ಮೆಕ್ಕೆಜೋಳದ ಹೊಲದಲ್ಲಿ ದೀಪಾವಳಿ ಸಂಭ್ರಮ, ಯಾಕೆ ಗೊತ್ತಾ?

Suddivijaya
Suddivijaya November 9, 2022
Updated 2022/11/09 at 6:33 AM

ಸುದ್ದಿವಿಜಯ, ಜಗಳೂರು: ಈ ಬಾರಿ ಉತ್ತಮ ಮಳೆಯಿಂದ ಜಗಳೂರು ತಾಲೂಕಿನಲ್ಲಿ ಮೆಕ್ಕೆಜೋಳ ಬಂಪರ್ ಬೆಳೆ ಬಂದಿದ್ದು ಅರಿಶಿಣಗುಂಡಿ ಗ್ರಾಮದ ಕರಿಬಸಪ್ಪ ಅವರು ಎಕರೆಗೆ 30 ಕ್ವಿಂಟಾಲ್ ಮೆಕ್ಕೆಜೋಳ ಬೆಳೆದಿದ್ದು ಹೊಲದಲ್ಲೇ ದೀಪಾವಳಿ ಆಚರಿಸಿದರು.

ಸಮಸೀತೋಷ್ಣವಲಯವಾಗಿರುವ ಜಗಳೂರು ತಾಲೂಕಿನಲ್ಲಿ ಅಧಿಕ ಮಳೆಯಾಗಿದ್ದರೂ ದಾವಣಗೆರೆ ಜಿಲ್ಲೆಯ ಬೇರೆ ತಾಲೂಕುಗಳಿಗೆ ಹೋಲಿಸಿಕೊಂಡರೆ ಈ ಭಾರಿ ಮೆಕ್ಕೆಜೋಳ ಅಧಿಕ ಇಳುವರಿ ಬಂದಿದೆ. ಹೀಗಾಗಿ ದೀಪಾವಳಿ ಸಂಭ್ರಮ ಜೋರಾಗಿತ್ತು.

ಹೊಲದಲ್ಲಿ ಮೆಕ್ಕೆಜೋಳದ ಸಿಪ್ಪೆ ತೆನೆ ಸುಳಿದು ಸಿಂಗಾರ ಮಾಡಿ ಸಂಭ್ರಮದಿಂದ ದೀಪಾವಳಿ ಆಚರಿಸಿದ್ದಾರೆ ರೈತ ಕರಿಬಸಪ್ಪ. ಅರಿಶಿಣಗುಂಡಿ ತಾಲೂಕಿನಲ್ಲೇ ಮಲೆನಾಡು ವಾತಾವರಣವಿದೆ. ಕಾರಣ ಗ್ರಾಮದ ಪ್ರತಿ ಮನೆಯಲ್ಲಿ ಅಡಕೆ ತೋಟಗಳಿಲ್ಲದ ರೈತರಿಲ್ಲ. ಈ ಭಾರಿ 8 ಕೋಟಿ ರೂ.ಗು ಹೆಚ್ಚು ಅಡಕೆ ಬೆಳೆದಿದ್ದಾರೆ. ಅದರ ಮಧ್ಯೆ ಅಡಕೆ ಹಾಕದೇ ಖಾಲಿ ಇರುವ ಒಂದೆರಡು ಎಕರೆ ಜಮೀನುಗಳಲ್ಲಿ ಮೆಕ್ಕೆಜೋಳವೂ ಬಂಪರ್ ಬೆಳೆ ಬಂದಿದೆ.

ಎನ್‍ಕೆ6540 ತಳಿಯ ಮೆಕ್ಕೆಜೋಳ ಬೀಜವನ್ನು ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ್ದ ಕರಿಬಸಪ್ಪ ಅವರು ಎಕರೆಗೆ 30 ಕ್ವಿಂಟಾಲ್ ಬೆಳೆ ನಿರೀಕ್ಷೆಯಲ್ಲಿದ್ದಾರೆ. ಹೀಗಾಗಿ ಸಿಂಜೆಂಟಾ ಕಂಪನಿಯ ವತಿಯಿಂದ ಕ್ಷೇತ್ರೋತ್ಸವ ಆಚರಿಸಲಾಯಿತು. ಎನ್.ಎಕೆ 6540 ತಳಿಯು ಮಳೆಯಾಶ್ರಿತ ಬೆಳೆಯಾಗಿದ್ದು. ಜಗಳೂರಿನಲ್ಲಿ ಕಡಿಮೆ ಮಳೆಯಾದರೂ ಸರಿ ಇದು ಈ ಭಾಗಕ್ಕೆ ಹೊಂದಿಕೊಳ್ಳುತ್ತದೆ.

