ಸುದ್ದಿವಿಜಯ,ಜಗಳೂರು: ಕಾಂಗ್ರೆಸ್ ಟಿಕೆಟ್ ಸಿಗದ ಹಿನ್ನೆಲೆ ಮಾಜಿ ಶಾಸಕ ಎಚ್.ಪಿ.ರಾಜೇಶ್ ಮತ್ತು ಕಾಂಗ್ರೆಸ್ ಅಭ್ಯರ್ಥಿ ಬಿ.ದೇವೇಂದ್ರಪ್ಪ ಬುಧವಾರ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸದರು.
ಪಟ್ಟಣದ ತಾಲೂಕು ಕಚೇರಿಯಲ್ಲಿ ಮಂಗಳವಾರ ಸಾಂಕೇತಿಕವಾಗಿ ಚುನಾವಣಾಧಿಕಾರಿ ಎಸ್.ರವಿ ಅವರಿಗೆ ಇಬ್ಬರು ಅಭ್ಯರ್ಥಿಗಳು ನಾಮಪತ್ರಸಲ್ಲಿಸಿದರು.
ನಂತರ ಪತ್ರಕರ್ತರೊಂದಿಗೆ ಮಾಜಿ ಶಾಸಕ ಎಚ್.ಪಿ.ರಾಜೇಶ್ ಮಾತನಾಡಿ, ನನಗೆ ಕಾಂಗ್ರೆಸ್ ಪಕ್ಷದ ವರಿಷ್ಠರಿಂದ ನಾಮಪತ್ರ ಸಲ್ಲಿಸದಂತೆ ಯಾವುದೇ ಒತ್ತಡ ಬಂದಿಲ್ಲ.
ದೇವರ, ಜನರ ಆಶೀರ್ವಾದದಿಂದ ನಾಮಪತ್ರ ಸಲ್ಲಿಸಿದ್ದೇನೆ. ಮತದಾರರ ತೀರ್ಪಿಗೆ ಬದ್ಧನಾಗಿದ್ದೇನೆ. 2008 ರಿಂದ ವಿವಿಧ ಪಕ್ಷಗಳ ಅಡಿ ಚುನಾವಣೆಗೆ ಬಂದಿದ್ದೇನೆ.
2013ರಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದೆ. 2018ರಲ್ಲೂ ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡಿದೆ.
ನನಗೆ ಟಿಕೆಟ್ ಸಿಗದ ಹಿನ್ನೆಲೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ನೋವಾಗಿದೆ. ನಾನು ಶಾಸಕನಾಗಿದ್ದಾಗ ಮಾಡಿದ ಅಭಿವೃದ್ಧಿ ಆಧಾರಿತ ಮತ ಕೇಳುತ್ತೇನೆ.
ಜನರ ಒತ್ತಾಸೆಯ ಮೇರೆಗೆ ಚುನಾವಣೆಗೆ ಸ್ಪರ್ಧೆಗೆ ಮಾಡಿಡುತ್ತಿದ್ದೇನೆ. ಕ್ಷೇತ್ರದಲ್ಲಿ ರಾಜೇಶ್ ಮತ್ತು ರಾಮಚಂದ್ರ ಇಬ್ಬರಿಗೆ ಮಾತ್ರ ಫೈಟ್.
2008 ರಿಂದ ಇಲ್ಲಿಯವರೆಗೆ ಇಲ್ಲಿಯವರೆಗೆ 5 ಚುನಾವಣೆ ಮಾಡಿದ್ದೇನೆ. ನನ್ನ ಸ್ಪರ್ಧೆ ಇರೋದು ಕೇವಲ ರಾಮಚಂದ್ರ ವಿರುದ್ಧ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಗ್ಗೆ ನಾನೇನು ಹೇಳಲ್ಲ.
ಕ್ಷೇತ್ರದಲ್ಲಿ ರಾಜೇಶ್ ಅಲೆ ಇದೆ. ಜನ ಮತದಾರರು ಕೈ ಬಿಡಲ್ಲ. ಬುಧವಾರ ಅಂದಾಜು 20 ಸಾವಿರ ಜನರೊಂದಿಗೆ ಮೆರವಣಿಗೆ ಮೂಲಕ ಮತ್ತೊಮ್ಮೆ ಅಧಿಕೃತವಾಗಿ ನಾಮಪತ್ರ ಸಲ್ಲಿಸುತ್ತೇನೆ.
ಚುನಾವಣಾ ಆಯೋಗಕ್ಕೆ ಮೂರು ಚಿಹ್ನೆ ಸೂಚಿಸಿದ್ದು ಅದಲ್ಲಿ ಒಂದನ್ನು ಆಯ್ಕೆ ಮಾಡಿಕೊಂಡು ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ ಎಂದರು.
ಈ ವೇಳೆ ಎಚ್.ಪಿ.ರಾಜೇಶ್ ಅವರಿಗೆ ಬೆಂಬಲಿಗ ಎಲ್.ಬಿ.ಭೈರೇಶ್ ಅವರು 10 ಸಾವಿರ ರೂ ದೇಣಿಗೆ ನೀಡಿದರು. ಅನೇಕ ಅಭಿಮಾನಿಗಳು, ಬೆಂಬಲಿಗರು ಇದ್ದರು.
ಬಿ.ದೇವೇಂದ್ರಪ್ಪ ನಾಮಪತ್ರ ಸಲ್ಲಿಕೆ
ಕಾಂಗ್ರೆಸ್ ಅಧಿಕೃತ ಅಭ್ಯರ್ಥಿ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ ಅವರು ಮಂಗಳವಾರ ಸಾಂಕೇತಿಕವಾಗಿ ನಾಮಪತ್ರಸಲ್ಲಿಸಿದರು.
ಅಧಿಕೃತವಾಗಿ ಕಾಂಗ್ರೆಸ್ ಪಕ್ಷದ ಬಿ ಫಾರ್ಮ್ ನೊಂದಿಗೆ ಗುರುವಾರ ಅಪಾರ ಕಾರ್ಯಕರ್ತರೊಂದಿಗೆ, ಬೆಂಬಲಿಗರೊಂದಿಗೆ ಅವರು ಉಮೇದುವಾರಿಕೆ ಸಲ್ಲಿಸಲಿದ್ದಾರೆ.
ಮಂಗಳವಾರ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ ಅವರು ಟಿಕೆಟ್ ಸಿಕ್ಕ ಹಿನ್ನೆಲೆ ಶಾಮನೂರು ಶಿವಶಂಕರಪ್ಪ, ಎಸ್‍ಎಸ್‍ಎಂ ಅವರ ದಾವಣಗೆರೆ ನಿವಾಸಕ್ಕೆ ತೆರಳಿ ಆಶೀರ್ವಾದ ಪಡೆದರು.
ಅಷ್ಟೇ ಅಲ್ಲದೇ ನಾಯಕನಟ್ಟಿ ತಿಪ್ಪೇರುದ್ರಸ್ವಾಮಿ ದೇವಸ್ಥಾನ ಸೇರಿದಂತೆ ಅನೇಕ ದೇವಸ್ಥಾನಗಳಿಗೆ ಟೆಂಪಲ್ ರನ್ ಮಾಡಿದರು. ಇದೇ ವೇಳೆ ಕೆಪಿಸಿಸಿ ಎಸ್‍ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ, ಷಂಷೀರ್ ಅಹ್ಮದ್ ಸೇರಿದಂತೆ ಅನೇಕರು ಇದ್ದರು.