ಸುದ್ದಿವಿಜಯ, ಜಗಳೂರು: ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಸದ್ಯದ ಪರಿಸ್ಥಿತಿಯಂತೆ ಮಳೆ ಬರುವ ಮುನ್ಸೂಚನೆ ಇಲ್ಲದ ಕಾರಣ ರೈತರು ಯಾವುದೇ ಕಾರಣಕ್ಕೂ ಬಿತ್ತನೆ ಕಾರ್ಯದಲ್ಲಿ ತೊಡಗಬಾರದು ಎಂದು ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕ ಮಿಥುನ್ ಕಿಮಾವತ್ ತಿಳಿಸಿದ್ದಾರೆ.
ಕಳೆದ ವರ್ಷ 2022-23ನೇ ಸಾಲಿನಲ್ಲಿ ಜೂನ್ ತಿಂಗಳಲ್ಲಿ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ವರದಿಗಳ ಪ್ರಕಾರ ಹತ್ತಿ 1364 ಹೆಕ್ಟೇರ್, ಜೋಳ 149 ಹೆಕ್ಟೇರ್, ಮೆಕ್ಕೆಜೋಳ 31500, ಸೋಯಾಬೀನ್ 4.70 ಹೆಕ್ಟೇರ್, ಸೂರ್ಯಕಾಂತಿ 852 ಹೆಕ್ಟೇರ್, ತೊಗರಿ 305 ಹೆಕ್ಟೇರ್, ಶೇಂಗಾ-850 ಹೆಕ್ಟೇರ್, ಒಟ್ಟು 35024 ಹೆಕ್ಟೇರ್ ಬಿತ್ತನೆ ಮಾಡಲಾಗಿತ್ತು.
2023-24ನೇ ಪ್ರಸ್ತುತ ಸಾಲಿನಲ್ಲಿ ಹತ್ತಿ-750 ಹೆಕ್ಟೇರ್, ಜೋಳ-35 ಹೆಕ್ಟೇರ್, ಮೆಕ್ಕೆಜೋಳ10250 ಹೆಕ್ಟೇರ್, ಸೂರ್ಯಕಾಂತಿ-20 ಹೆಕ್ಟೇರ್, ತೊಗರಿ 65 ಹೆಕ್ಟೇರ್ ಒಟ್ಟು 11135 ಹೆಕ್ಟೇರ್ ಬಿತ್ತನೆ ಮಾಡಲಾಗಿದೆ.
ಮಳೆಯ ಪ್ರಮಾಣ (16/6/2023)
ವಾಡಿಕೆಯ ಮಳೆ-126.7 ಮಿಮೀ
ವಾಸ್ತವ 82.3 ಮಿಮೀ
ಶೇ.35 ರಷ್ಟು ಕಡಿಮೆ ಮಳೆ
ಮಳೆಯ ಪ್ರಮಾಣ (16/6/2022 ಕಳೆದ ವರ್ಷ)
ವಾಡಿಕೆ ಮಳೆ-126.7 ಮಿಮೀ
ವಾಸ್ತವ ಮಳೆ-308 ಮಿಮೀ
118ರಷ್ಟು ಮಳೆಯ ಪ್ರಮಾಣ ಹೆಚ್ಚಳವಾಗಿತ್ತು.
ಹೀಗಾಗಿ ಮಳೆ ಬಂದ ನಂತರ ಮಣ್ಣಿನಲ್ಲಿ ಸಾಕಷ್ಟು ತೇವಾಂಶ ಇರುವುದನ್ನು ದೃಡಪಡಿಸಿಕೊಂಡು ಬಿತ್ತನೆ ಮಾಡಲು ರೈತರು ಮುಂದಾಗಬೇಕು. ಗೊಬ್ಬರ, ಬಿತ್ತನೆ ಬೀಜಗಳು ಸಕಾಲಕ್ಕೆ ಲಭ್ಯವಿದ್ದು ಖರೀದಿಸಿ ದಾಸ್ತಾನು ಮಾಡಿಕೊಳ್ಳಿ ಎಂದು ರೈತರಿಗೆ ಮಾಹಿತಿ ನೀಡಿದ್ದಾರೆ.