ಸುದ್ದಿವಿಜಯ, ಜಗಳೂರು: ಭೂಮಿಯ ವಾತಾವರಣದಲ್ಲಿರುವ ಓಝೋನ್ ಪದರವು ಸೂರ್ಯನ ಹಾನಿಕಾರಕ ನೇರಳಾತೀತ ಕಿರಣಗಳಿಂದ ಪೃಥ್ವಿಯ ರಕ್ಷಿಸುತ್ತದೆ. ಮಾನವನ ದುರಾಸೆಯಿಂದ ಓಝೋನ್ ಪದರಕ್ಕೆ ಹಾನಿಯಾಗುತ್ತಿದ್ದು ಅದರ ರಕ್ಷಣೆಗೆ ಸ್ವಚ್ಛತೆ ಕಾಮಾಡಿ, ಹಾನಿಕಾರಕ ಕ್ಲೋರೋಫೋರೊ ಕಾರ್ಬನ್‍ಗಳಾಗಿದ್ದು ಎಸಿ, ರೆಫ್ರಿಜೇಟರ್ ಮಿತವಾಗಿ ಬಳಸಿ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.
ಪಪಂ, ಸ್ವಚ್ಛಭಾರತ್ ಮಿಷನ್, ಇಂಡಿಯನ್ ಸ್ವಚ್ಛತಾ ಲೀಗ್ ಸೀಸನ್-02 ಸಂಯುಕ್ತ ಆಶ್ರಯದಲ್ಲಿ ವಿಶ್ವ ಓಝೋನ್ ದಿನ ಮತ್ತು ತ್ಯಾಜ್ಯ ವಿಂಗಡಣೆ ಅಭಿಯಾನ ಹಾಗೂ ಸ್ವಚ್ಛತಾ ಕಾರ್ಯಕ್ರಮಕ್ಕೆ ಪಟ್ಟಣದ ಸಂತೆ ಮೈದಾನದಲ್ಲಿ ಭಾನುವಾರ ಚಾಲನೆ ನೀಡಿ ಮಾತನಾಡಿದರು.
ಜಗತ್ತಿನಾದ್ಯಂತ ಓಝೋನ್ ರಕ್ಷಣೆ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿವೆ. ಮಕ್ಕಳಲ್ಲಿ ಓಝೋನ್ ಪದರ ರಕ್ಷಣೆ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಗಳೂರು ತಾಲೂಕಿನಲ್ಲಿ ಪ್ರಾಥಮಿಕ, ಪ್ರೌಢ, ಪಿಯು ಮತ್ತು ಪದವಿ ವಿದ್ಯಾರ್ಥಿಗಳಿಗೆ ಶೀಘ್ರವೇ ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿದೆ.ಅದರ ಬಗ್ಗೆ ಚರ್ಚಿಸಲು ಬಿಇಒ ನೇತೃತ್ವದಲ್ಲಿ ಸಭೆ ನಡೆಸಿ ಕಮಿತಿ ರಚಿಸಿ ಪ್ರಶ್ನೆ ಪತ್ರಿಕೆ ತಯಾರಿಸುವ ಕೆಲಸದ ಜವಾಬ್ದಾರಿಯನ್ನು ಎನ್‍ಎಂಕೆ ಶಾಲೆ ಕಾರ್ಯದರ್ಶಿ ಎನ್.ಎಂ.ಲೋಕೇಶ್‍ಗೆ ಜವಾಬ್ದಾರಿ ನೀಡಿದ್ದೇನೆ. ನಾಲ್ಕು ಹಂತಗಳಲ್ಲಿ ಪ್ರಬಂಧ ಸ್ಪರ್ಧೆ ನಡೆಯಲಿದ್ದು ಸೂಕ್ತ ಬಹುಮಾನ ನೀಡಲಾಗುವುದು ಎಂದರು.
ಕೋವಿಡ್ ಸಂದರ್ಭದಲ್ಲಿ ಆಕ್ಸಿಜನ್ ಎಷ್ಟು ಮುಖ್ಯ ಎಂಬುದು ಜನರು ಅರ್ಥಮಾಡಿಕೊಂಡಿದ್ದಾರೆ. ಹಸಿ, ಒಣ ಕಸ ವಿಂಗಡಣೆ ಮಾಡಿ ಪೌರಕಾರ್ಮಿಕರಿಗೆ ನೀಡಿದರೆ ಸಮಸ್ಯೆ ಶೇ.80 ರಷ್ಟು ಬಗೆಹರಿದಂತಾಗುತ್ತದೆ ಎಂದರು.
