್ರಾಮಗಳ ಅಭಿವೃದ್ದಿಗೆ ಗಮನಹರಿಸಲಾಗುವುದು ಎಂದರು.
ಮುಸ್ಲಿಂ ಸಮುದಾಯದ ಮೌಲಾನಿ ಬಿ.ಎ ಇಬ್ರಾಹಿಂ ಸಖಾಫಿ ಮಾತನಾಡಿ, ಸಂವಿಧಾನ ಬದ್ದವಾಗಿ ಕೆಲಸ ಮಾಡುವ , ಸಂವಿಧಾನ ಉಳಿಸುವ ಪಕ್ಷಕ್ಕೆ. ನಮ್ಮ ಸಮುದಾಯ ಮತ ಬ್ಯಾಂಕ್ ಆದರೆ ತಪ್ಪೇನು ಎಂದು ಪ್ರಶ್ನಿಸಿದರು. ಒಂದು ಕೋಟಿಯಷ್ಟು ಜನಸಂಖ್ಯೆ ಹೊಂದಿರುವ ಮುಸ್ಲಿಂ ಸಮುದಾಯ ಒಂದಾದರೇ ವಿಧಾನ ಸಭಾ ಚುನಾವಣೆ ಫಲಿತಾಂಶದಂತೆ ಮುಂದೆ ಬರುವ ಲೋಕ ಸಭಾ ಚುನಾವಣೆಯಲ್ಲೂ ಉತ್ತಮ ಫಲಿತಾಂಶ ಬರಲಿದೆ ಎಂದರು.
ನಿವೃತ್ತ ಉಪನ್ಯಾಸಕ ಶಂಷುದ್ದೀನ್ ಮಾತನಾಡಿ, ಮುಸ್ಲಿಂ ಸಮಾಜ ಬಡತನವಿದೆ ಆದರೆ ಕೌಶಲ್ಯಭರಿತವಾಗಿದೆ. ಧಾರ್ಮಿಕ, ಸಾಂಸ್ಕøತಿ, ಭಾಷೆ, ಉಡುಗೆ ತೊಡುಗೆ ತಮ್ಮದೇಯಾದ ಗುರುತುಗಳನ್ನು ಹೊಂದಿದೆ. ಎಲ್ಲಾ ಸಮುದಾಯದೊಂದಿಗೆ ಸಾಮರಸ್ಯದಿಂದ ಬದುಕುತ್ತಿದೆ.
ಹಿಂದಿನ ಸರಕಾರದಿಂದ ಸಮಾಜಕ್ಕೆ ಅನೇಕ ಅಪಮಾನ, ತೊಂದರೆಗಳಿಗೆ ಒಳಗಾಗಿ ಸಾಕಷ್ಟು ನೋವು ಅನುಭವಿಸಿದ್ದೇವೆ. 56 ಲಕ್ಷ ಜನಸಂಖ್ಯೆಯೂ ಒಗ್ಗಟ್ಟಾಗಿ ಕಾಂಗ್ರೆಸ್ ಶಾಸಕರನ್ನು ಆಯ್ಕೆ ಮಾಡಲಾಗಿದ್ದು, ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವುದು ಸಂತಸ ತಂದಿದೆ ಎಂದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಅಸಗೋಡು ಜಯಸಿಂಹ, ಮೌಲಾನ ವಸೀಮ್ ಹಜರತ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಷೀರ್ ಅಹಮದ್, ಉಸ್ತುವಾರಿ ಕಲ್ಲೇಶ್‍ರಾಜ್ ಪಟೇಲ್, ಪ.ಪಂ ಸದಸ್ಯರಾದ ಮಹಮದ್, ಮಂಜುನಾಥ್, ರಮೇಶ್, ಜಾಮೀಯ ಮಸೀದಿಯ ಅಧ್ಯಕ್ಷ ಇಕ್ಬಾಲ್ ಅಹಮದ್ ಖಾನ್, ಅಖ್ತರ್, ವಾಸೀಂ ಹಜರತ್, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಲ್ಲಾಗಟ್ಟೆ ಶೇಖರಪ್ಪ, ಮುಖಂಡರಾದ ಸಿ. ತಿಪ್ಪೇಸ್ವಾಮಿ, ಇಮಾಂ ಅಲಿ ಸಾಬ್, ಸಿದ್ದಯ್ಯನಕೋಟೆ ಟೀಪುಸಾಬ್, ಪಿಂಜಾರ ಸಮುದಾಯದ ಉಪಾಧ್ಯಕ್ಷ ಫರ್ವೀಜ್, ದೇವಿಕೆರೆ ಗುರುಸಿದ್ದಪ್ಪ, ಹೈದರಾಲಿ, ದಾದಪೀರ್, ಸ್ಟಾರ್ ಸನಾವುಲ್ಲಾ, ಮುಸ್ಲಿಂ ಸಮಾಜದ ಮುಖಂಡರಾದ ನಬೀವುಲ್ಲಾ, ಬರ್ಕತ್, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಹಮದ್ ಅಲಿ, ಕಾನನಕಟ್ಟೆ ಪ್ರಭು ಸೇರಿದಂತೆ ಮತ್ತಿತರಿದ್ದರು.