suddivijayanew13/07/2024
ಸುದ್ದಿವಿಜಯ, ಜಗಳೂರು: ಗುಣಮಟ್ಟದ, ಸುಸಜ್ಜಿತ ಕಾಮಗಾರಿ ಮಾಡದೇ ಇದ್ದರೆ ಸರಕಾರದಿಂದ ಯಾವುದೇ ಕಾರಣಕ್ಕೂ ಹಣ ಬಿಡುಗಡೆ ಮಾಡಿಸುವುದಿಲ್ಲ ಎಂದು ಶಾಸಕ ಬಿ.ದೇವೇಂದ್ರಪ್ಪ ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದರು.
ಪಟ್ಟಣದ ಎಸ್‍ಎಸ್ ಲೇಔಟ್‍ನಲ್ಲಿ ಶನಿವಾರ ಡಾ.ಬಾಬೂ ಜಗಜೀವನ್ ರಾಂ ಛತ್ರವಾಸ್ ಯೋಜನೆಯಿಂದ ಕೇಂದ್ರ ಮತ್ತು ರಾಜ್ಯ ಸರಕಾರಗಳ ಅನುದಾದ ಅಡಿ 4.33 ಕೋಟಿ ರೂ ವೆಚ್ಚದ ಸಮಾಜ ಕಲ್ಯಾಣ ಇಲಾಖೆಯ ಸರಕಾರಿ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.ತಾಲೂಕಿನಲ್ಲೇ ಇದೇ ಮೊದಲ ಬಾರಿಗೆ ಡಾ.ಬಾಬೂಜಿ ಛತ್ರವಾಸ್ ಯೋಜನೆ ಅಡಿಯಲ್ಲಿ ಕೇಂದ್ರದ ಶೇ.60 ಪಾಲು ಮತ್ತು ರಾಜ್ಯ ಸರಕಾರದ ಶೇ.40 ಪಾಲಿನಲ್ಲಿ ಈ ಬೃಹತ್ ವಿದ್ಯಾರ್ಥಿ ನಿಲಯ ನಿರ್ಮಾಣ ಕಾಮಗಾರಿಗೆ ಚಾಲನೆ ಸಿಕ್ಕಿದ್ದು, ಗುತ್ತಿಗೆ ಪಡೆದ ಬೆಂಗಳೂರಿನ ಅಪ್ಪಾಜಿ ಬಿಲ್ಡರ್ಸ್ ವಹಿಸಿಕೊಂಡಿದೆ.
ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು. ಒಂದು ವೇಳೆ ಸರಕಾರದ ನಿಯಮಗಳ ವಿರುದ್ಧವಾಗಿ ಕಳಪೆ ಕಾಮಗಾರಿ ನಡೆದಿದ್ದು ಕಂಡು ಬಂದರೆ ಯಾವುದೇ ಕಾರಣಕ್ಕೂ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡಿಸುವುದಿಲ್ಲ ಎಂದರು.
ಪಲ್ಲಾಗಟ್ಟೆ ಹಾಸ್ಟೆಲ್ ಬಿಲ್‍ಮಾಡಬೇಡಿ:
ಮೂರು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಪಲ್ಲಾಗಟ್ಟೆ ವಿದ್ಯಾರ್ಥಿನಿಲಯ ಹಾಸ್ಟೆಲ್ ಮೂಲಸೌಲಭ್ಯ ಕಲ್ಪಿಸಿಲ್ಲ. ಗುತ್ತಿಗೆದಾರ ಸರಿಯಾಗಿ ಕೆಲಸ ಮಾಡಿಲ್ಲ. ಹೆಣ್ಣು ಮಕ್ಕಳ ಕಷ್ಟ ನಿಮಗೆ ಅರ್ಥವಾಗಲ್ಲ. ಕ್ರೈಸ್ ಅಧಿಕಾರಿಗಳಾಗಲಿ. ಎಂಜಿನಿಯರ್, ಗುತ್ತಿಗೆದಾರನಿಗೆ ಯಾವುದೇ ಕಾರಣಕ್ಕೂ ಬಿಲ್ ಮಾಡುವಂತಿಲ್ಲ ಎಂದು ಶಾಸಕ ಬಿ.ದೇವೇಂದ್ರಪ್ಪ ಎಚ್ಚರಿಕೆ ನೀಡದರು.
ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಡಿಡಿ ನಾಗರಾಜ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್, ಪಪಂ ಚೀಫ್ ಆಫೀಸರ್ ಲೋಕ್ಯಾನಾಯ್ಕ್, ಬೆಂಗಳೂರು ಕ್ರೈಸ್ ಎಇಇ ರಾಮು, ಗುತ್ತಿಗೆದಾರ ರಾಮಕೃಷ್ಣ, ಪಪಂ ಸದಸ್ಯರಾದ ರಮೇಶ್‍ರೆಡ್ಡಿ, ಮಹಮದ್ ಅಲಿ, ಅರಿಶಿಣಗುಂಡಿ, ನಿವೃತ್ತ ಸಮಾಜ ಕಲ್ಯಾಣಾಧಿಕಾರಿ ಬಿ.ಮಹೇಶ್ವರಪ್ಪ, ಲಲಿತಾ ಶಿವಣ್ಣ, ಶ್ರೀಧರ್ ಸೇರಿಂತೆ ಅನೇಕರು ಇದ್ದರು