ಸುದ್ದಿವಿಜಯ, ಜಗಳೂರು: ಪಟ್ಟಣದಲ್ಲಿ ಕೆಲ ಸರ್ಕಾರಿ ಇಲಾಖೆಗಳು ಬಾಡಿಗೆ ಕಟ್ಟದಲ್ಲಿ ಕೆಲಸ ಮಾಡುತ್ತಿದ್ದು ಆದಷ್ಟು ಬೇಗ ಸ್ವಂತ ಕಟ್ಟಡಗಳಿಗೆ ಸ್ಥಳಾಂತರಿಸಲಾಗುವುದು ಎಂದು ಶಾಸಕ ಚಿಕ್ಕಮ್ಮನಹಟ್ಟಿ ಬಿ.ದೇವೇಂದ್ರಪ್ಪ ಹೇಳಿದರು.
ಇಲ್ಲಿನ ಬಯಲು ರಂಗಮಂದಿರದ ಬಳಿ ಸೋಮವಾರ ಬೆಸ್ಕಾಂ ಕಚೇರಿ ಉದ್ಘಾಟಿಸಿ ಮಾತನಾಡಿ, ಬೆಸ್ಕಾಂ ಇಲಾಖೆಯ ನೂತನ ಕಟ್ಟಡಕ್ಕೆ ಸರ್ಕಾರದಿಂದ 1 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಬೇಕಾಗಿದೆ. ಹಾಗಾಗಿ ಅಲ್ಲಿಯವರೆಗೂ ತಾತ್ಕಾಲಿಕವಾಗಿ ಬಯಲು ರಂಗಮಂದಿರದ ಕಟ್ಟಡದಲ್ಲಿ ಕೆಲಸ ಆರಂಭಿಸಲಾಗುತ್ತಿದೆ ಎಂದರು.
ನೌಕರರಿಗೆ ನೋವಿದ್ದರು ಹಗಲು ರಾತ್ರಿ ಎನ್ನದೇ ಕೆಲಸ ಮಾಡಿ ಪ್ರತಿಯೊಂದು ಮನೆಗೂ ಬೆಳಕು ಕೊಡುವ ಇಲಾಖೆ ಬೆಸ್ಕಾಂ, ಅವರಿಗೂ ಕುಟುಂಬ, ಬದುಕು ಇರುತ್ತದೆ. ರೈತರು ಸಹಕರಿಸಬೇಕು ಎಂದರು.
ಮಳೆ ಮತ್ತು ಬೆಳೆ ಇಲ್ಲದೇ ರೈತರು ಸಂಕಷ್ಟದಲ್ಲಿದ್ದಾರೆ.
ಈ ಸಂದರ್ಭದಲ್ಲಿ ಕೆಪಿಸಿಸಿ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ ಪಾಲಯ್ಯ, ಬೆಸ್ಕಾಂ ಎಇಇ ಸುಧಾಮಣಿ, ಪ.ಪಂ ಸದಸ್ಯ ರಮೇಶ್‍ರೆಡ್ಡಿ, ಮಾಜಿ ಜಿ.ಪಂ ಸದಸ್ಯ ಸಿ. ಲಕ್ಷ್ಮಣ್, ನಿವೃತ್ತ ಸಮಾಜ ಕಲ್ಯಾಣಾಧಿಕಾರಿ ಬಿ. ಮಹೇಶ್ವರಪ್ಪ, ಮುಖಂಡರಾದ ಪ್ರಕಾಶ್‍ರೆಡ್ಡಿ, ಮಾಳಮ್ಮನಹಳ್ಳಿ ವೆಂಕಟೇಶ್, ಸುಭಾಷ್ ಗುಡಿ, ಕಾಳಪ್ಪ, ಬೆಸ್ಕಾಂ ಎಸ್‍ಓಗಳಾದ ರಂಗನಾಥ್, ಅಭಿಷೇಕ್, ಪಿಎಸ್‍ಐ ಸಾಗರ್, ಲೋಕೇಶ್ ಸೇರಿದಂತೆ ಮತ್ತಿತರರಿದ್ದರು.