ಸುದ್ದಿವಿಜಯ,ಜಗಳೂರು: ನಾನು ಕಟ್ಟಿದ ಹುತ್ತಕ್ಕೆ ಬೇರೊಂದು ಹಾವು ಸೇರಿಕೊಂಡಿದೆ’ ಎಂಬ ಮಾಜಿ ಶಾಸಕ ಎಚ್ .ಪಿ ರಾಜೇಶ್ ಹೇಳಿಕೆಯಲ್ಲಿ ಸತ್ಯವಿಲ್ಲ.
ಕಾಂಗ್ರೆಸ್ ಪಕ್ಷಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಜನರ ಆಯ್ಕೆ ಮಾಡಿ ವಿಧಾನಸೌಧಕ್ಕೆ ಕಳಿಸಿದ್ದಾರೆ. ಯಾರು ಹುತ್ತನೂ ಅಲ್ಲ, ಹಾವು ಅಲ್ಲ ಎಂದು ಶಾಸಕ ಬಿ. ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ ಟಾಂಗ್ ನೀಡಿದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಕಾಂಗ್ರೆಸ್ ಪಕ್ಷ ಸಮುದ್ರವಿದ್ದಂತೆ ಇಲ್ಲಿ ಸಾಕಷ್ಟು ಜನ ದಂಡೆ ಹೊಂದಿದೆ. ಕಾಂಗ್ರೆಸ್ ಪಕ್ಷವನ್ನು ಕಟ್ಟಿದ್ದು ತಾವೆಂದು ಬಿಂಬಿಸಿಕೊಳ್ಳುವುದು ಎಷ್ಟು ಸರಿ.
2011ರ ಉಪ ಚುನಾವಣೆಯಲ್ಲಿ ನನ್ನ ಹೆಸರಿನ ಅರಸಿಕೆರೆ ದೇವೇಂದ್ರಪ್ಪ ಕಾಂಗ್ರೆಸ್‌ನಿಂದ ಎಚ್.ಪಿ ರಾಜೇಶ್ ಪಕ್ಷೇತರರಾಗಿ ಸ್ಪರ್ಧಿಸಿದ್ದರು.
2013ರಲ್ಲಿ ರಲ್ಲಿ ಕಾಂಗ್ರೆಸ್ ಸೇರಿಕೊಂಡ ಶಾಸಕರಾಗಿ ಆಯ್ಕೆಯಾಗಿದ್ದರು. ಆಗ ಅವರು ಗೆದ್ದಲು ಕಟ್ಟಿದ ಹುತ್ತದಲ್ಲಿ ಹಾವು ಆಗಿದ್ದರಾ ಎಂದು ಪ್ರಶ್ನಿಸಿದ ಅವರು ಮಾಜಿ ಶಾಸಕರು ಹುತ್ತ ಅಲ್ಲ, ನಾನೂ ಹಾವು ಅಲ್ಲ ಎಂದರು.
ಮಾಜಿ ಶಾಸಕರಾದ ಟಿ. ಗುರುಸಿದ್ದನಗೌಡ, ಎಸ್.ವಿ ರಾಮಚಂದ್ರ, ಎಚ್.ಪಿ ರಾಜೇಶ್ ಸೇರಿದಂತೆ ಹಿರಿಯರ ಸಲಹೆ ಸಹಕಾರ ಪಡೆದು ಕ್ಷೇತ್ರದ ಅಭಿವೃದ್ದಿಗಾಗಿ ಶ್ರಮಿಸೋಣ.
ನಾನೂ ಒಬ್ಬ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ಅಷ್ಟೆ, ಜನರ ಸೇವೆ ಮಾಡಲು ಮತದಾರರು ಒಂದು ಅವಕಾಶ ನೀಡಿದ್ದಾರೆ ಅವರ ಋಣ ತೀರಿಸುವುದು ನನ್ನ ಕರ್ತವ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಷೀರ್ ಅಹಮದ್, ಮುಖಂಡರಾದ ಸಿ. ತಿಪ್ಪೇಸ್ವಾಮಿ, ಮಹಮದ್‌ಗೌಸ್, ಜಗಳೂರಯ್ಯ, ತಿಮ್ಮಣ್ಣ, ಕೊರಟಿಕೆರೆ ಗುರುಸಿದ್ದನಗೌಡ, ಅನುಪ್, ಗಿರೀಶ್, ರಮೇಶ್ ಸೇರಿದಂತೆ ಮತ್ತಿತರಿದ್ದರು.