ಎನ್‍ಎಂಕೆ ಶಾಲೆಯ ಕಾರ್ಯದರ್ಶಿ, ಲೋಕೇಶ್ ಮಾತನಾಡಿ, ಓಝೋನ್ ಪದರದ ಸವಕಳಿಗೆ ಮಾಲಿನ್ಯವನ್ನು ಅತಿ ದೊಡ್ಡ ಕಾರಣವೆಂದು ಪರಿಗಣಿಸಲಾಗಿದೆ. ಭೂಮಿಯ ವಾತಾವರಣದಲ್ಲಿ ಮಾಲಿನ್ಯ ಹರಡುತ್ತಿರುವುದು ಹಾನಿಕಾರಕ ಅಂಶಗಳಿದ್ದು ಇದರಿಂದಾಗಿ ಓಝೋನ್ ಪದರದಲ್ಲಿ ಭಾರಿ ಹಾನಿಯಾಗಿದೆ.ಜಗಳೂರು ಪಟ್ಟಣದ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ಹಸಿ ಕಸ, ಒಣ ಕಸ ವಿಂಗಡಣೆ ಕಾರ್ಯಕ್ರಮಕ್ಕೆ ಶಾಸಕ ಬಿ.ದೇವೇಂದ್ರಪ್ಪ ಚಾಲೆನೆ ನೀಡಿದರು.
ಭೂಮಿಯ ಸತ್ತ ರಕ್ಷಣಾತ್ಮಕ ಪದರಕ್ಕೆ ವಿವಿಧ ಅಪಾಯಕಾರಿ ಅನಿಲಗಳಿಂದ ಭೂಮಿಯನ್ನು ರಕ್ಷಿಸಲು ಪ್ರತಿಯೊಬ್ಬರೂ ಕೈ ಜೋಡಿಸಬೇಕು. ಅಟ್ಲಾಂಟ ಪ್ರದೇಶದಲ್ಲಿ ಓಝೋನ್‍ಗೆ ಹಾನಿಯಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಇದರಿಂದ ನೇರಳಾತೀತ ಕಿರಣಗಳು ಮನುಷ್ಯನ ದೇಹ ಪ್ರವೇಶಿಸುತ್ತವೆ. ಮುಂದೊಂದು ದಿನ ಭೂಮಿಯ ಮೇಲೆ ಮನುಷ್ಯ ಅಷ್ಟೇ ಅಲ್ಲ ಎಲ್ಲವೂ ನಾಶವಾಗುವ ಕಾಲ ದೂರವಿಲ್ಲ ಎಚ್ಚರ ಎಂದರು.ಸಂತೆ ಮೈದಾನದಲ್ಲಿ ಶಾಸಕ ಬಿ.ದೇವೇಂದ್ರಪ್ಪ ಪೌರಕಾರ್ಮಿಕರೊಂದಿಗೆ ಸ್ವಚ್ಛಗೊಳಿಸವ ಕಾರ್ಯ ಮಾಡಿದರು.
ಕಾರ್ಯಕ್ರಮದಲ್ಲಿ ಚೀಫ್‍ಆಫೀಸರ್ ಲೋಕ್ಯಾನಾಯ್ಕ್, ಪಪಂ ಸದಸ್ಯ ರಮೇಶ್‍ರೆಡ್ಡಿ, ಲುಕ್ಮಾನ್‍ವುಲ್ಲಾ ಖಾನ್, ಕರವೇ ಅಧ್ಯಕ್ಷ ಮಹಾಂತೇಶ್, ಅರಿಶಿಣಗುಂಡಿ ಮಂಜುನಾಥ್, ರವಿಕುಮಾರ್, ಸಣ್ಣತಾನಾಜಿ ಗೋಸಾಯಿ, ಶಾಂತಪ್ಪ, ಕುರಿ ಜಯಣ್ಣ, ಉಪನ್ಯಾನಸಕ ಎನ್.ಟಿ.ತಿಪ್ಪೇಸ್ವಾಮಿ, ಶೇಖ್ ಅಹಮದ್, ಮಹಮದ್ ಆಲಿ, ಆರೋಗ್ಯಾ ನಿರೀಕ್ಷಕ ಕಿಫಾಯತ್, ಪೌರಕಾರ್ಮಿಕರ ಅಧ್ಯಕ್ಷ ಬಸವರಾಜ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ನಿಮ್ಮ ಮನೆಯ ಕಸವನ್ನು ಬೇಕಾಬಿಟ್ಟಿ ಎಸೆಯಬೇಡಿ
ಪ್ರತಿ ತಿಂಗಳು ಮೂರನೇ ಭಾನುವಾರ ನಾನು ಪೌರಕಾರ್ಮಿಕರೊಂದಿಗೆ ಪಟ್ಟಣ ಸ್ವಚ್ಛಗೊಳಿಸುತ್ತೇನೆ. ದಯಮಾಡಿ ಪಟ್ಟಣದ ವಾಸಿಗಳು ನಿಮ್ಮ ಮನೆಯ ಕಸವನ್ನು ಬೇಕಾಬಿಟ್ಟಿ ಎಸೆಯಬೇಡಿ. ಕಸ ವಿಂಗಡಣೆ ಮಾಡಿ ಪೌರಕಾರ್ಮಿಕರಿಗೆ ನೀಡಿ ಎಂದು ಶಾಸಕ ಬಿ.ದೇವೇಂದ್ರಪ್ಪ ಮನವಿ ಮಾಡಿದರು.