ಸುದ್ದಿವಿಜಯ, ಜಗಳೂರು: ತಾಲೂಕು ನ್ಯಾಯಬೆಲೆ ಪಡಿತರ ವಿತರಕರ ಸಂಘದ ಅಧ್ಯಕ್ಷರಾಗಿ ಬಿಳಿಚೋಡು ಗ್ರಾಮದ ಎನ್.ಓಮಣ್ಣ ಅವಿರೋಧವಾಗಿ ಆಯ್ಕೆಯಾದರು.
ಪಟ್ಟಣದ ಕೆಎಫ್‍ಸಿಸಿ ಕಚೇರಿಯಲ್ಲಿ ಗುರುವಾರ ನಡೆದ ಸಭೆಯಲ್ಲಿ ತಾಲೂಕಿನ ಎಲ್ಲ ನ್ಯಾಯಬೆಲೆ ಅಂಗಡಿ ಮಾಲೀಕರು ಸರ್ವಾನುಮತದಿಂದ ಎನ್.ಓಮಣ್ಣ ಅವರನ್ನು ಆಯ್ಕೆ ಮಾಡಿದರು.ಕಾರ್ಯದರ್ಶಿಯಾಗಿ ತೋರಣಗಟ್ಟೆ ಗ್ರಾಮದ ಎಚ್.ರುದ್ರಮುನಿ, ಗೌರವಾಧ್ಯಕ್ಷರಾಗಿ ಸಿದ್ದೀಹಳ್ಳಿ ಧನಂಜಯರೆಡ್ಡಿ, ಪ್ರಧಾನ ಕಾರ್ಯದರ್ಶಿಯಾಗಿ ಮರೀಕುಂಟೆ ಬಿ.ವಿ.ಬಸವರಾಜ್, ಖಜಾಂಚಿಯಾಗಿ ಮೆದಗಿನಕೆರೆ ಎಂ.ಸಿ.ನಾಗರಾಜ್ ಅವಿರೋಧವಾಗಿ ಆಯ್ಕೆಯಾದರು.
ಇದೇ ವೇಳೆ ಮಾತನಾಡಿದ ನೂತನ ಅಧ್ಯಕ್ಷ ಓಮಣ್ಣ, ಕಳೆದ ನಾಲ್ಕೈದು ತಿಂಗಳಿಂದ ಪಡಿತರ ವಿತರಕರಿಗೆ ಸರಕರದಿಂದ ಬರುವ ಕಮಿಷನ್ ಸಿಕ್ಕಿಲ್ಲ. ಸಂಕಷ್ಟದಲ್ಲಿರುವ ಮಾಲೀಕರಿಗೆ ಸರಕಾರದಿಂದ ಕಮಿಷನ್ ಮತ್ತು ಸೌಲಭ್ಯ ದೊರಕಿಸಿಕೊಡುವ ಪ್ರಯತ್ನ ಮಾಡುತ್ತೇವೆ ಎಂದರು.
ಕಾರ್ಯದರ್ಶಿ ತೋರಣಗಟ್ಟೆ ಗ್ರಾಮದ ಎಚ್.ರುದ್ರಮುನಿ ಮಾತನಾಡಿ, ಕೋವಿಡ್ ಬರುವ ಮುಂಚೆ ಸರಕಾರ ಸರಿಯಾಗಿ ಕಮಿಷನ್ ಕೊಡುತ್ತಿತ್ತು. ಆದರೆ ಈಗ ಆರು ತಿಂಗಳಿಗೊಮ್ಮೆ ಕಮಿಷನ್ ನೀಡುತ್ತಿದೆ. ಹೀಗಾದರೆ ನಮ್ಮ ಸಂಸಾರದ ಬಂಡಿ ಸಾಗಿಸುವುದು ಹೇಗೆ ಎಂದು ಪ್ರಶ್ನಸಿದರು. ತಕ್ಷಣವೇ ಇಲಾಖೆ ಅಧಿಕಾರಿಗಳು ನಮ್ಮ ಸಮಸ್ಯೆಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.
ಇನ್ನು ಜಗಳೂರು ತಾಲೂಕು ನ್ಯಾಯಬೆಲೆ ಅಂಗಡಿ ಮಾಲೀಕರ ಮತ್ತು ನೌಕರರ ಪತ್ತಿನ ಸಹಕಾರ ಸಂಘ ಅಧ್ಯಕ್ಷರಾಗಿ ಗೌಡಗೊಂಡನಹಳ್ಳಿ ಗ್ರಾಮದ ಆರ್.ವಿ.ಬಸವರಾಜ, ಉಪಾಧ್ಯಕ್ಷರಾಗಿ ಬಿಳಿಚೋಡು ಗ್ರಾಮದ ಎಲ್.ಬಿ.ಚಂದ್ರಶೇಖರಪ್ಪ ಆಯ್ಕೆಯಾಗಿದ್ದಾರೆ.ಸಭೆಯಲ್ಲಿ ನ್ಯಾಯಬೆಲೆ ಅಂಗಡಿ ಮಾಲೀಕರಾದ ಸಿದ್ದಪ್ಪ, ಟಿ.ಚಂದ್ರಪ್ಪ. ರವೀಂದ್ರರೆಡ್ಡಿ, ನಿಜಲಿಂಗಪ್ಪ, ಯಲ್ಲಪ್ಪ, ರವಿಕುಮಾರ್, ಭೀಮಶೆಟ್ಟಿ, ಸತ್ಯಪ್ಪನಾಯಕ, ಬಸವನಗೌಡ, ಅಡಿವೆಪ್ಪ ಸೇರಿದಂತೆ ಎಲ್ಲ ನ್ಯಾಯಬೆಲೆ ಅಂಗಡಿ ಮಾಲೀಕರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.