ಸಮನಾಂತರ ಮತ್ತು ಉದ್ದನೆಯ ತನೆಯಾಗಿದ್ದು ತುದಿಯವರೆಗೆ ಕಾಳು ಕಟ್ಟುತ್ತದೆ. ಜಗಳೂರು-ಹರಪನಹಳ್ಳಿ ಭಾಗದಲ್ಲಿ ಹೆಚ್ಚು ಬಿತ್ತನೆ ಮಾಡಲಾಗುತ್ತದೆ. ಅತಿ ಹೆಚ್ಚು ಒಕ್ಕಣೆ ಪ್ರಮಾಣವನ್ನು ಹೊಂದಿದೆ. ದೀರ್ಘವಾದ ಶೇಖರಣೆ ಹೊಂದಬಹುದು. ಫಂಗಸ್ ಬರುವ ಪ್ರಮಾಣ ಬಹಳ ಕಡಿಮೆಯಾಗಿದೆ.

ಕಾಲಕಾಲಕ್ಕೆ ಗೊಬ್ಬರ ಬಳಕೆ ಮಾಡಿದರೆ ಹೆಚ್ಚಿನ ಪ್ರಮಾಣದಲ್ಲಿ ಉತ್ಕøಷ್ಟ ಗುಣಮಟ್ಟದ ಬೆಳೆ ಬೆಳೆಯಬಹುದು.ಅತಿ ಹೆಚ್ಚು ಮಳೆ ಬೀಳುವ ಬಿಳಿಚೋಡು ಹೋಬಳಿಯ ಭಾಗದಲ್ಲಿ ಈ ತಳಿಯ ಮೆಕ್ಕೆಜೋಳ ಬೀಜ ಎಕರೆಗೆ 35 ಕ್ವಿಂಟಾಲ್ ಬೆಳೆಯಬಹುದು ಎನ್ನುತ್ತಾರೆ ಕಂಪನಿಯ ಏರಿಯಾ ಮೇನೇಜರ್ ನಾಗನಗೌಡ ಪಾಟೀಲ್.

ಮೆಕ್ಕೆಜೋಳದ ತೆನೆಯಲ್ಲಿ ರಂಗೋಲಿ:
ಅಧಿಕ ಇಳುವರಿ ಬಂದಿರುವ ರೈತ ಕರಿಬಸಪ್ಪ ಅವರ ಹೊಲದಲ್ಲಿ ಬುಧವಾರ ಎನ್‍ಕೆ 6540 ತಳಿಯ ಮೆಕ್ಕೆಜೋಳಿಂದ ರಂಗೋಲಿ ಬಿಡಿಸಿ ರೈತರನ್ನು ಕೂಡಿಸಿ ಕ್ಷೇತ್ರೋತ್ಸವ ಮಾಡಿ ಜಾಗೃತಿ ಮೂಡಿಸಿದ್ದು ವಿಶೇಷವಾಗಿತ್ತು. ಸಿಹಿ ಹಂಚಿ ಅಲ್ಲೇ ದೀಪಾವಳಿ ಹಬ್ಬ ಆಚರಿಸಿದ್ದು ಮತ್ತೊಂದು ವಿಶೇಷವಾಗಿತ್ತು.

 ಜಗಳೂರು ತಾಲೂಕಿನ ಅರಿಶಿಣಗುಂಡಿ ಗ್ರಾಮದಲ್ಲಿ ರೈತ ಕರಿಬಸಪ್ಪ ಬೆಳೆದ ಮೆಕ್ಕೆಜೋಳದಲ್ಲಿ ತೆನೆಯಲ್ಲೇ ರಂಗೋಲಿ ಬಿಡಿಸಿ ದೀಪಾವಳಿ ಹಬ್ಬ ಆಚರಿಸಲಾಯಿತು.
 ಜಗಳೂರು ತಾಲೂಕಿನ ಅರಿಶಿಣಗುಂಡಿ ಗ್ರಾಮದಲ್ಲಿ ರೈತ ಕರಿಬಸಪ್ಪ ಬೆಳೆದ ಮೆಕ್ಕೆಜೋಳದಲ್ಲಿ ತೆನೆಯಲ್ಲೇ ರಂಗೋಲಿ ಬಿಡಿಸಿ ದೀಪಾವಳಿ ಹಬ್ಬ ಆಚರಿಸಲಾಯಿತು.

 

 

 

Share this Article
Leave a comment

Leave a Reply

Your email address will not be published. Required fields are marked *

error: Content is protected !!